ಸುಬ್ರಮಣ್ಯ: ರಸ್ತೆ ಗುಂಡಿ ಅಳತೆ ಮಾಡಿ ಆಕ್ರೋಶ ಹೊರಹಾಕಿದ ನಾಗರೀಕರು

ಸಮಗ್ರ ನ್ಯೂಸ್: ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಬಳಿ ಹೆದ್ದಾರಿಯಲ್ಲಿ ಬೃಹತ್‌ ಹೊಂಡ ನಿರ್ಮಾಣಗೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಜತೆಗೆ ಸಂಚಾರಕ್ಕೂ ಕಷ್ಟವಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

Ad Widget ... ..

ಹೆದ್ದಾರಿಯ ಹೊಂಡ- ಗುಂಡಿಗಳನ್ನು ದುರಸ್ತಿ ಮಾಡದೇ ಇರುವ ಬಗ್ಗೆ ಸಾರ್ವಜ ನಿಕರು ಆಕ್ರೋಶ ವ್ಯಕ್ತಪಡಿಸಿ, ಹೊಂಡಕ್ಕೆ ಅಳತೆ ಮಾಪಕ ಹಿಡಿದು ಈ ಹೊಂಡ ಎಷ್ಟು ಅಗಲ ಹಾಗೂ ಆಳ ಇದೆ ಎಂದು ಅಳೆಯುವ ಮೂಲಕ ವ್ಯಂಗ್ಯವಾಗಿ ಅಸಮಾಧಾನ ಹೊರಹಾಕಿ ಗಂಭೀರತೆಯನ್ನು ತೋರಿಸಿ, ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.

Ad Widget

ಸೀತಾರಾಮ ಗೌಡ, ದಿನೇಶ್‌, ಉಮೇಶ್‌ ಮತ್ತಿತರರು ಹೊಂಡ ಅಳತೆ ಯನ್ನು ಪತ್ತೆ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿನ ಹೊಂಡ-ಗುಂಡಿಗಳನ್ನು ತಪ್ಪಿಸಲು ಹೋದ ವೇಳೆ ಅಪಘಾತಗಳು, ನಿಯಂತ್ರಣ ತಪ್ಪಿ ಅವಾಂತರಗಳೂ ನಡೆ ಯುತ್ತಿದ್ದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿ ಸಲಾಗಿದೆ. ಕೂಡಲೇ ಹೆದ್ದಾರಿ ಹೊಂಡ-ಗುಂಡಿ ಮುಚ್ಚಿ ದುರಸ್ತಿ ಮಾಡುವಂತೆ ಆಗ್ರಹಿಸಲಾಗಿದೆ.

Leave a Comment

Your email address will not be published. Required fields are marked *