ಬಿಗ್ ಬಾಸ್ ಕಾರ್ಯಕ್ರಮ ಸುದೀಪ್ ನಡೆಸಿಕೊಡ್ತಾರಾ? ಕಲರ್ಸ್ ಕನ್ನಡ ನೀಡಿದ ಶಾಕಿಂಗ್ ಸುದ್ದಿ ಏನು?

ಸಮಗ್ರ ನ್ಯೂಸ್ : ‘ಬಿಗ್ ಬಾಸ್ ಕನ್ನಡ ಸೀಸನ್ 10’ ಯಶಸ್ಸು ಕಂಡಿತ್ತು. ನಿರೂಪಕ ಸುದೀಪ್ ಅವರ ಸಿನಿಮಾ ಕೆಲಸಗಳಿಗೆ ಈ ಶೋ ಅಡಚಣೆ ಉಂಟುಮಾಡಿತ್ತು. ಅವರು ಈ ಬಾರಿ ಬಿಗ್ ಬಾಸ್​ನಿಂದ ಹೊರ ಹೋಗುತ್ತಾರೆ ಎಂದು ಹೇಳಲಾಗಿತ್ತು. ಈ ಬೆನ್ನಲ್ಲೇ ಪ್ರೋಮೋದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಾರಿ ಯಾರು ಬಿಗ್ ಬಾಸ್ ನಡೆಸಿಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಬಲವಾಗಿ ಕಾಡುತ್ತಿದೆ.

Ad Widget ... ..

ಕಿಚ್ಚ ಸುದೀಪ್ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಇನ್ನೂ ಮಾತುಕತೆ ನಡೆಯುತ್ತಿದೆ ಎಂದಿದ್ದರು. ಸುದೀಪ್ ಬರುತ್ತಾರೆ ಎಂದು ಕಾದು ಕೂತವರಿಗೆ ಕಲರ್ಸ್ ಕನ್ನಡ ಶಾಕ್ ಕೊಟ್ಟಿದೆ. ಸುದೀಪ್ ಬರೋದು ಅನುಮಾನವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

Ad Widget

ವಾರದ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಪ್ರೋಮೋ ರಿಲೀಸ್ ಆಗಿತ್ತು. ಈ ಪ್ರೋಮೋದಲ್ಲಿ ಕೇವಲ ಲೋಗೋ ಇತ್ತು. ಅಲ್ಲದೆ, ಹೊಸ ಸೀಸನ್ ಶೀಘ್ರವೇ ಆರಂಭ ಆಗಲಿದೆ ಎಂದು ಬರೆಯಲಾಗಿತ್ತು. #KichchaSudeep ಎಂದು ಬರೆಯುವ ಮೂಲಕ ಎಲ್ಲರಿಗೂ ಸರ್​ಪ್ರೈಸ್ ನೀಡಲಾಗಿತ್ತು. ಸುದೀಪ್ ಈ ಸೀಸನ್​ನಲ್ಲಿ ಇರುತ್ತಾರೆ ಅನ್ನೋದು ಬಹುತೇಕ ಖಚಿತವಾಯಿತು. ಆದರೆ, ಈಗ ಈ ಹ್ಯಾಶ್​ಟ್ಯಾಗ್ ತೆಗೆಯಲಾಗಿದೆ.

ಬಿಗ್ ಬಾಸ್ ಪ್ರೋಮೋನ ಕಲರ್ಸ್​ ಕನ್ನಡ ವಾಹಿನಿ ಇನ್​ಸ್ಟ್ರಾಗ್ರಾಮ್​ನಲ್ಲಿ ಪಿನ್ ಮಾಡಿ ಇಟ್ಟಿದೆ. ಈ ವಿಡಿಯೋಗೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಈಗ ಒಂದು ದಿನದ ಹಿಂದೆ ಈ ಪ್ರೋಮೋದ ಕ್ಯಾಪ್ಶನ್ ಎಡಿಟ್ ಮಾಡಲಾಗಿದ್ದು, ಸುದೀಪ್ ಹ್ಯಾಶ್​ಟ್ಯಾಗ್ ಕಾಣೆಯಾಗಿದೆ.

ಸುದೀಪ್ ಅವರು ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಿಗೆ ಅವರು ಮೂರ್ನಾಲ್ಕು ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ. ಇಷ್ಟೊಂದು ಸಿನಿಮಾ ಕೆಲಸಗಳು ಇರುವಾಗ ಅವರಿಗೆ ಬಿಗ್ ಬಾಸ್ ನಿರೂಪಣೆ ಮಾಡಲು ಸಾಧ್ಯವಿಲ್ಲ ಎಂದೆನಿಸಿತೋ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಕಾಯುತ್ತಿದ್ದಾರೆ. ಇತ್ತೀಚೆಗೆ ತಮಿಳು ಬಿಗ್ ಬಾಸ್​ಗೆ ಹೊಸ ನಿರೂಪಕನ ಆಗಮನ ಆಗಿದೆ. ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಅವರು ಆಗಮಿಸಿದ್ದಾರೆ.

Leave a Comment

Your email address will not be published. Required fields are marked *