Ad Widget .

ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿಯ ಇಬ್ಬರು ವೈದ್ಯೆಯರು ಆಯ್ಕೆ

ಸಮಗ್ರ ನ್ಯೂಸ್: ಈ ಬಾರಿಯ ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿ ಇಬ್ಬರು ವೈದ್ಯ ಬೆಡಗಿಯರು ಆಯ್ಕೆಯಾಗಿದ್ದಾರೆ.‌ ಫಿಲಿಪ್ಪಿನ್ಸ್​​ನಲ್ಲಿ ಈ ವರ್ಷಾಂತ್ಯ ನಡೆಯುವ ಸೌಂದರ್ಯ ಸ್ಪರ್ಧೆಗೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮತ್ತು ಡಾ.ಶ್ರುತಿ ಬಲ್ಲಾಳ್ ಆಯ್ಕೆಯಾಗಿದ್ದಾರೆ.

Ad Widget . Ad Widget .

ಈಚೆಗೆ ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ನಡೆದ ಮಿಸ್ ಆಯಂಡ್ ಮಿಸೆಸ್ ಇಂಡಿಯಾದ 8ನೇ ಆವೃತ್ತಿಯ ಫ್ಯಾಷನ್‌ ಶೋ ಕಿರೀಟವನ್ನು ಮುಡಿಗೇರಿಸಿಕೊಂಡು, ಇವರು ಅಂತಾರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಂಡಿಪೆಂಡೆಂಟ್ ಇಂಡಿಯಾ ಇಂಟರ್ ನ್ಯಾಷನಲ್​ ವಿಭಾಗದಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್, ಅರ್ಥ್ ಇಂಡಿಯಾ ಇಂಟರ್​ನ್ಯಾಷನಲ್​​ ವಿಭಾಗದಲ್ಲಿ ಡಾ.ಶ್ರುತಿ ಬಲ್ಲಾಳ್ ಅವರು ವಿಜೇತರಾಗಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋದಲ್ಲಿ ಪಾಲ್ಗೊಂಡಿದ್ದರು.

Ad Widget . Ad Widget .

ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮಂಗಳೂರಿನಲ್ಲಿ ಹೆರಿಗೆ ತಜ್ಞೆಯಾಗಿದ್ದಾರೆ. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಾಡೆಲಿಂಗ್​​ನಲ್ಲಿ ಆಸಕ್ತಿ ಹೊಂದಿರುವ ನಿಶಿತಾ ಮಂಗಳೂರಿನಲ್ಲಿ ನಡೆದ ಮೊದಲ ವೈದ್ಯರ ಫ್ಯಾಷನ್ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಆ ಬಳಿಕ ನಿರಂತರವಾಗಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ, ಡಾ.ಶ್ರುತಿ ಬಲ್ಲಾಳ್​ ಅವರೂ ವಿವಾಹಿತರಾಗಿದ್ದು, ಇಬ್ಬರು ಮಕ್ಕಳ ತಾಯಿ. ಮಧುಮೇಹ ತಜ್ಞೆಯಾಗಿರುವ ಇವರು ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವೈದ್ಯ ಕುಟುಂಬದ ಶ್ರುತಿ ಮಾಡೆಲಿಂಗ್​​ನಲ್ಲಿ ತೊಡಗಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಅರ್ಥ್ ಇಂಟರ್​​ನ್ಯಾಷನಲ್, ಮಿಸೆಸ್ ಇಂಡಿಯಾ ಕರ್ನಾಟಕ ವಿವಾಸಿಯಸ್, ಮಿಸೆಸ್ ಇಂಡಿಯಾ ಕರ್ನಾಟಕ ಇನೊವೇಟಿವ್ ಫರ್ಪಾಮರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನವೆಂಬರ್​​ನಲ್ಲಿ ಫಿಲಿಫೈನ್ಸ್​​ನಲ್ಲಿ ನಡೆಯುವ ಇಂಡಿಪೆಂಡೆಂಟ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಪಾಲ್ಗೊಂಡರೆ, ಡಿಸೆಂಬರ್​ನಲ್ಲಿ ಅಲ್ಲಿಯೇ ನಡೆಯುವ ಅರ್ಥ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಡಾ.ಶ್ರುತಿ ಬಲ್ಲಾಳ್ ಭಾಗವಹಿಸಲಿದ್ದಾರೆ.

Leave a Comment

Your email address will not be published. Required fields are marked *