Ad Widget .

”ಸಾರ್ ಒಂದೈವತ್ತು ರೂಪಾಯಿ ಕೊಡಿ…”| ಗಣೇಶ ಹಬ್ಬಕ್ಕೆ ಡಿಸಿಎಂ ಜೊತೆಗೇ ಚಂದಾ ವಸೂಲಿಗಿಳಿದ ಮಕ್ಳು| ಆಮೇಲೇನಾಯ್ತು ಗೊತ್ತಾ?

ಸಮಗ್ರ ನ್ಯೂಸ್: ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ಹಬ್ಬಕ್ಕೆ ತಯಾರಿ ಭರ್ಜರಿಯಾಗಿ ಸಾಗಿದೆ. ಗಣೇಶನನ್ನು ಕೂರಿಸಲು ಈಗಾಗಲೇ ಏರಿಯಾಗಳಲ್ಲಿ ಚಪ್ಪರ ಹಾಕಲಾಗುತ್ತಿದ್ದು, ಇದಕ್ಕಾಗಿ ಹಣ ಸಂಗ್ರಹವೂ ಜೋರಾಗಿ ಸಾಗಿದೆ. ಇದೀಗ ಗಣೇಶ ಕಲೆಕ್ಷನ್‌ ವಿಚಾರವು ಡಿ.ಕೆ.ಶಿವಕುಮಾರ್‌ ಅವರ ಅಂಗಳದರೆಗೂ ತಲುಪಿರುವುದು ಸದ್ಯ ಗಮನ ಸೆಳೆದಿದೆ.

Ad Widget . Ad Widget .

ರಸ್ತೆಗಳಲ್ಲಿ ಗಣೇಶನನ್ನ ಕೂರಿಸುವ ವಿಚಾರವಾಗಿ ಚಂದಾ ವಸೂಲಿ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಣ ಸಂಗ್ರಹದ ವಿಚಾರವಾಗಿ ಯಾರನ್ನೂ ಬಲವಂತ ಮಾಡಬಾರದು ಎಂದು ನಿನ್ನೆಯಷ್ಟೇ ಪೊಲೀಸರು ಹೇಳಿದ್ದಾರೆ. ಆದರೆ, ಇಂದು ಮಕ್ಕಳ ಗ್ಯಾಂಗ್‌ವೊಂದು ಸೀದಾ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬಳಿಯೇ ಗಣೇಶ ಕೂರಿಸಲು ದುಡ್ಡು ಕೇಳಿರುವ ಪ್ರಸಂಗ ನಡೆದಿದೆ.

Ad Widget . Ad Widget .

ಇಂದು ಕನಕಪುರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್‌ ನಡೆಸಿದರು. ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿದ್ದಾಗ ಮಕ್ಕಳ ಗುಂಪೊಂದು ಸಾಲಿನಲ್ಲಿ ನಿಂತಿತ್ತು. ಏನೋ ಸಮಸ್ಯೆ ಇರಬಹುದು ಎಂದು ಹತ್ತಿರಕ್ಕೆ ಕರೆದು ಕೇಳಿದಾಗ, ಸಾರ್‌ ನಮ್‌ ಏರಿಯಾದಲ್ಲಿ ಗಣೇಶ ಕೂರುಸ್ತಿದೀವಿ..ಒಂದು 50 ರೂಪಾಯಿ ಕೊಡಿ ಸಾರ್‌…ʼʼ ಎಂದು ಡಿ.ಕೆ.ಶಿವಕುಮಾರ್‌ ಅವರ ಬಳಿ ಚಂದಾ ಕೇಳಿದರು.

ಮಕ್ಕಳೆಲ್ಲ ಡಿ.ಕೆ.ಸಾರ್‌ ನಮಗೆ ದುಡ್ಡು ಕೊಡ್ತಾರೆ ಅನ್ನೋ ಖುಷಿಯಲ್ಲೇ ಇದ್ದರು. ಆದರೆ, ಮಕ್ಕಳಿಗೆ ಮಾತಿಗೆ ನಕ್ಕ ಡಿ.ಕೆ.ಶಿವಕುಮಾರ್‌, ಆಯ್ತು..ಎಂಪಿ ಬರ್ತಾರೆ, ಅವರೇ ದುಡ್‌ ಕೊಡ್ತಾರೆ ನಡೀರಿ, ನಡೀರಿ..ʼ ಎಂದು ಕಳಿಸಿಬಿಟ್ಟರು. ಇದರಿಂದ ಮಕ್ಕಳೆಲ್ಲ ಬೇಸರದಿಂದ ಅಲ್ಲಿಂದ ಹೊರಟು ಹೋಗಿರುವ ಹಾಸ್ಯಮಯ ಪ್ರಸಂಗ ನಡೆಯಿತು. ಇನ್ನು ಮಕ್ಕಳು ನೇರವಾಗಿ ಡಿಕೆಶಿ ಬಳಿ ಕೇಳಿದ್ದಕ್ಕೆ ಜನಸ್ಪಂದನದಲ್ಲಿದ್ದ ಜನರೆಲ್ಲ ಒಂದು ಕ್ಷಣ ನಗೆಗಡಲಲ್ಲಿ ತೇಲಾಡಿದರು.

ಹಬ್ಬಕ್ಕೂ ಒಂದೆರಡು ವಾರಗಳ ಮುಂಚೆಯೇ ಗಣಪತಿ ಕೂರಿಸೋ ಹುಡುಗರು ಗುಂಪು ಗುಂಪಾಗಿ ರಸ್ತೆಗಳಲ್ಲಿ ನಿಂತು ಹಣ ಸಂಗ್ರಹ ಮಾಡೋದು ಅಂದಿನಿಂದಲೂ ನಡೆದುಕೊಂಡು ಬಂದಿರೋ ಅನ್‌ಅಫೀಶಿಯಲ್‌ ಪದ್ಧತಿ ಎಂದೇ ಹೇಳಬಹುದು. ಆದರೆ, ಈ ಸಲ ಗಣಪತಿ ಹಬ್ಬಕ್ಕೆ ಚಂದಾ ವಸೂಲಿ ಮಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನುವುದು ನೆನಪಿರಲಿ. ಹಬ್ಬದ ಹೆಸರಲ್ಲಿ ಏನಾದರೂ ಸಾರ್ವಜನಿಕರ ಹತ್ತಿರ ಜೋರು ಮಾಡೋಕೆ ಹೋದ್ರೆ, ಸೀದಾ ಜೈಲಿಗೂ ಕಳೆಸೋಕೆ ಪೊಲೀಸರು ರೆಡಿಯಾಗಿದ್ದಾರೆ.

Leave a Comment

Your email address will not be published. Required fields are marked *