Ad Widget .

ಕನ್ನಡಕದ ಬದಲು ಐ ಡ್ರಾಪ್ಸ್‌/ ನಿಷೇಧ ಹೇರಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್‌: ನಲವತ್ತು ವರ್ಷದ ಆಸುಪಾಸಿನವರಿಗೆ ಸಮೀಪ ದೃಷ್ಟಿದೋಷ ಉಂಟಾಗಿ ಓದಲು ತೊಂದರೆಯಾದಾಗ ಅದಕ್ಕೆ ಕನ್ನಡಕದ ಬದಲು ಬಳಸಬಹುದು ಎನ್ನಲಾಗಿದ್ದ ಐ ಡ್ರಾಪ್ಸ್‌ಗೆ ಕೇಂದ್ರ ಸರ್ಕಾರ ಪರವಾನಗಿಯನ್ನು ಅಮಾನತುಗೊಳಿಸಿದೆ. ಮುಂಬೈ ಮೂಲದ ಎಂಟೋಡ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ತಾನು ‘ಪಿಲೋಕ್ಯಾರ್ಪೀನ್‌ ಹೈಡ್ರೋಕ್ಲೋರೈಡ್‌ ಆಪ್ತಾಲ್ಮಿಕ್‌ ಸೊಲ್ಯುಷನ್‌’ ಎಂಬ ಐ ಡ್ರಾಪ್ಸ್‌ ತಯಾರಿಸಿದ್ದು, ಅದನ್ನು ಕಣ್ಣಿಗೆ ಹಾಕಿಕೊಂಡರೆ ರೀಡಿಂಗ್‌ ಗ್ಲಾಸ್‌ನ ನೆರವಿಲ್ಲದೆ ಓದಬಹುದು ಎಂದು ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿತ್ತು.

Ad Widget . Ad Widget .

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ), ‘ನಿಮಗೆ ಈ ಔಷಧ ತಯಾರಿಸಿ, ಅದನ್ನು ದೃಷ್ಟಿದೋಷವಿರುವವರ ಚಿಕಿತ್ಸೆಗೆ ಬಳಸುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಆದರೆ ನೀವು ಈ ಔಷಧ ರೀಡಿಂಗ್‌ ಗ್ಲಾಸ್‌ಗೆ ಪರ್ಯಾಯ ಎಂದು ಪ್ರಚಾರ ಮಾಡಿದ್ದೀರಿ. ಹೀಗೆ ಪ್ರಚಾರ ಮಾಡುವುದಕ್ಕೆ ನಿಮಗೆ ಅನುಮತಿ ನೀಡಿರಲಿಲ್ಲ. ಇದರಿಂದ ಜನರಿಗೆ ತಪ್ಪು ಮಾಹಿತಿ ರವಾನೆಯಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಈ ಔಷಧದ ಉತ್ಪಾದನೆ ಮತ್ತು ಮಾರಾಟಕ್ಕೆ ನೀಡಿರುವ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿದೆ’ ಎಂದು ಆದೇಶಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *