ಹರಿಯಾಣ ವಿಧಾನಸಭಾ ಚುನಾವಣೆ/ ನಾನೂ ಕೂಡ ಸಿಎಂ ಆಕಾಂಕ್ಷಿ ಎಂದ ಬಿಜೆಪಿಯ ಅನಿಲ್‌ ವಿಜ್‌

ಸಮಗ್ರ ನ್ಯೂಸ್‌: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಗೆದ್ದರೆ ಹರಿಯಾಣದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಶಾಸಕ ಅನಿಲ್ ವಿಜ್ ಒತ್ತಾಯಿಸಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷವು ಈಗಾಗಲೇ. ಸ್ಪಷ್ಟಪಡಿಸಿರುವ ಸಮಯದಲ್ಲಿ ಶಾಸಕರ ಈ ಮಾತು ಗಮನಾರ್ಹವಾಗಿವೆ.

Ad Widget ... ..

ತಾನು ಹರಿಯಾಣದಲ್ಲಿ ಬಿಜೆಪಿಯ ಅತ್ಯಂತ ಹಿರಿಯ ಶಾಸಕನಾಗಿದ್ದು, ಪಕ್ಷದಿಂದ ಎಂದಿಗೂ ಏನನ್ನೂ ಕೇಳಿಲ್ಲ. ನಾನು 6 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜನರ ಬೇಡಿಕೆಯ ಮೇರೆಗೆ ಈ ಬಾರಿ ನನ್ನ ಹಿರಿತನದ ಆಧಾರದ ಮೇಲೆ ಸಿಎಂ ಹುದ್ದೆಗೆ ಬೇಡಿಕೆ ಇಡುತ್ತೇನೆ ಎಂದು ಅನಿಲ್ ವಿಜ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

Ad Widget

Leave a Comment

Your email address will not be published. Required fields are marked *