Ad Widget .

ಅಭಯ ಪ್ರದಾಯಕ, ವಿಘ್ನ ನಿವಾರಕ ಸೌತಡ್ಕ ಗಣಪ| ಬಯಲು ಆಲಯದಲ್ಲೇ ಸಕಲರ ಪೊರೆಯುವ ಗಣನಾಯಕ

ಸಮಗ್ರ ನ್ಯೂಸ್: ಸೌತಡ್ಕ ಮಹಾಗಣಪತಿ ದೇವಸ್ಥಾನ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿ ಈ ಮಹಾಗಣಪತಿ ದೇವಸ್ಥಾನವಿದೆ. ಗೋಪುರವಿಲ್ಲದೇ, ಗರ್ಭಗುಡಿ ಇಲ್ಲದೇ, ಬಯಲಿನಲ್ಲೇ ಮಹಾಗಣಪತಿ ಎಲ್ಲರಿಗೂ ದರ್ಶನ ನೀಡಿ, ಎಲ್ಲರ ಆಸೆಗಳನ್ನು ಈಡೇರಿಸುತ್ತಲೇ ಬಂದಿದ್ದಾನೆ. ಇನ್ನು ಗಣಪತಿಯ ಅಕ್ಕ ಪಕ್ಕ ಸಿದ್ಧಿ ಬುದ್ಧಿಯ ಮೂರ್ತಿಗಳು ಇದೆ.

Ad Widget . Ad Widget .

ಇನ್ನು ಮಹಾಗಣಪತಿ ಹೇಗೆ ಸೌತಡ್ಕಕ್ಕೆ ಬಂದು ನೆಲೆಸಿದ ಎಂದು ನೋಡುವುದಾದರೆ, ಈ ಸ್ಥಳದಲ್ಲಿ ಮೊದಲು ಒಂದು ಗಣೇಶನ ದೇವಸ್ಥಾನವಿತ್ತು. ಆದರೆ ಅದು ಬರೀ ರಾಜಮನೆತನದವರಿಗೆ ಮಾತ್ರ ಸೀಮಿತವಾಗಿತ್ತು. ರಾಜ ಮನೆತನದವರಷ್ಟೇ ಆ ದೇವರ ದರ್ಶನ ಮಾಡಬಹುದಿತ್ತು. ಆದರೆ ಶತ್ರುಗಳು ಬಂದು ದಾಳಿ ಮಾಡಿ, ದೇವಸ್ಥಾನ ಧ್ವಂಸ ಮಾಡಿದರು.

Ad Widget . Ad Widget .

ಹಲವು ವರ್ಷಗಳ ಕಾಲ, ಈ ಕಾಡಿನಲ್ಲಿ ಗಣಪ ಪೂಜೆ ಇಲ್ಲದೇ, ಯಾರ ಕಣ್ಣಿಗೂ ಕಾಣಿಸದೇ, ಮುಚ್ಚಿಹೋಗಿದ್ದ. ಆದರೆ ಒಂದು ದಿನ ಗೋಪಾಲಕರಿಗೆ ಸಿಕ್ಕ ಈ ಗಣಪನನ್ನು, ಅವರು ಈ ಬಯಲಿನಲ್ಲಿ ತಂದು ಪ್ರತಿಷ್ಠಾಪಿಸಿದರು. ಮತ್ತು ಗಣಪತಿಗೆ ನೈವೇದ್ಯವಾಗಿ, ತಾವು ಬೆಳೆದ ಸೌತೇಕಾಯಿ ಅರ್ಪಿಸುತ್ತಿದ್ದರು. ಇದೇ ಕಾರಣಕ್ಕೆ ಈ ದೇವರಿಗೆ ಸೌತಡ್ಕ ಮಹಾಗಣಪತಿ ಎಂದು ಹೆಸರು ಬಂದಿತು.

ಇನ್ನು ಈ ಗಣಪತಿಗೊಂದು ದೇವಸ್ಥಾನ ಕಟ್ಟಬೇಕು ಎಂದು ಕೆಲವರು ನಿರ್ಧಾರ ಮಾಡಿದರೂ ಕೂಡ, ಅವರ ಕನಸಿನಲ್ಲಿ ಬಂದ ಗಣಪ, ತನಗೆ ದೇವಸ್ಥಾನ ಬೇಡ. ನಾನು ಬಯಲಿನಲ್ಲೇ ಇದ್ದು, ಎಲ್ಲರಿಗೂ ದರ್ಶನ ನೀಡುತ್ತೇನೆ ಎಂದು ತನ್ನ ನಿರ್ಧಾರ ಹೇಳಿದ. ಹಾಗಾಗಿ ಇಲ್ಲಿ ದೇವಸ್ಥಾನ ಕಟ್ಟಲಾಗಿಲ್ಲ.

ಇನ್ನು ನೀವು ಯಾವುದಾದರೂ ಹರಕೆ ಹೊತ್ತು, ಘಂಟೆ ಕಟ್ಟಿದರೆ, ಆ ಹರಕೆ ಕೆಲವೇ ದಿನಗಳಲ್ಲಿ ಈಡೇರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಗಣಪತಿಯನ್ನು ಗಂಟೆ
ಗಣೇಶ ಅಂತಲೂ ಕರಿಯುತ್ತಾರೆ. ಇನ್ನು ನೀವು ಇಲ್ಲಿ ಭೇಟಿ ನೀಡಿದರೆ, ಇಲ್ಲಿ ಸಿಗುವ ಅವಲಕ್ಕಿ ಪಂಚಕಜ್ಜಾಯ ಪ್ರಸಾದವನ್ನು ತಪ್ಪದೇ ಸ್ವೀಕರಿಸಿ.

Leave a Comment

Your email address will not be published. Required fields are marked *