Ad Widget .

ಮಂಗಳೂರು: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್ ಅವಿರೋಧ ಆಯ್ಕೆ

ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಕೋಡಿಕಲ್ , ಉಪಮೇಯರ್ ಆಗಿ ಬಿಜೆಪಿ ಬೆಂಬಲಿತ ಸದಸ್ಯೆ ಭಾನುಮತಿ ಆಯ್ಕೆ ಆಗಿದ್ದಾರೆ.

Ad Widget . Ad Widget .

ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಚುನಾವಣೆ ನಡೆದಿದ್ದು, ಮೇಯರ್ ಹುದ್ದೆಗೆ ಎಸ್ ಸಿ ಮೀಸಲಾತಿಯಡಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲದ ಕಾರಣ ಮೇಯರ್ ಆಯ್ಕೆ ಅವಿರೋಧವಾಗಿ ನಡೆಯಿತು.

Ad Widget . Ad Widget .

ಒಟ್ಟು 60 ವಾರ್ಡ್ ಗಳನ್ನು ಹೊಂದಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಮತ್ತು ಎಸ್ ಡಿ ಪಿ ಐ ಎರಡು ಸದಸ್ಯ ಬಲವನ್ನು ಹೊಂದಿದೆ.

Leave a Comment

Your email address will not be published. Required fields are marked *