Ad Widget .

ಬೆಂಗಳೂರು: ಗಾಂಜಾ ಮಾರಾಟಕ್ಕಿಳಿದ ವ್ಯಕ್ತಿ ಈಗ ಪೊಲೀಸರ ಅತಿಥಿ

ಸಮಗ್ರ ನ್ಯೂಸ್: ನಗರದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ತನ್ನ ಸಹೋದರಿಯ ಮದುವೆಯ ಖರ್ಚಿಗೆ ಪರಿಚಿತನೊಬ್ಬನ ಸಲಹೆಯಂತೆ ಗಾಂಜಾ ಮಾರಾಟವನ್ನು ಗುಪ್ತವಾಗಿ ನಡೆಸಿದ್ದಾನೆ.

Ad Widget . Ad Widget .

ಆರೋಪಿ ದ.ಕ. ಜಿಲ್ಲೆಯ ಪುತ್ತೂರು ಮೂಲದ ಬದ್ರುದ್ದೀನ್ ಎಂದು ತಿಳಿದುಬಂದಿದೆ. ಈತನಿಂದ 1 ಲಕ್ಷ ರೂ. ಮೌಲ್ಯದ 5 ಕೆ.ಜಿ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Ad Widget . Ad Widget .

ಈತ ಒಡಿಶಾಕ್ಕೆ ತೆರಳಿ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹೊಟೇಲ್‌ನಲ್ಲಿನ ಸಂಬಳದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಜೊತೆಗೆ ಸಹೋದರಿ ಮದುವೆಯ ಹೊಣೆಗಾರಿಕೆ ಇದ್ದ ಕಾರಣ ಗಾಂಜಾ ಮಾರಾಟ ದಂಧೆಗೆ ಇಳಿದಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಬೆಂಗಳೂರಿನ ಬಾಣಸವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *