Ad Widget .

ದ.ಕ ಜಿಲ್ಲೆಯ 386 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆ| 30 ಕಡೆ ಅತಿ ಸೂಕ್ಷ್ಮ ಮೆರವಣಿಗೆ ಗುರುತು| ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 386 ಕಡೆ ಸಾರ್ವಜನಿಕ ಗಣೇಶೋತ್ಸವ ಜರಗಲಿದ್ದು ಇದರಲ್ಲಿ 30 ಕಡೆಗಳ ಗಣೇಶೋತ್ಸವ ಮೆರವಣಿಗೆಗಳನ್ನು ಅತೀ ಸೂಕ್ಷ್ಮವೆಂದು ಪೊಲೀಸ್‌ ಇಲಾಖೆ ಗುರುತಿಸಿದೆ.

Ad Widget . Ad Widget .

ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸೆ. 6ರಿಂದ ಸೆ.17ರ ವರೆಗೆ ಒಟ್ಟು 165 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಇದರಲ್ಲಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ ಮತ್ತು 79 ಸಾಮಾನ್ಯ ಗಣೇಶ ಪ್ರತಿಷ್ಠಾಪನಾ ಮೆರವಣಿಗೆಯೆಂದು ಪರಿಗಣಿಸಲಾಗಿದೆ.

Ad Widget . Ad Widget .

ದ.ಕ ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯಲ್ಲಿ ಸೆ. 6ರಿಂದ ಸೆ.13ರ ವರೆಗೆ ಒಟ್ಟು 221 ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಇದರಲ್ಲಿ 8 ಅತೀ ಸೂಕ್ಷ್ಮ, 53 ಸೂಕ್ಷ್ಮ ಹಾಗೂ 160 ಸಾಮಾನ್ಯ ಗಣೇಶೋತ್ಸವ ಪ್ರತಿಷ್ಠಾಪನಾ ಮೆರವಣಿಗೆಗಳು ಎಂಬುದಾಗಿ ಪರಿಗಣಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಹಾಗೂ ಪೊಲೀಸ್‌ ಅಧೀಕ್ಷಕ ಯತೀಶ್‌ ಎನ್‌. ತಿಳಿಸಿದ್ದಾರೆ.

ಗಣೇಶೋತ್ಸವ ಹಾಗೂ ಈದ್‌-ಮಿಲಾದ್‌ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಧರ್ಮದ ಮುಖಂಡರು, ಆಯೋಜಕರ ಶಾಂತಿ ಸಭೆ ನಡೆಸಲಾಗಿದೆ. ಪ್ರತಿಷ್ಠಾಪನೆಗೆ ಮೊದಲು ಅನುಮತಿ ಪಡೆಯಬೇಕು, ರಾತ್ರಿ 10 ಗಂಟೆಯ ಬಳಿಕ ಸುಡುಮದ್ದು/ಪಟಾಕಿ ಬಳಸುವಂತಿಲ್ಲ.

ಪೊಲೀಸ್‌ ಇಲಾಖೆಯಿಂದ ಅಂತಿಮಗೊಳಿಸಲಾದ ಮಾರ್ಗದಲ್ಲಿ ಮಾತ್ರ ಮೆರವಣಿಗೆ ಸಾಗಬೇಕು. ವಿಸರ್ಜನ ಮೆರವಣಿಗೆ ಸಮಯದಲ್ಲಿ ಇತರ ಧರ್ಮಗಳ ವಿರುದ್ಧ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಬಾರದು. ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸಬೇಕು. ಡಿ.ಜೆ. ಬಳಸಲು ಅವಕಾಶ ಇರುವುದಿಲ್ಲ ಮೊದಲಾದ ಸೂಚನೆಗಳನ್ನು ಪೊಲೀಸ್‌ ಇಲಾಖೆ ನೀಡಿದೆ.

Leave a Comment

Your email address will not be published. Required fields are marked *