Ad Widget .

‘ಚಂದ್ರಯಾನ-4’ಕ್ಕೆ ಸಚಿವ ಸಂಪುಟ ಅನುಮೋದನೆ

ಸಮಗ್ರ ನ್ಯೂಸ್: ಕೇಂದ್ರ ಸಚಿವ ಸಂಪುಟ ಚಂದ್ರನಲ್ಲಿಗೆ ಭಾರತೀಯ ಗಗನಯಾನಿಗಳನ್ನು ಕಳಿಸುವುದು,ಶುಕ್ರ ಗ್ರಹ ಅಧ್ಯಯನ ಹಾಗೂ ಅನಿಮೇಷನ್ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ಯೋಜನೆಗಳಿಗೆ ಸೆ.18 ರಂದು ಅನುಮೋದನೆ ನೀಡಿದೆ.

Ad Widget . Ad Widget .

ಭಾರತೀಯ ಗಗನಯಾನಿಗಳು ಚಂದಿರನ ಅಂಗಳದಲ್ಲಿ ಇಳಿದು, ಪುನಃ ಭೂಮಿಗೆ ಮರಳಲು ಅಗತ್ಯವಿರುವ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಪ್ರಾತ್ಯಕ್ಷೀಕೆ ಒಳಗೊಂಡ ‘ಚಂದ್ರಯಾನ-4’ ಬಾಹ್ಯಾಕಾಶ ಕಾರ್ಯಕ್ರಮಕ್ಕೂ ಸಂಪುಟ ಅನುಮೋದನೆ ನೀಡಿದೆ.

Ad Widget . Ad Widget .

ಬಾಹ್ಯಾಕಾಶ ಯೋಜನೆಗೆ ಅಗತ್ಯವಿರುವ ಗಗನನೌಕೆ ಅಭಿವೃದ್ಧಿ ಮತ್ತು ಅದರ ಉದಾವಣೆಯ ಹೊಣೆಯನ್ನು ಇಸ್ರೋ ನಿಭಾಯಿಸಲಾಗುವುದು. 2040ರ ವೇಳೆಗೆ ಈ ಉದ್ದೇಶ ಸಾಧನೆಗೆ ಬೇಕಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷ ಯೋಜನೆ,ಈ ಕಾರ್ಯದಲ್ಲಿ ದೇಶದ ಉದ್ದಿಮೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಭಾಗಿಯಾಗಲಿವೆ.

ಚಂದ್ರನ ಮೇಲ್ಮೈಯ ಶಿಲೆ, ಮಣ್ಣು ಮತ್ತಿತರ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಲು ಅಗತ್ಯವಿರುವ ತಂತ್ರಜ್ಞಾನದ ಪ್ರಾತ್ಯಕ್ಷಕೆ ನಡೆಸಲಾಗುವುದು. ಈ ಎಲ್ಲ ತಂತ್ರಜ್ಞಾನಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಶುಕ್ರ ಗ್ರಹದತ್ತ ಚಿತ್ತ: ಶುಕ್ರ ಗ್ರಹ ಕಕ್ಷೆಗೆ ಗಗನನೌಕೆಯೊಂದನ್ನು ಕಳಿಸಿ,ಅದರ ಮೇಲ್ಫ್,ವಾತಾವರಣದಲ್ಲಿನ ವಿವಿಧ ಪ್ರಕ್ರಿಯೆಗಳು ಹಾಗೂ ವಾತಾವರಣದ ಮೇಲೆ ಸೂರ್ಯನ ಪ್ರಭಾವ ಕುರಿತು ಅಧ್ಯಯನ ನಡೆಸುವುದಾಗಿ, ಶುಕ್ರ ಗ್ರಹ ಕಕ್ಷೆಗಾಮಿ ಕಾರ್ಯಕ್ರಮ’ಕ್ಕೆ ಕೂಡ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಐಐಟಿ ಹಾಗೂ ಐಐಎಂ ಮಾದರಿಯಲ್ಲಿಯೇ ಅನಿಮೇಷನ್‌ ವಿಷುವಲ್ ಎಫೆಕ್ಟರ್ ಗೇಮಿಂಗ್ ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ(ಎವಿಜಿಸಿ-ಎಕ್ಸ್‌ಆರ್) ಕ್ಷೇತ್ರಕ್ಕೆ ಸಂಬಂಧಿಸಿ ಉತ್ಕೃಷ್ಟತಾ ಕೇಂದ್ರ (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅನಿಮೇಷನ್ ವಿಷುವಲ್‌ ಎಫೆಕ್ಟರ್ ಗೇಮಿಂಗ್ ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Leave a Comment

Your email address will not be published. Required fields are marked *