August 2024

ಮದ್ಯಪ್ರಿಯರಿಗೆ ಗುಡ್ ನ್ಯೂಸ್| ಮದ್ಯದ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಂಗಳವಾರದಿಂದ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಮದ್ಯಗಳು ಲಭ್ಯವಾಗಲಿವೆ. ಪ್ರೀಮಿಯಂ ಮದ್ಯದ ಮೇಲೆ ಗರಿಷ್ಠ 600 ರೂ.ವರೆಗೆ ದರ ಇಳಿಯಲಿದೆ. ಜತೆಗೆ, ಬಿಯರ್ ಬಾಟಲ್ ಮೇಲೆ 20 ರೂ. ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 32ಕ್ಕಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳು ಬ್ಯಾಂಡ್‌ನಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ಮಾರಾಟ ಮಾಡುತ್ತಿವೆ. ಬ್ರಾಂಡ್ ಗಳ ಬೆಲೆಯ ಅನುಸಾರ 18 ಸ್ಟ್ರಾಬ್‌ಗಳಾಗಿ […]

ಮದ್ಯಪ್ರಿಯರಿಗೆ ಗುಡ್ ನ್ಯೂಸ್| ಮದ್ಯದ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ Read More »

ಬೆಳ್ತಂಗಡಿ: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ| ಆರೋಪಿಗಳನ್ನು ಆ.31ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

ಸಮಗ್ರ ನ್ಯೂಸ್: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಮೂರು ದಿನ ನ್ಯಾಯಾಂಗ ಬಂಧನಲ್ಲಿದ್ದರು. ಇಂದು (ಆ.27) ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಧೀಶರು ಇಬ್ಬರು ಆರೋಪಿಗಳನ್ನು ಐದು ದಿನಗಳವರೆಗೆ (ಆ. 31 ರವರೆಗೆ) ಹೆಚ್ಚಿನ ತನಿಖೆಗಾಗಿ ಧರ್ಮಸ್ಥಳ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ಅವರನ್ನು ಕೊಲೆ ಮಾಡಿದ ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕುಂಬ್ರಾಜೆ

ಬೆಳ್ತಂಗಡಿ: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ| ಆರೋಪಿಗಳನ್ನು ಆ.31ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್ Read More »

ದರ್ಶನರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ತೀರ್ಮಾನ

ಸಮಗ್ರ ನ್ಯೂಸ್: ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುವುದು ಎಂದು ಸಿಎಂ ಗೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯಾಲಯದ ಅದೇಶ ಪಡೆದು ಪರಪ್ಪನ ಅಗ್ರಹಾರದ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತೇವೆ ಎಂದು ಸಿಎಂಗೆ ಮಾಹಿತಿ ನೀಡಿದ್ದಾರೆ. ದರ್ಶನರಿಗೆ ಜೈಲಿನಲ್ಲಿ ರಾಜ್ಯಾತಿಥ್ಯದ ಫೋಟೋ ವೈರಲ್ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ವರ್ಗಾವಣೆ ಮಾಡಿ ಎಂದು ಸಿಎಂ ಖಡಕ್ ಸೂಚನೆ ನೀಡಿದ್ದರು. ಸಿಎಂ ತಾಕೀತು ಬೆನ್ನಲ್ಲೇ ದರ್ಶನರನ್ನು ಬಳ್ಳಾರಿ ಜೈಲಿಗೆ

ದರ್ಶನರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ತೀರ್ಮಾನ Read More »

ಕಾರ್ಕಳ ಅತ್ಯಾಚಾರ ಪ್ರಕರಣ| ಮತ್ತೊರ್ವ ಆರೋಪಿ ಅಭಯ್ ಅರೆಸ್ಟ್| ಈತ ಬಿಜೆಪಿ ಕಾರ್ಯಕರ್ತನಂತೆ!!

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್ ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಯ್ ಎಂದು ಗುರುತಿಸಲಾಗಿದೆ. ಅತ್ಯಾಚಾರಿ ಅಲ್ತಾಫ್ ಗೆ ಡ್ರಗ್ಸ್ ಪೂರೈಕೆ ಮಾಡಿದ ಹಿನ್ನಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ, ಕಾರ್ಕಳ ತೆಲ್ಲಾರು ನಿವಾಸಿ ಅಭಯ್ ಶಾಸಕ ಸುನೀಲ್ ಕುಮಾರ್‌ ಅವರ ಭಕ್ತ, ಬಿಜೆಪಿ ಕಾರ್ಯಕರ್ತ, ಭಜರಂಗದಳ ಕಾರ್ಯಕರ್ತನೂ ಆಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಾರ್ಕಳ ಅತ್ಯಾಚಾರ ಪ್ರಕರಣ| ಮತ್ತೊರ್ವ ಆರೋಪಿ ಅಭಯ್ ಅರೆಸ್ಟ್| ಈತ ಬಿಜೆಪಿ ಕಾರ್ಯಕರ್ತನಂತೆ!! Read More »

ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಸುಳಿವು ಕೊಟ್ಟ ಕರಾವಳಿ ಬೆಡಗಿ

ಸಮಗ್ರ ನ್ಯೂಸ್: ಕರಾವಳಿ ಬೆಡಗಿ ನೇಹಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಅವರು ಮಾತನಾಡಿ, ಕನ್ನಡದಲ್ಲಿ ಎಷ್ಟು ಒಳ್ಳೆಯ ಸಿನಿಮಾ ಬರುತ್ತಿದೆ. ‘ಕಾಂತಾರ’ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ ಇದರ ಬಗ್ಗೆ ಖುಷಿ ಇದೆ ಎಂದಿದ್ದಾರೆ. ಬಳಿಕ ನೇಹಾ ಶೆಟ್ಟಿ ಕನ್ನಡಕ್ಕೆ ಬರುವ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ಕನ್ನಡದ ಸ್ಕ್ರಿಪ್ಟ್‌ಗಳನ್ನು ಕೇಳುತ್ತಿರುವ ನೇಹಾ ಶೆಟ್ಟಿ, ಒಂದು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದಾರೆ. ಅದು ಕಂಪ್ಲೀಟ್ ಹೊಸ ರೀತಿಯ ಪಾತ್ರವೇ ಆಗಿರಬೇಕು ಎಂಬುದು ಆಸೆ ಎಂದು

ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಸುಳಿವು ಕೊಟ್ಟ ಕರಾವಳಿ ಬೆಡಗಿ Read More »

ಬಂಡಾಜೆ ಫಾಲ್ಸ್, ರಾಣಿಝರಿಗೆ ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ| ಅರಣ್ಯಾಧಿಕಾರಿಯ ಅಮಾನತುಗೊಳಿಸಿ ಆದೇಶ

ಸಮಗ್ರ ನ್ಯೂಸ್: ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯ ಅಧಿಕಾರಿ ಚಂದನಗೌಡ ದ್ಯಾಮನಗೌಡರ ಅವರನ್ನು ಅರಣ್ಯ ಇಲಾಖೆ ಸೋಮವಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಮೂಡಿಗೆರೆ ತಾಲೂಕಿನ ರಾಣಿಝರಿ ಪ್ರವಾಸಿ ತಾಣದ ಸಮೀಪದಿಂದ ಬಲ್ಲಾಳ ರಾಯನದುರ್ಗ ಮತ್ತು ಬಂಡಾಜೆ ಜಲಪಾತ ವೀಕ್ಷಣೆಗೆ ಚಾರಣಕ್ಕೆ ತೆರಳಲು ಆನ್ಲೈನ್ ಮೂಲಕ 250ರೂ.ಪಾವತಿಸಿ ಕಾಯ್ದಿರಿಸಲು ಅವಕಾಶವಿದೆ. ಈ ಚಾರಣದ ಉಸ್ತುವಾರಿಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಆನ್ಲೈನ್ ಟಿಕೆಟ್

ಬಂಡಾಜೆ ಫಾಲ್ಸ್, ರಾಣಿಝರಿಗೆ ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ| ಅರಣ್ಯಾಧಿಕಾರಿಯ ಅಮಾನತುಗೊಳಿಸಿ ಆದೇಶ Read More »

ಚೆಕ್ ಬೌನ್ಸ್ ಪ್ರಕರಣ| ನಟಿ ಪದ್ಮಜಾ ರಾವ್ ಗೆ ಜೈಲುಶಿಕ್ಷೆ ಹಾಗೂ ದಂಡ

ಸಮಗ್ರ ನ್ಯೂಸ್: ಚೆಕ್ ಬೌನ್ಸ್‌ ಪ್ರಕರಣದಲ್ಲಿ ಸಿನಿಮಾ ಹಾಗೂ ಧಾರಾವಾಹಿ ನಟಿ ಪದ್ಮಜಾ ರಾವ್‌ ಅವರಿಗೆ ಇಲ್ಲಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 40.20 ಲಕ್ಷ ದಂಡ ವಿಧಿಸಿದೆ. ‘ಪದ್ಮಜಾ ರಾವ್ 40 ಲಕ್ಷ ಕೈಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್‌ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್‌ ನೀಡಿದ್ದರು. ಈ ಚೆಕ್‌ ಅನ್ನು ನಗದೀಕರಿಸಲು ಹಾಕಿದಾಗ, ಪದ್ಮಜಾ ರಾವ್

ಚೆಕ್ ಬೌನ್ಸ್ ಪ್ರಕರಣ| ನಟಿ ಪದ್ಮಜಾ ರಾವ್ ಗೆ ಜೈಲುಶಿಕ್ಷೆ ಹಾಗೂ ದಂಡ Read More »

ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳೀಕೃಷ್ಣ ಹಸಂತಡ್ಕ ಬಿಡುಗಡೆ| ಪಕ್ಷದ ಜವಾಬ್ದಾರಿ ವಹಿಸಲು ವಿಎಚ್ ಪಿ ಸೂಚನೆ

ಸಮಗ್ರ ನ್ಯೂಸ್: ಮೂರು ದಶಕಗಳ ಪರಿವಾರ ಸಂಘಟನೆಗಳ ವಿವಿಧ ಜವಾಬ್ದಾರಿ ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಸಂಘದ ಸ್ವಯಂ ಸೇವಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರೀಯರಾಗಿದ್ದು ಪರಿವಾರ ಸಂಘಟನೆಗಳಲ್ಲಿ ಸುದೀರ್ಘ 28 ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಇದೀಗ ಸಂಘದಿಂದ ಪೂರ್ಣವಾಗಿ ಬಿಡುಗಡೆಗೊಳಿಸಿ ಪಕ್ಷ ಸಂಘಟನೆಯನ್ನು ಮಾಡುವಂತೆ ವಿಶ್ವಹಿಂದು ಪರಿಷದ್ ಸೂಚನೆ ನೀಡಿದೆ. ಈ ಬೆಳವಣಿಗೆ ಪುತ್ತೂರಿನ ಮುಂದಿನ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ವಿದ್ಯಾರ್ಥಿ ಜೀವನದಲ್ಲೇ

ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳೀಕೃಷ್ಣ ಹಸಂತಡ್ಕ ಬಿಡುಗಡೆ| ಪಕ್ಷದ ಜವಾಬ್ದಾರಿ ವಹಿಸಲು ವಿಎಚ್ ಪಿ ಸೂಚನೆ Read More »

ಪರಪ್ಪನ ಅಗ್ರಹಾರ ಜೈಲಲ್ಲ; ಸ್ವರ್ಗ, ಹಣ ಕೊಟ್ರೆ ಇಲ್ಲಿ ಎಲ್ಲವೂ ಸಿಗುತ್ತೆ!! ಮಾಜಿ ಖೈದಿಯಿಂದ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ಪರಪ್ಪನ ಅಗ್ರಹಾರ ಜೈಲಲ್ಲ ಸ್ವರ್ಗ, ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ . ಮಾದ್ಯಮವೊಂದಕ್ಕೆ ಜೈಲಿನಿಂದ ಬಿಡುಗಡೆಯಾದ ಕೈದಿಯೋರ್ವ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾನೆ. ಹಾಸಿಗೆಯ ಬೆಡ್ ಶೀಟ್ ನೊಳಗೆ ಮೊಬೈಲ್ ಅಡಗಿಸಿಡಲಾಗುತ್ತದೆ. ನೆಟ್ ವರ್ಕ್ ಸಿಗದಂತೆ ಜಾಮರ್ ಅಳವಡಿಸಿದ್ರೂ ಗೋಡೆಗೆ ಮೊಬೈಲ್ ತಾಗಿಸಿದ್ರೆ ನೆಟ್ ವರ್ಕ್ ಸಿಗುತ್ತದೆ ಎಂದು ಹೇಳಿದ್ದಾರೆ. ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ಪರಪ್ಪನ ಅಗ್ರಹಾರ ಜೈಲಲ್ಲ ಸ್ವರ್ಗ. ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ಬಡ್ಡಿ

ಪರಪ್ಪನ ಅಗ್ರಹಾರ ಜೈಲಲ್ಲ; ಸ್ವರ್ಗ, ಹಣ ಕೊಟ್ರೆ ಇಲ್ಲಿ ಎಲ್ಲವೂ ಸಿಗುತ್ತೆ!! ಮಾಜಿ ಖೈದಿಯಿಂದ ಸ್ಪೋಟಕ ಹೇಳಿಕೆ Read More »

ಹವಾಮಾನ ವರದಿ| ಮತ್ತೆ ಚುರುಕಾದ ಮಳೆ| ಕರ್ನಾಟಕದ ಕರಾವಳಿಗೆ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಮುಂದಿನ ಎರಡು- ಮೂರು ದಿನಗಳಲ್ಲಿ ದಕ್ಷಿಣ ರಾಜಸ್ಥಾನ, ಗುಜರಾತ್, ಕೊಂಕಣ, ಗೋವ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಅತಿ ಭಾರಿಯಿಂದ ಅತ್ಯಂತ ಭಾರಿ, ಅಂದರೆ 12.5 ಸೆಂಟಿಮೀಟರ್ನಿಂದ 20 ಸೆಂಟಿಮೀಟರ್ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ವಾರ ದಿಲ್ಲಿ, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಚದುರಿದ ಮತ್ತು ಗುಡುಗುಸಹಿತ ಮಳೆಯಾಗಬಹುದು. ಎರಡು ತೀವ್ರ ಹವಾಮಾನ ವ್ಯವಸ್ಥೆಗಳು ರೂಪುಗೊಂಡಿರುವುದರಿಂದ ಮುಂಗಾರು ಚುರುಕಾಗುತ್ತಿದೆ ಎಂದು ಇಲಾಖೆ ಹೇಳಿದೆ. ಪೂರ್ವ ಭಾರತದಲ್ಲಿ,

ಹವಾಮಾನ ವರದಿ| ಮತ್ತೆ ಚುರುಕಾದ ಮಳೆ| ಕರ್ನಾಟಕದ ಕರಾವಳಿಗೆ ಭಾರೀ ಮಳೆ ಮುನ್ಸೂಚನೆ Read More »