Ad Widget .

ಮಂಗಳೂರು: ರಿಕ್ಷಾ ಪಾರ್ಕಿಂಗ್ ನಲ್ಲಿ ಕ್ಯೂನಲ್ಲಿರುವಾಗಲೇ ಹೃದಯಾಘಾತ| ಆಟೋ ಚಾಲಕ ಸಾವು

ಸಮಗ್ರ ನ್ಯೂಸ್: ರಿಕ್ಷಾ ಪಾರ್ಕ್ ನಲ್ಲಿ ಕ್ಯೂನಲ್ಲಿರುವಾಗಲೇ ಆಟೋ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿ ನಡೆದಿದೆ.

Ad Widget . Ad Widget .

ಮಂಗಳೂರಿನ ಬಜಾಲ್ ವಿದ್ಯಾನಗರ ನಿವಾಸಿ ಇಕ್ಬಾಲ್(47) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ರಿಕ್ಷಾ ಪಾರ್ಕ್ ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಕ್ಯೂನಲ್ಲಿ ಆಟೋ ನಿಲ್ಲಿಸಿ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Ad Widget . Ad Widget .

ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ಇಕ್ಬಾಲ್ ಅವರನ್ನು ತಕ್ಷಣವೇ ಇತರ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *