Ad Widget .

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಜಾವೆಲಿನ್ ನಲ್ಲಿ ಸುಮಿತ್ ಆಂಟಿಲ್ ಪರಾಕ್ರಮ

ಸಮಗ್ರ ನ್ಯೂಸ್ : ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರಿಂದ ಇಂದು ಸಹ ಚಿನ್ನದ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ನಲ್ಲಿ ಇದ್ದಾಗ ಬರೆಯುವ ಮೂಲಕ ಸುಮಿತ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

Ad Widget . Ad Widget .

ಇದೀಗ ಭಾರತಕ್ಕೆ ಚಿನ್ನದ ಪದಕ ಗೆಲ್ಲುವಲ್ಲಿ ಸುಮಿತ್ ಆಂಟಿಲ್ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಸುಮಿತ್ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದೂ, ಈ ಬಾರಿಯೂ ದಾಖಲೆಯೊಂದಿಗೆ ಬಂಗಾರದ ಪದಕದ ಬೇಟೆ ಮುಂದುವರಿಸಿದ್ದಾರೆ.

Ad Widget . Ad Widget .

ಸುಮಿತ್ ಜಾವೆಲಿನ್ ಥ್ರೋ F64 ಅಂತಿಮ ಹಂತದಲ್ಲಿ 70.59 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರೆ, ಶ್ರೀಲಂಕಾದ ದುಲಾನ್ 67.03 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗೆದ್ದರು. ಇನ್ನು ಆಸ್ಟ್ರೇಲಿಯಾದ ಬುರಿಯಾನ್ 64.89 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಕಂಚಿನ ಪದಕವನ್ನು ಮೂಡಿಗೇರಿಸಿ ಕೊಂಡಿದ್ದಾರೆ.

ಸುಮಿತ್ ಅವರಿಗೆ ಬಾಲ್ಯದಿಂದ ಕುಸ್ತಿಯ ಬಗ್ಗೆ ಆಸಕ್ತಿ ಹೊಂದಿದ್ದು. ಕುಸ್ತಿಪಟು ಆಗಬೇಕು ಎಂದು ಆಸೆಯಿಂದ ಅದಕ್ಕಾಗಿ ಶ್ರಮಿಸುತ್ತಿದ್ದರು. ಆದರೆ ದುರಾದೃಷ್ಟ 2015 ರಲ್ಲಿ ಸುಮಿತ್ ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿ, ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು.

ಮುಂದೆ ಇವರಿಗೆ ಕೃತಕ ಕಾಲಿನ ಜೋಡಣೆಯಾಯಿತು. ಇದರಿಂದ ಕುಸ್ತಿಪಟುವಾಗುವ ಇವರ ಕನಸು ಭಗ್ನವಾಯಿತು. ಸುಮಿತ್ ಅವರಿಗೆ ಈ ಸಮಯದಲ್ಲಿ ಪ್ಯಾರಾಲಿಂಪಿಕ್ಸ್ ನ ಒಲವು ಮೂಡಿತು. ಈ ಬಗ್ಗೆ ಭಾರತದ ಕೋಚ್ ವೀರೇಂದ್ರ ಧಂಖರ್ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸಿದಾಗ, ಅವರು ಜಾವೆಲಿನ್ ಕೋಚ್ ನವಲ್ ಸಿಂಗ್ ರನ್ನು ಸುಮಿತ್ ಗೆ ಪರಿಚಯಿಸಿದರು. ಆ ಬಳಿಕ ಸತತ ಪ್ರಯತ್ನದ ಫಲವಾಗಿ ಸುಮಿತ್ ಆಂಟಿಲ್ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾಲಿಂಪಿಕ್ಸ್ ನಲ್ಲಿ ಮಿಂಚುತ್ತಿದ್ದಾರೆ.

Leave a Comment

Your email address will not be published. Required fields are marked *