Ad Widget .

ರೊಟ್ಟಿ ಮುರಿದರೂ‌ ಬುದ್ದಿ ಕಲಿಯದ ದರ್ಶನ್| ಕ್ಯಾಮರಾ ಎದುರು ಮಿಡಲ್ ಫಿಂಗರ್ ತೋರಿ ಅಸಹ್ಯ ವರ್ತನೆ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್‌ ಅವರು ಪಶ್ಚಾತ್ತಾಪದ ದಿನಗಳನ್ನು ಕಳೆದಿದ್ದಾರೆ ಎಂಬ ಮಾತು ನಿಜಾನ? ಈ ಪ್ರಶ್ನೆ ಬರಲು ಕಾರಣ, ಅವರು ಕ್ಯಾಮೆರಾಗಳ ಮುಂದೆ ಅಸಹ್ಯ ಸಂಜ್ಞೆ ಮಾಡುವ ಮೂಲಕ ಮತ್ತದೇ ಚಾಳಿ ಮುಂದುವರೆಸಿರುವುದು.

Ad Widget . Ad Widget .

ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ ಅವರನ್ನು ಗುರುವಾರ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಸಹೋದರ ದಿನಕರ್‌ ತೂಗುದೀಪ ಅವರು ಭೇಟಿ ಮಾಡಲು ಬಂದಿದ್ದರು. ಅವರನ್ನು ನೋಡಲು ಪೊಲೀಸರ ಜೊತೆ ಬರುವಾಗ ತನ್ನ ಎರಡೂ ಕೈಗಳ ಮಧ್ಯೆ ಬೆರಳನ್ನು ಉದ್ದ ಮಾಡಿ ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗುತ್ತಿದೆ.

Ad Widget . Ad Widget .

ಮಾಧ್ಯಮದ ಕ್ಯಾಮೆರಾಗಳು ದರ್ಶನ್‌ ಅವರು ಪೊಲೀಸರ ಜೊತೆ ನಡೆದುಕೊಂಡು ಬರುವ ವೇಳೆ ಅವರನ್ನು ಸೆರೆಹಿಡಿಯುತ್ತಿರುವಾಗ, ದರ್ಶನ್‌ ತಮ್ಮ ಮಧ್ಯದ ಬೆರಳನ್ನು ಉದ್ದ ಮಾಡುವ ಮೂಲಕ ಅಸಹ್ಯವಾಗಿ ಸಂಜ್ಞೆ ಮಾಡಿದ್ದಾರೆ. ಅದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿಯೇ ಸೆರೆಯಾಗಿದೆ ಕೂಡ. ಅದೇನೆ ಇರಲಿ, ತಮ್ಮ ನಿಜವಾದ ದುರುಳತನವನ್ನು ಕ್ಯಾಮೆರಾಗಳ ಮುಂದೆ ತೋರಿಸಿರುವುದಕ್ಕೆ ಸಾಕಷ್ಟು ಕಾಮೆಂಟ್‌ ಕೂಡ ಬರುತ್ತಿವೆ.

ಇನ್ನು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಮತ್ತು ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರು ಜೈಲು ಶಿಕ್ಷೆಗೊಳಗಾಗಿ ಮೂರು ತಿಂಗಳು ಗತಿಸಿವೆ. ಅದೇನೆ ಇದ್ದರೂ, ದರ್ಶನ್‌ ವಿಚಾರದಲ್ಲಿ ಆಗಾಗ ಇಂತಹ ಸುದ್ದಿಗಳು ಹೊರಬರುತ್ತಲೇ ಇದೆ. ಹಿಂದೆ ಕೂಡ ಮೀಡಿಯಾದವರನ್ನು ಅಸಹ್ಯವಾಗಿಯೇ ನಿಂದಿಸಿದ್ದರು. ಈಗ ಜೈಲಲ್ಲಿದ್ದರೂ, ಅವರ ಅಹಂಕಾರ ಕಡಿಮೆಯಾಗಿಲ್ಲ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.

Leave a Comment

Your email address will not be published. Required fields are marked *