ಸಮಗ್ರ ನ್ಯೂಸ್:ಮಲ್ಪೆ ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಹಾಗೂ ಡಬ್ಲ್ಯೂವಿಎಸ್ ಜಂಟಿ ಆಶ್ರಯದಲ್ಲಿ ಪುತ್ತೂರು ಯುವ ರೋಟರಿ ಕ್ಲಬ್ ಸಹಕಾರದೊಂದಿಗೆ ಮನೆ ನಾಯಿಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆಯ ಬಗ್ಗೆ ಚರ್ಚೆಯು ಸೆ.13 ರಂದು ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆಯು ಸೆ.18 ರಿಂದ 23 ರ ವರೆಗೆ ಮುರ ಸಮೀಪದ ಪೋಳ್ಯ ಖುಷಿ ಕಂಪೌಂಡ್ ನಲ್ಲಿ ಆರು ದಿನಗಳ ಕಾಲ ನಡೆಯಲಿದೆ ಎಂದು ಮಧ್ವರಾಜ್ ಎನಿಮಲ್ ಕೇರ್ ನ ಟ್ರಸ್ಟಿ ಮಮತಾ ರಾವ್ ತಿಳಿಸಿದ್ದಾರೆ.
ಸುಮಾರು 120 ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಮ್ಮ ಗುರಿಯಾಗಿದೆ. ಈ ವರ್ಷದಲ್ಲಿ ಇದು ಮೂರನೇ ಬಾರಿಗೆ ನಡೆಸುವುದು.ಈ ಚಿಕಿತ್ಸೆಯನ್ನು ಖ್ಯಾತ ಪಶುವೈದ್ಯಕೀಯ ವೈದ್ಯರಾದ ಡಾ.ಇಲೋನಾ ಓಟರ್ ನೀಡುವರು.
ಬಹುತೇಕ ಮನೆಯವರು ತಮ್ಮ ಮನೆಯ ನಾಯಿಗಳು ಇಡುವ ನಾಯಿ ಮರಿಗಳನ್ನು ಬೀದಿಯಲ್ಲಿ ಬಿಡುವುದರಿಂದ,ಪರಿಣಾಮ ನಾಯಿಗಳು ಸಾರ್ಜನಿಕರಿಗೆ,ವಾಹನ ಸವಾರರಿಗೆ ತೊಂದರೆ ಕೊಡಲು ಆರಂಭಿಸುತ್ತದೆ.ಬಳಿಕ ಇದು ದೂರಿನ ಮೂಲಕ ಪೊಲೀಸ್ ಠಾಣೆ ಏರುವ ಸಂಭವವಿರುತ್ತದೆ.ಈ ಮುಂಜಾಗ್ರತೆಗಾಗಿ ಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಬೀದಿ ನಾಯಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ತಿಳಿಸಿದರು.
ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವವರು 9902253064 ಈ ನಂಬರಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ.ರವಿಪ್ರಕಾಶ್, ರೋಟರಿ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಾಜಿ ಮಹಮ್ಮದ್, ಅಶ್ವಿನಿ ಕೃಷ್ಣನಾರಾಯಣ ಮುಳಿಯ ಉಪಸ್ಥಿತರಿದ್ದರು.
ನಾಯಿಗಳಿಗೆ ಅಲ್ಲ ಮೋದ್ಲು ಮನುಷ್ಯನಿಗೆ ಸಂತಾನಹರಣ ಚಿಕಿತ್ಸೆ ಮಾಡ್ಬೇಕು ಜನಸಂಖ್ಯೆ ನಿಯತ್ರಣಕ್ಕೆ ಬರುತ್ತೆ
ಪ್ರಕೃತಿ ನಾಶ ನ ತಡೆಗಟ್ಬಾವುದು