ಮೋಹಕತಾರೆ ರಮ್ಯಾಗೆ ಕೂಡಿ ಬಂತೇ ಕಂಕಣ ಭಾಗ್ಯ!? ಸ್ಯಾಂಡಲ್ ವುಡ್ ನ ಗಲ್ಲಿಗಳಲ್ಲಿ ಕೇಳಿ ಬಂದ ಗಾಸಿಪ್

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಮೋಹಕತಾರೆ ರಮ್ಯಾ‌ ಮದುವೆಯಾಗಲಿದ್ದಾರೆ!. ಹೌದು ಹೀಗೊಂದು ಸುದ್ದಿ ಹರಿದಾಡುತ್ತಿದೆ.

Ad Widget ... ..

ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿ ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ.

Ad Widget

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮ್ಯಾ, ಇದೊಂದು ರೂಮರ್ಸ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಹಲವಾರು ಬಾರಿಯೂ ಮದುವೆ ಸುದ್ದಿ ಬಂದಾಗ ಅದನ್ನು ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಎಂದಿನಂತೆ ಈ ಬಾರಿಯೂ ಅದನ್ನೇ ಮಾಡಿದ್ದಾರೆ.

Leave a Comment

Your email address will not be published. Required fields are marked *