ಸಮಗ್ರ ನ್ಯೂಸ್: ದಾಳಿಂಬೆ ಪೌಷ್ಟಿಕಾಂಶದ ಹಣ್ಣಾಗಿದ್ದು,ದೇಹಕ್ಕೆ ಅಗತ್ಯವಾದ ವಿಟಮಿನ್-ಸಿ,ಫೋಲೇಟ್ ಮತ್ತು ಪೊಟ್ಯಾಸಿಯಮ್ ಅನ್ನು ಒದಗಿಸುತ್ತದೆ ಹಾಗೂ ಚರ್ಮವನ್ನು ಸುಂದರಗೊಳಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಹಣ್ಣು ತಿನ್ನುವುದರಿಂದ ದೇಹದಲ್ಲಿ ಬ್ಯಾಕ್ಟಿರಿಯಾದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದ್ರೋಗ,ಕ್ಯಾನ್ಸರ್ ಮತ್ತು ಮಧುಮೇಹಕ್ಕೂ ಸಹಕಾರಿ. ಉತ್ಕರ್ಷಣ ನಿರೋಧಕ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಬಿಪಿ ಸಮಸ್ಯೆಯನ್ನೂ ನಿಯಂತ್ರಿಸುತ್ತದೆ.
ದಾಳಿಂಬೆಯಲ್ಲಿ ನಾರಿನಂಶ ತುಂಬಿದೆ. ಕರುಳಿನ ಚಲನೆಯ ಪ್ರಕ್ರಿಯೆಯಲ್ಲಿ ಫೈಬರ್ ಸಹಾಯ ಮಾಡುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯಲ್ಲಿ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಅಲ್ಸರ್ ಸಮಸ್ಯೆ ದೂರವಾಗುತ್ತದೆ.
ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಬಿಳಿ ರಕ್ತ ಕಣಗಳ ಬೆಳವಣಿಗೆ ಹೆಚ್ಚುತ್ತದೆ. ಸನ್ ಟ್ಯಾನಿಂಗ್ ನಿಂದ ರಕ್ಷಸುವ ಸಂಯುಕ್ತಗಳನ್ನು ಒಳಗೊಂಡಿದೆ ಹಾಗೂ ನರವೈಜ್ಞಾನಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಅಂಶಗಳನ್ನು ಒಳಗೊಂಡಿದೆ.