Ad Widget .

ಕನ್ನಡ ಬಿಗ್ ಬಾಸ್ 11 ಗೆ ಮುಹೂರ್ತ ಫಿಕ್ಸ್| ಕಾರ್ಯಕ್ರಮ ನಿರೂಪಕ ಯಾರು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಬಹು ದಿನಗಳಿಂದ ಕಾದಿದ್ದ ವೀಕ್ಷಕರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲೇ 11 ನೇ ಬಿಗ್ ಬಾಸ್ ಆಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಬಿಗ್ ಬಾಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ. ಸದ್ದಿಲ್ಲದೆ ಹೈದರಾಬಾದ್ ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.

Ad Widget . Ad Widget .

ಸೀಸನ್ 11 ಕ್ಕೆ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬ್ರೇಕ್:
ಈ ಮುಂಚೆ ಸೀಸನ್‌ 11ರಲ್ಲಿ ರಿಷಬ್‌ ಶೆಟ್ಟಿ ಅಥವಾ ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲ ವದಂತಿಗಳಿಗೆ ಫುಲ್‌ಸ್ಟಾಪ್‌ ಇಡಲಾಗಿದೆ. ಇದೇ ತಿಂಗಳ 23 ಕ್ಕೆ ಬಿಗ್‌ ಬಾಸ್‌ ತಂಡ ಪ್ರೆಸ್‌ ಮೀಟ್‌ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯುತ್ತಿದೆ.

Ad Widget . Ad Widget .

ಈ ಮುಂಚೆ ವಾಹಿನಿ ಹಂಚಿಕೊಂಡ ಪ್ರೊಮೋದಲ್ಲಿ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇಲ್ಲವಾಗಿತ್ತು ಹಾಗಾಗಿಯೇ ಕಿಚ್ಚ ಇರಲ್ಲ ಎನ್ನುವ ಗಾಸಿಪ್‌ ಶುರುವಾಗಿತ್ತು,

ಸ್ಪರ್ಧಿಗಳು ಯಾರೆಲ್ಲ?
ಬಿಗ್ ಬಾಸ್ ಸ್ಪರ್ಧಿಗಳಾಗಿ ಸೋಷಿಯಲ್ ಮೀಡಿಯಾ
influencer ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಕಿರುತೆರೆ ಸ್ಟಾರ್ ಗಳ ಜೊತೆ ಬಿಗ್ ಬಾಸ್ ನಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇಬಿಗ್ ಸೀಸನ್‌ಗೆ ಹೋಗೋದು ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ.

ಅಂತ್ಯ ಹಾಡುತ್ತಿವೆ ಧಾರಾವಾಹಿಗಳು!
ಕಲರ್ಸ್ ಕನ್ನಡದಲ್ಲಿ ಈಗಾಗಲೇ ಅಂತರಪಟ ಸೀರಿಯಲ್ ಬರ್ತಿದೆ. ಇದು ಕಳೆದ ವರ್ಷದಿಂದಲೂ ಪ್ರಸಾರ ಆಗುತ್ತಿದೆ. ಒಂದು ಹಂತಕ್ಕೆ ಚೆನ್ನಾಗಿಯೇ ಹೋಗುತ್ತಿದೆ. ಆದರೆ, ಈ ಸೀರಿಯಲ್ ಕೂಡ ಎಂಡ್ ಆಗುತ್ತಿದೆ. ಈ ಮೂಲಕ ಈ ಸೀರಿಯಲ್‌ ಬಿಗ್ ಬಾಸ್ ಸೀಸನ್‌-11 ಕ್ಕೆ ದಾರಿ ಮಾಡಿಕೊಡುತ್ತಿದೆ. ಕೆಂಡಸಂಪಿಗೆ ಸೀರಿಯಲ್ ಕೂಡ ಕೊನೆ ಹಂತಕ್ಕೆ ಬಂದಿದೆ. ಕಳೆದ ಎರಡು ವರ್ಷದಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಆದರೆ, ಕಲರ್ಸ್ ಕನ್ನಡ ಚಾನೆಲ್ ಈಗ ಈ ಸೀರಿಯಲ್‌ ಅನ್ನು ಎಂಡ್ ಮಾಡುತ್ತಿದೆ. ಹಾಗಾಗಿ ಈ ಸೀರಿಯಲ್ ಕೂಡ ಬಿಗ್ ಬಾಸ್‌ಗೆ ದಾರಿ ಮಾಡಿಕೊಡುತ್ತಿದೆ ಅಂತಲೂ ಹೇಳಬಹುದು.

Leave a Comment

Your email address will not be published. Required fields are marked *