Ad Widget .

HSPR ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ

ಸಮಗ್ರ ನ್ಯೂಸ್: ವಾಹನ ಸವಾರರಿಗೆ ಗುಡ್ ನ್ಯೂಸ್ ಎಂಬಂತೆ ಹೈಕೋರ್ಟ್ ಹೆಚ್‌ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ನ.20 ರವರೆಗೆ ವಿಸ್ತರಣೆ ಮಾಡಿದೆ. ಈ ಮೂಲಕ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

Ad Widget . Ad Widget .

ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್‌ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿಕೆ ಮಾಡಿದೆ. ಇದರ ಅರ್ಜಿ ವಿಚಾರಣೆ ನವೆಂಬರ್ 20 ಕ್ಕೆ ಮುಂದೂಡಲಾಗಿದ್ದು, ವಾಹನ ಸವಾರರಿಗೆ ರಿಲೀಫ್ ಸಿಕ್ಕಂತಾಗಿದೆ.

Ad Widget . Ad Widget .

ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಸಂಬಂಧ ಹೈಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣ ವಿಚಾರಣೆ ಸೆ.18ರಂದು ನಡೆಯಲಿರುವ ಕಾರಣ ಕೋರ್ಟ್ ನಿರ್ದೇಶನ ನೀಡುವವರೆಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ ಹಾಕದವರ ವಿರುದ್ಧ ಕ್ರಮ ಕೈಗೊಳ್ಳದಿರಲು ಸಾರಿಗೆ ಇಲಾಖೆ ನಿರ್ಧರಿಸಿತ್ತು, ಈ ನಿಟ್ಟಿನಲ್ಲಿ ಹೈಕೋರ್ಟ್ ನಿರ್ದೇಶನಕ್ಕಾಗಿ ಸರ್ಕಾರ ಕಾಯುತ್ತಿತ್ತು. ಇದೀಗ ವಾಹನ ಸವಾರರಿಗೆ ಗುಡ್ ನ್ಯೂಸ್ ಎಂಬಂತೆ ಹೈಕೋರ್ಟ್ ಹೆಚ್‌ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ನ.20 ರವರೆಗೆ ವಿಸ್ತರಣೆ ಮಾಡಿದೆ.

Leave a Comment

Your email address will not be published. Required fields are marked *