Ad Widget .

ಸೆ.12: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ್ತಾರೋಗಣೆ ಹಿನ್ನೆಲೆ| ದೇವರ ದರ್ಶನ ಸಮಯದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ರಾಜ್ಯದ ಪ್ರಸಿದ್ಧ ಯಾತ್ರಾ‌ ಕ್ಷೇತ್ರ‌ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಇರುವುದರಿಂದ ಸೆ. 12ರಂದು ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

Ad Widget . Ad Widget .

ಸೆ. 12 ರ ಗುರುವಾರದಂದು ದೇವಾಲಯದ ಪೂರ್ವ ಸಂಪ್ರದಾಯದಂತೆ ನವಾನ್ನ ಪ್ರಸಾದ ಅಥವಾ ಪುದ್ವಾರ್ ಊಟ ಹಾಗೂ ಕದಿರು(ತೆನೆ) ಹಂಚಿಕೆ ನಡೆಯುವ ಕಾರಣ ಭಕ್ತಾದಿಗಳಿಗೆ 10 ಗಂಟೆಯ ನಂತರ ದರ್ಶನವಿರಲಿದೆ ಹಾಗೂ ಎಂದಿನಂತೆ ನಡೆಯುವ ಆಶ್ಲೇಷ ಬಲಿ ಪೂಜೆಯು ಬೆಳಿಗ್ಗೆ 9 ಗಂಟೆಗೆ ಶುರುವಾಗಿ 2 ಪಾಳಿಯಲ್ಲಿ ಮಾತ್ರವಿರಲಿದೆ.

Ad Widget . Ad Widget .

“ಹೊಸ್ತಾರೋಗಣೆ”(ನವಾನ್ನ ಪ್ರಸಾದ) ಕಾರ್ಯಕ್ರಮ ಸಂಬಂಧ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಹಾಗೂ ಕದಿರು(ತೆನೆ) ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಾತಃಕಾಲ ಗಂಟೆ 5.15 ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ಪೂರ್ವಾಹ್ನ ಗಂಟೆ 7.30 ಕ್ಕೆ ತೆನೆ ತರುವುದು, ಕದಿರು ಪೂಜೆ, ಗಂಟೆ 8 ರಿಂದ 9 ಗಂಟೆಯವರೆಗೆ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಲಿದೆ.

Leave a Comment

Your email address will not be published. Required fields are marked *