ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ನಕ್ಷತ್ರ ಹಾಗೂ ರಾಶಿಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಹಲವರು ಮುಂಜಾನೆ ವೇಳೆ ರಾಶಿಫಲಗಳ ಬಗ್ಗೆ ತಿಳಿದುಕೊಳ್ಳಲು ಉತ್ಸಹಿತರಾಗಿರುತ್ತಾರೆ. ಅಂತಹ ಓದುಗರಿಗಾಗಿ ಈ ವಾರದ ವಾರಭವಿಷ್ಯವನ್ನು ನೀಡಲಾಗಿದೆ. ದ್ವಾದಶ ರಾಶಿಗಳ ಈ ವಾರದ ಗೋಚಾರಫಲ ಏನು ಎಂಬುದನ್ನು ತಿಳಿಯೊಣ…
ಮೇಷರಾಶಿ:
ಕುಜನು ಸಸ್ಯಾಧಿಪತಿ ಆಗಿರುವುದರಿಂದ ಕಷ್ಟ-ನಷ್ಟ ಉಂಟಾಗಿ ನಾಡಿನಲ್ಲಿ ಎಲ್ಲ ಜಲಾಶಯ ಭರ್ತಿ ಆಗಿ ತುಂಬಿ ತುಳುಕುತ್ತಿವೆ. ಅಂದರೆ ಮೇಷ ರಾಶಿಯವರಿಗೆ ಕಷ್ಟ ಕಾರ್ಪಣ್ಯ ನಿಭಾಯಿಸುವ ಶಕ್ತಿಯನ್ನು ದೇವರೇ ಕರುಣಿಸುತ್ತಾನೆ. ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ. ಇಚ್ಛೆಗಳು ಪೂರ್ಣವಾಗುತ್ತವೆ.
ವೃಷಭ ರಾಶಿ:
ವೃಷಭ ರಾಶಿಯಲ್ಲಿ ಶುಕ್ರನ ಮನೆಯನ್ನು ಗುರು ಆಕ್ರಮಿಸಿರುವುದರಿಂದ ಈ ರಾಶಿಯವರಿಗೆ ಜನ್ಮ ಗುರು ತೊಂದರೆ ನೀಡುವುದಿಲ್ಲ. ಆದರೂ ನಿಮ್ಮ ಪ್ರಾರ್ಥನೆಯು ದಾರಿ ತೋರಿಸುತ್ತದೆ. ನಿಮ್ಮ ಗುರುಗಳಾಗಲಿ, ಮೂಲ ಗುರುವಾದ ತಂದೆಯನ್ನು ಪ್ರಾರ್ಥಿಸಿದರೂ ಕಾರ್ಯ ತೊಂದರೆ ಆಗುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮಿಥುನ ರಾಶಿ:
ಗುರು ಬಲ ಇಲ್ಲದಿದ್ದರೂ ನವಮದಲ್ಲಿ ಶನಿ ಇದ್ದಾನೆ. ವಿಶೇಷವಾದ ಕಾರ್ಯ ಭಾರ ನಡೆಸಿಕೊಡಲು ಗ್ರಹಗಳ ಬಲ ಇಲ್ಲದಿರುವುದರಿಂದ ದೈವ ಬಲ ಪಡೆಯಲು ಗುರುವನ್ನು ಪ್ರಾರ್ಥಿಸಿ. ನಿಮ್ಮ ನಡೆ ನುಡಿಯಿಂದ ಯಾರಿಗೂ ಮನಸ್ಸಿಗೆ ನೋವು ಉಂಟು ಮಾಡದೆ ಮೌನದಿಂದ ಎಲ್ಲವನ್ನೂ ನಿಭಾಯಿಸಿ. ಧನ್ವಂತರಿಯನ್ನು ಪ್ರಾರ್ಥಿಸಿ.
ಕಟಕ ರಾಶಿ:
ಏಕಾದಶದಲ್ಲಿ ಗುರು ಇದ್ದು ನಿಮ್ಮನ್ನು ಕಾಪಾಡುತ್ತಿರುವ ಏಕೈಕ ದೈವವೇ ಮಹಾದೇವನು ಎಂಬುವುದರಲ್ಲಿ ಸಂದೇಹ ಇಲ್ಲ. ಮಹಾನ್ ಕಾರ್ಯ ಸಾಧಿಸಿಕೊಳ್ಳಬಹುದು. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇಷ್ಟಾರ್ಥ ಸಿದ್ಧಿ, ಕಾರ್ಯ ಪ್ರಗತಿ ಪಡೆಯುವ ಕಾಲ. ಮಹಾದೇವ ಮಹೇಶ್ವರಿಯ ಪೂಜೆ ಇರಲಿ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಯಾವ ಗ್ರಹ ಬಲ ಇಲ್ಲದಿದ್ದರೂ ಛಲ ಮತ್ತು ಧೈರ್ಯವೇ ಕಾಪಾಡುತ್ತದೆ. ಕೆಲಸದಲ್ಲಿ ಪ್ರಗತಿ ಕಾಣಲು ಗುರು ಬಲ ಗ್ರಹ ಬಲ ಎಲ್ಲಕ್ಕಿಂತಲೂ ಧೈರ್ಯಂ ಸರ್ವತ್ರ ಸಾಧನಂ ಎಂದು ಸ್ಮರಿಸಿ ದೈವ ಬಲವನ್ನು ಹೆಚ್ಚಿಸಿಕೊಳ್ಳಲು ಸುಬ್ರಹ್ಮಣ್ಯನನ್ನು ಆರಾಧಿಸಿ ಮುಂದೆ ಸಾಗಿರಿ.
ಕನ್ಯಾ ರಾಶಿ:
ಮಹಾ ವಿಷ್ಣುವು ಮೊದಲು ಜಲ ಪ್ರಳಯವನ್ನು ಮಾಡಿ ಆನಂತರದಲ್ಲಿ ಆಕಾಶ ರೂಪಿಸಿ ಮಧ್ಯದಲ್ಲಿ ಮಾನವರನ್ನು, ಕನ್ಯೆಯನ್ನು ಸೃಷ್ಟಿಸಿದ್ದಾನೆ. ಅಲ್ಲಿಗೆ ನಾವು ಒಂದು ಕನ್ಯೆಯ ಪಾತ್ರ ಏನೆಂಬುದನ್ನು ಅರ್ಥೈಸಿಕೊಳ್ಳಬೇಕು. ಕನ್ಯೆಯನ್ನು, ಸುಹಾಸಿನಿಯನ್ನು ಪೂಜಿಸಿದರೆ ಅಷ್ಟ ಐಶ್ವರ್ಯವು, ಜನ್ಮ ಕೊಟ್ಟ ತಾಯಿಯನ್ನು ಪೂಜಿಸಿದರೆ ಸಾಕ್ಷಾತ್ ಪರಮೇಶ್ವರಿಯೇ ಎಲ್ಲವನ್ನೂ ಕೊಡುತ್ತಾಳೆ.
ತುಲಾ ರಾಶಿ:
ಈ ಜಗತ್ತನ್ನು ತೂಗಲು ತಕ್ಕಡಿಯೂ ಬೇಕು, ಕೃಷ್ಣನ ಅನುಗ್ರಹವೂ ಬೇಕು. ದೇವತೆಗಳು ಪಾಪ ಪುಣ್ಯ ಅಳೆದು ನಮ್ಮ ಪಾಲನ್ನು ಕೊಡುವುದರಲ್ಲಿ ಹಿಂಜರಿಯುವ ಪ್ರಸಂಗವೇ ಇರುವುದಿಲ್ಲ. ಕೇವಲ ಭಕ್ತಿಯಿಂದ ಅರ್ಪಿಸಿದ ಒಂದು ತುಳಸಿದಳದಿಂದ ಕೃಷ್ಣ ಪರಮಾತ್ಮನು ತೂಗಿದ್ದಿದೆ. ಅದೇ ಕೃಷ್ಣನನ್ನು ತುಳಸಿಯಿಂದ ಪೂಜಿಸಿ. ಕೃಷ್ಣನ ಸಹೋದರಿಯಾದ ದುರ್ಗೆಯನ್ನೂ ಪೂಜಿಸಿ.
ವೃಶ್ಚಿಕ ರಾಶಿ:
ಎಷ್ಟೇ ವರ್ಷಧಾರೆಯಾದರೂ ಭೂಮಿಯ ತಾಪವನ್ನು ತಗ್ಗಿಸುತ್ತದೆ. ಅಂದ ಮೇಲೆ, ನಿಮ್ಮ ದೈವ ಭಕ್ತಿ ಪುಣ್ಯ ಸಂಗ್ರಹ ಮಾಡಿ ಮಳೆಯನ್ನು ಬೆಳೆಯನ್ನು ಕೊಟ್ಟಂತೆ ನಿಮಗೆ ಧನ ಧಾನ್ಯ ವೃದ್ಧಿ ಸುಖಕರ ಸಮಯ ಬಂದು ಒದಗಿದೆ. ಇಷ್ಟಾರ್ಥ ಸಿದ್ಧಿಸುವ ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಮನಸಾರೆ ಧ್ಯಾನಿಸಿ ಪೂಜಿಸಿ.
ಧನಸ್ಸು ರಾಶಿ:
ಈ ಜಗತ್ತು ಆಕಸ್ಮಿಕ ಹಾಗೂ ವಿಸ್ಮಯದಿಂದ ಕೂಡಿದ ಸ್ವರೂಪದಲ್ಲಿದೆ. ಭಗವಂತನ ರಕ್ಷಣೆ ಇದ್ದರೆ ಬಂಡೆ ಬಿದ್ದರೂ ಬಂಡೆ ಪುಡಿ ಆಗುತ್ತದೆಯೇ ಹೊರತು ದೇಹವಲ್ಲ. ದೇಹವೇ ದೇವಾಲಯ ಎಂದು ತಿಳಿದು ನಿಮ್ಮ ಹೃದಯ ಮಂದಿರದಲ್ಲಿ ಮಹಾವಿಷ್ಣುವನ್ನು ಪೂಜಿಸಿ. ನಿಮ್ಮ ಆಕಾಂಕ್ಷೆ ಈಡೇರುವ ಕಾಲ ಬಂದಿದೆ. ಕೀರ್ತಿ ಧನವು ಸಿಗುವ ಕಾಲವಿದು.
ಮಕರ ರಾಶಿ:
ಶನಿಯ ಸಾಡೆಸಾತಿಯ ಸಮಯ ಕಳೆದು ಮುಂದೆ ಹೋಗುವುದರಲ್ಲಿ ಇದ್ದಾನೆ. ದೊಡ್ಡವರು ನಮ್ಮಲ್ಲಿದ್ದು, ಮನೆಯಿಂದ ಹೋಗುವಾಗ ಕೈಲಿದ್ದದ್ದನ್ನು ಮಕ್ಕಳಿಗೆ ಕೊಟ್ಟು ಹರಸುವ ಪರಿಪಾಠವು ನಮ್ಮಲ್ಲಿದೆ. ಹೊರಡುವ ಶನಿ ಭಕ್ತಿ ವೃದ್ಧಿಸಿ, ಸಮಸ್ಯೆಗೆ ಪರಿಹಾರ ಕೊಟ್ಟು ನಿಮ್ಮ ಬಾಳು ಸುಖಕರವಾಗಿ ಸಾಗುವಂತೆ ಮಾಡುತ್ತಾನೆ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.
ಕುಂಭ ರಾಶಿ:
ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನಕ್ಕೆ ಹೋದಾಗ ಬಾಕಿ ಎರಡೂವರೆ ವರ್ಷ ಗುರು ಮನೆಯಲ್ಲಿ ಇರುವುದರಿಂದ ದೈವ ಯೋಗದಿಂದ ತೃಪ್ತಿಕರ ಜೀವನ ನಡೆಸಲು ಯಾವ ಅಡ್ಡಿ ಆತಂಕವೂ ಇಲ್ಲ. ಶನಿಯನ್ನು ಪೂಜಿಸಿ. ಗುರು ದತ್ತಾತ್ರೇಯನನ್ನು ಆರಾಧಿಸಿ. ನಿಮ್ಮ ಸಮಯವು ಸುಧಾರಿಸುತ್ತದೆ.
ಮೀನ ರಾಶಿ:
ದ್ವಾದಶ ಶನಿಯು ಲಾಭ-ನಷ್ಟಗಳನ್ನೂ, ಸಂಕಟ-ದುಃಖಗಳನ್ನೂ, ತೊಳಲಾಟವನ್ನೂ ಕೊಟ್ಟಿರುತ್ತಾನೆ. ಅದಕ್ಕೆ ಚಿಂತೆಪಡುವುದು ಬೇಡ. ದೇವರು ಏನೇ ಕೊಟ್ಟರೂ ನಮ್ಮ ಹಿತಕ್ಕಾಗಿ ಕೊಡುತ್ತಾನೆ. ವಿಸ್ಮಯಕಾರಿ ಯಾವುದೋ ಗಂಡಾಂತರ ತಂದೊಡ್ಡುವ ವಿಚಾರ ಇದ್ದರೆ ದೇವರು ಶೀಘ್ರವಾಗಿ ಅದನ್ನು ಪರಿಹರಿಸಿ ಒಳಿತನ್ನು ಮಾಡುತ್ತಾನೆ. ಗುರು ಮನೆಗೆ ಬರುವ ಶನಿಯನ್ನು ಪ್ರತಿ ಶನಿವಾರ ಪೂಜಿಸಿ. ನೀಲಿ ಹೂವಿನಿಂದ ಅರ್ಚಿಸಿ. ಬಾಳೆ ಹಣ್ಣು, ಬೆಲ್ಲವನ್ನು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ. ಹಸುವಿಗೆ ಕಡಲೆ ಕಾಳು, ಕಡಲೆ ಬೀಜವನ್ನು ಆಹಾರವಾಗಿ ಕೊಟ್ಟು ಸುಖವನ್ನು ಕಂಡುಕೊಳ್ಳಿ.