Ad Widget .

ಸಚಿವ ಆಗಿ ಆಗಿ ದಣಿದಿದ್ದೇನೆ, ಇನ್ನು ಸಿಎಂ ಆಗಬೇಕಷ್ಟೆ: ಆರ್.ವಿ ದೇಶಪಾಂಡೆ

ಸಮಗ್ರ ನ್ಯೂಸ್ : ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ಕಾನೂನು ಸಂಕಷ್ಟ ಎದುರಾಗಿದು ಇದರಿಂದ ಸಿಎಂ ಕುರ್ಚಿಗೂ ಕಂಟಕ ಎದುರಾಗಿದೆ. ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಸಿಎಂ ಕುರ್ಚಿಗೆ ಈಗಾಗಲೇ ಹಲವರು ಆಸಕ್ತಿ ತೋರಿಸಿದು, ಆದರಲ್ಲಿ ಮೈಸೂರಲ್ಲೆ ನಿಂತು ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

Ad Widget . Ad Widget .

ಆರ್.ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ‌ ಕೈ ತಪ್ಪಿದಾಗಿನಿಂದಲೂ ಇಬ್ಬರ ನಡುವೆ ಮುಸುಕಿನ ಗುದ್ದಾಟ‌ ನಡೆಯುತ್ತಲೆ‌ ಇದೆ. ಒಂದಿಲ್ಲೊಂದು ಕಾರಣಕ್ಕೆ ಪರೋಕ್ಷವಾಗಿ ಸಿಎಂ ಗೆ ಟಾಂಗ್ ಕೊಡುವ ಕೆಲಸವನ್ನ ಆರ್.ವಿ.ದೇಶಪಾಂಡೆ ಮಾಡುತ್ತಿದ್ದಾರೆ. ಇದೀಗ ಸಿಎಂ ತವರು ಮೈಸೂರಿನಲ್ಲೆ ನಿಂತು ತಾವು ಸಿಎಂ ಆಕಾಂಕ್ಷೆ ಎನ್ನುವ ಸಂದೇಶವನ್ನ ಸಾರಿದ್ದಾರೆ. ಅದರಲ್ಲೂ ಮತ್ತೆ ಸಚಿವ ಸ್ಥಾನ ಸಿಗುವ ವಿಚಾರವಾಗಿ ಮಾತನಾಡಿದ ದೇಶಪಾಂಡೆ, ‘ಸಚಿವ ಆಗಿ ಆಗಿ ದಣಿದಿದ್ದೇನೆ, ಇನ್ನು ಸಿಎಂ ಆಗಬೇಕಷ್ಟೆ ಎಂದು ಹೇಳುವ ಮೂಲಕ ತಾವು ಸಿಎಂ‌ ಆಕಾಂಕ್ಷಿ ಎಂದು ಹೇಳಿದ್ದಾರೆ.

Ad Widget . Ad Widget .

‘ನನಗೂ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ. ಜೀವನದಲ್ಲಿ ಗುರಿ ಇರಬೇಕು. ನಾನು ಸಿದ್ದರಾಮಯ್ಯರಿಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿಎಂ ಅನುಮತಿ ಕೊಡಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯರಿಗೆ ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಇದಷ್ಟೆ ಅಲ್ಲ, ಸಿಎಂ ರಾಜೀನಾಮೆ ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದರು.

Leave a Comment

Your email address will not be published. Required fields are marked *