Ad Widget .

ಬೆಂಗಳೂರಲ್ಲಿ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ…!

ಸಮಗ್ರ ನ್ಯೂಸ್: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅವಘಡಗಳು ಒಂದಲ್ಲ ಒಂದು ನಡೆಯುತ್ತಲೆ ಇದೇ ಇಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಫ್ಲಾಟ್ ಫಾರ್ಮ್‌ನಿಂದ ಯುವಕನೊರ್ವ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

Ad Widget . Ad Widget .

ಬಿಹಾರ ಮೂಲದ 30 ವರ್ಷದ ಸಿದ್ದಾರ್ಥ್ ಎಂಬಾತ ಮೆಟ್ರೋ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾನೆ. ಮಧ್ಯಾಹ್ನ 2-20ರ ಸುಮಾರಿಗೆ ಘಟನೆ ನಡೆದಿದ್ದು, 2-20 ರಿಂದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನೇರಳೆ ಮಾರ್ಗದ ವೈಟ್ ಫೀಲ್ಡ್ ನಿಂದ ಚಲ್ಲಘಟ್ಟ ಮಾರ್ಗದಲ್ಲಿ ರೈಲು ಸ್ಥಗಿತಗೊಂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ರೈಲು ಬರುತ್ತಿದ್ದಂತೆ ಟ್ರ್ಯಾಕ್‌ಗೆ ಜಿಗಿದಿದ್ದ. ಘಟನೆಯ ನಂತರ ತಕ್ಷಣವೇ ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಅನ್ನು ನಿರ್ವಹಿಸಲಾಗಿದೆ.

Ad Widget . Ad Widget .

ಮೆಟ್ರೋ ಸ್ಟೇಷನ್ ಕಂಟ್ರೋಲರ್ ತಂಡದವರು ಕೂಡಲೇ ಯುವಕನನ್ನು ರಕ್ಷಿಸಿದ್ದಾರೆ. ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎಂಬ ಮಾಹಿತಿ ಇದೆ. ಈ ಸಂದರ್ಭದಲ್ಲಿ ಇಡೀ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳನ್ನು ಪುನರಾರಂಭಿಸಲಾಯಿತು. 2:13 ರಿಂದ 2.30 ರವರೆಗೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬದಲು ಮೈಸೂರು ರಸ್ತೆಯಲ್ಲಿ ಶಾರ್ಟ್ ಲೂಪ್‌ನಲ್ಲಿ 2 ರೈಲುಗಳನ್ನು ಓಡಿಸಲಾಯಿತು. ಅದಾದ ಬಳಿಕ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭವಾಯಿತು.

Leave a Comment

Your email address will not be published. Required fields are marked *