Ad Widget .

ಪ್ರೀತಿಸಿದ ಯುವತಿಗೆ ಕೈಕೊಟ್ಟು ಬ್ಲ್ಯಾಕ್ ಮೇಲ್| ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ದೂರು ದಾಖಲು

ಸಮಗ್ರ ನ್ಯೂಸ್: ಪ್ರೀತಿಸಿದ ಯುವತಿ ಕೈ ಕೊಟ್ಟ ಬಳಿಕ, ಆಕೆಯ ಖಾಸಗಿ ಪೋಟೋಗಳನ್ನು ಇಟ್ಟುಕೊಂಡು ಕೆಲ ತಿಂಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದ ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಾಗಿದೆ.

Ad Widget . Ad Widget .

ಬೆಂಗಳೂರಿನ ಪಶ್ಚಿಮ ವಿಭಾಗದ ಸೆನ್ ಠಾಣೆಯಲ್ಲಿ ದೂರು ನೀಡಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ತನಗೆ ಕಿರುತೆರೆ ನಟ ವರುಣ್ ಆರಾಧ್ಯ ಇನ್ಸ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ.
ಪರಿಚಯ ಸ್ನೇಹಕ್ಕೆ ತಿರುಗಿ, ಆ ಬಳಿಕ ತಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Ad Widget . Ad Widget .

ಕೆಲ ತಿಂಗಳ ಹಿಂದಿನಿಂದ ತಾನು ಮತ್ತು ವರುಣ್ ಆರಾಧ್ಯ ದೂರವಾಗಿದ್ದೆವು. ಈ ಬಳಿಕ ವರುಣ್ ಆರಾಧ್ಯ ತನ್ನ ಖಾಸಗಿ ಕ್ಷಣದ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಮನವಿ ಮಾಡಿದ್ದಾರೆ.

ಯುವತಿಯ ದೂರಿನ ಹಿನ್ನಲೆಯಲ್ಲಿ ಬೆಂಗಳೂರಿನ ಪಶ್ಟಿಮ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *