Ad Widget .

ಸೆ.29 ರಿಂದ ಬಿಗ್ ಬಾಸ್ ಸೀಸನ್ 11| ಸುದೀಪ್‌ ನಿರೂಪಣೆ‌ ಮಾಡೋದು ಪಕ್ಕಾ

ಸಮಗ್ರ ನ್ಯೂಸ್: ಸಿನೆಮಾಗಳಿಗೆ ಸಮಯ ನೀಡಲು ಆಗುತ್ತಿಲ್ಲ ಎಂದು ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಲು ಹೊರಟ್ಟಿದ್ದ ಸುದೀಪ್ ಇದೀಗ ಮತ್ತೆ ಬಿಗ್ ಬಾಸ್ ಸೀಸನ್ 11 ರಲ್ಲಿ ನಿರೂಪಕರಾಗಿದ್ದಾರೆ.

Ad Widget . Ad Widget .

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಈ ಬಾರಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

Ad Widget . Ad Widget .

ಈ ಸೀಸನ್​ನಲ್ಲಿ ಆಯಂಕರ್​ ಬದಲಾಗುತ್ತಾರಾ ಎಂಬ ಅನುಮಾನಕ್ಕೂ ತೆರೆ ಬಿದ್ದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮ ಸೆಪ್ಟೆಂಬರ್ 29ರಿಂದ ಆರಂಭ ಆಗಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್​ ಅವರೇ ಆಯಂಕರ್​ ಆಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಅಪ್​ಡೇಟ್​ ನೀಡಲು ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಿಚ್ಚ ಸುದೀಪ್​ ಅವರು ಅಬ್ಬರಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಈಗಾಗಲೇ ಅನೇಕ ವ್ಯಕ್ತಿಗಳ ಹೆಸರು ಕೇಳಿಬರುತ್ತಿದೆ. ಈ ಬಾರಿ ಯಾರೆಲ್ಲ ಬಿಗ್​ ಬಾಸ್​ ಮನೆಯೊಳಗೆ ಕಾಲಿಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಸಿನಿಮಾ ಸೆಲೆಬ್ರಿಟಿಗಳು, ಕಿರುತೆರೆಯಲ್ಲಿ ಖ್ಯಾತಿ ಗಳಿಸಿದವರು, ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದವರು, ಪತ್ರಿಕೋದ್ಯಮದ ಖ್ಯಾತನಾಮರು.. ಹೀಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳು ಬರಲಿದ್ದಾರೆ.

Leave a Comment

Your email address will not be published. Required fields are marked *