August 2024

ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ| ಸಾರ್ವಕಾಲಿಕ ಕುಸಿತ ಕಂಡ ಏಷ್ಯಾದ ಪ್ರಮುಖ ಕರೆನ್ಸಿ

ಸಮಗ್ರ ನ್ಯೂಸ್: ಅಮೆರಿಕದ ಡಾಲರ್ ಎದುರು 37 ಪೈಸೆ ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯವು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ಅಂತ್ಯಕ್ಕೆ ₹84.09ಕ್ಕೆ ತಲುಪಿದೆ. ಅಮೆರಿಕದ ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಇದಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಅಮೆರಿಕದಲ್ಲಿನ ಆರ್ಥಿಕ ಹಿಂಜರಿತದ ಆತಂಕದ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಈ ಬೆಳವಣಿಗೆ ದಾಖಲಾಗಿದೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ತೀವ್ರ ಕುಸಿತ ಮತ್ತು […]

ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ| ಸಾರ್ವಕಾಲಿಕ ಕುಸಿತ ಕಂಡ ಏಷ್ಯಾದ ಪ್ರಮುಖ ಕರೆನ್ಸಿ Read More »

ವಾಕಿಂಗ್ ಗೆ ಬಂದಿದ್ದ ಮಹಿಳೆಯ ಚುಂಬಿಸಿದಾತ ಅರೆಸ್ಟ್

ಸಮಗ್ರ ನ್ಯೂಸ್: ವಾಯುವಿಹಾರಕ್ಕೆ ಬಂದಿದ್ದ ಮಹಿಳೆಯನ್ನು ಎಳೆದಾಡಿ ಚುಂಬಿಸಿ ಪರಾರಿಯಾಗಿದ್ದವನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಬ್ ಚಾಲಕ 25 ವರ್ಷದ ಸುರೇಶ್ ಬಂಧಿತ ಆರೋಪಿ. ಆಗಸ್ಟ್​ 2ರಂದು ಬೆಳಗಿನ ಜಾವ ಐದು ಗಂಟೆ ಕೋಣನಕುಂಟೆ ಬಳಿಯ ಕೃಷ್ಣಾನಗರದ ಪಾರ್ಕ್​ಗೆ ವಾಕಿಂಗ್​ಗೆ ಬಂದಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿ ಎಸ್ಕೇಪ್ ಆಗಿದ್ದ. ಇದೀಗ ಘಟನೆ ನಡೆದು ಮೂರು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಆರೋಪದಡಿಯಲ್ಲಿ ಕೋಣನಕುಂಟೆ

ವಾಕಿಂಗ್ ಗೆ ಬಂದಿದ್ದ ಮಹಿಳೆಯ ಚುಂಬಿಸಿದಾತ ಅರೆಸ್ಟ್ Read More »

ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ

ಸಮಗ್ರ ನ್ಯೂಸ್: ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭುಗಿಲಿದ್ದಿರುವ ಹಿಂಸಾಚಾರ ನೂರಾರು ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೆ ಇಂದು ಬಾಂಗ್ಲಾದೇಶ ಪ್ರಧಾನಿ ಶೇಕ್‌ ಹಸೀನಾ ರಾಜಿನಾಮೆ ನೀಡಿದ್ದಾರೆ ಎಂದು thehindu.com ವರದಿ ಮಾಡಿದೆ. ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉದ್ನಿಗ್ನತೆ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ‘ಸುರಕ್ಷಿತ ಸ್ಥಳ’ಕ್ಕಾಗಿ ಢಾಕಾ ಅರಮನೆ ತೊರೆದಿದ್ದಾರೆ ಎಂದು ಅವರ ನಿಕಟ ಮೂಲವೊಂದು ತಿಳಿಸಿದೆ. ಹಸೀನಾ ಆಡಳಿತದ ಮೇಲೆ ಹೆಚ್ಚುತ್ತಿರುವ ಅಶಾಂತಿ ಮತ್ತು ಒತ್ತಡದ ಮಧ್ಯೆ

ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ Read More »

ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿ ಜೋಡಿಯ ಲಿಪ್ ಲಾಕ್| ವಿಡಿಯೋ ವೈರಲ್!!

ಸಮಗ್ರ ನ್ಯೂಸ್: ಕಾಲೇಜು ಕ್ಯಾಂಪಸ್ ನಲ್ಲಿ ಅಸಹ್ಯಕರ ಘಟನೆ ನಡೆದಿದ್ದು, ಲಿಪ್ ಲಾಕ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಕಳೆದ ವರ್ಷದ ವಿಡಿಯೋ ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ನೋಯ್ಡಾದ ಕಾಲೇಜು ಕ್ಯಾಂಪಸ್ನಲ್ಲಿ ಹುಡುಗಿ ಮತ್ತು ಹುಡುಗ ರೊಮ್ಯಾಂಟಿಕ್ ಶೈಲಿಯಲ್ಲಿ ಚುಂಬಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಹುಡುಗಿ ಮತ್ತು ಹುಡುಗ ತಮ್ಮ ತೋಳುಗಳಲ್ಲಿ ಬಂಧಿಯಾಗಿ ಪರಸ್ಪರ ಚುಂಬಿಸುತ್ತಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರೂ ಪರಸ್ಪರ ಚುಂಬಿಸುತ್ತಿದ್ದಾಗ, ಯಾರೋ ಹಿಂದಿನಿಂದ

ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿ ಜೋಡಿಯ ಲಿಪ್ ಲಾಕ್| ವಿಡಿಯೋ ವೈರಲ್!! Read More »

ಸಂಪಾಜೆ: ಮೋರಿಗೆ ಬೈಕ್ ಗುದ್ದಿ ಸವಾರರು ಸಾವನ್ನಪ್ಪಿದ ಪ್ರಕರಣ| ಧರ್ಮಸ್ಥಳಕ್ಕೆ ಹೊರಟವರು ಮಸಣಕ್ಕೆ

ಸಮಗ್ರ ನ್ಯೂಸ್: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನಪ್ಪಿದ ಘಟನೆ ಸಂಪಾಜೆ ಅರಣ್ಯ ಇಲಾಖಾ ಕಚೇರಿ ಬಳಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೈಸೂರು ಮೂಲದ ಯುವಕರಾದ ಪವನ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಧರ್ಮಸ್ಥಳಕ್ಕೆ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಳೆದ ರಾತ್ರಿ ವೇಳೆ ಕೊಯ್ನಾಡಿನ ಫಾರೆಸ್ಟ್ ಐಬಿ ಬಳಿ ಮುಖ್ಯರಸ್ತೆಯಲ್ಲಿ ತಲುಪಿದಾಗ ನಿಯಂತ್ರಣ ತಪ್ಪಿದ

ಸಂಪಾಜೆ: ಮೋರಿಗೆ ಬೈಕ್ ಗುದ್ದಿ ಸವಾರರು ಸಾವನ್ನಪ್ಪಿದ ಪ್ರಕರಣ| ಧರ್ಮಸ್ಥಳಕ್ಕೆ ಹೊರಟವರು ಮಸಣಕ್ಕೆ Read More »

ಸಕಲೇಶಪುರ: ಕಂಟೈನರ್ ನೊಳಗೆ ಅಕ್ರಮವಾಗಿ ಗೋಸಾಗಾಟ| ಭಜರಂಗದಳ ಕಾರ್ಯಕರ್ತರಿಂದ 26 ಗೋವುಗಳ ರಕ್ಷಣೆ

ಸಮಗ್ರ ನ್ಯೂಸ್: ಸಕಲೇಶಪುರ – ಕೇರಳ ಹಾಗೂ ಮಂಗಳೂರು ಭಾಗಕ್ಕೆ ನಿತ್ಯ ನಿರಂತರ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತಹ ಘಟನೆ ಆ.4ರ ರಾತ್ರಿ ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಬಜರಂಗದಳ ಕಾರ್ಯಕರ್ತರಿಗೆ ಹಾಸನ ಭಾಗದಿಂದ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವೇಗವಾಗಿ ಬಂದ ಕಂಟೈನರ್ ವಾಹನವನ್ನು ಬೆನ್ನಟ್ಟಿರುವ ಬಜರಂಗದಳ ಕಾರ್ಯಕರ್ತರು ನಗರದ ಬೈಪಾಸ್ ರಸ್ತೆ ಟೊಲ್ ಗೇಟ್ ಬಳಿ ಪೋಲಿಸರು ಸಹಯೋಗದಲ್ಲಿ KA 06 C 6919 ಕಂಟೈನರ್ ವಾಹನವನ್ನು ತಡೆದಿದ್ದಾರೆ.

ಸಕಲೇಶಪುರ: ಕಂಟೈನರ್ ನೊಳಗೆ ಅಕ್ರಮವಾಗಿ ಗೋಸಾಗಾಟ| ಭಜರಂಗದಳ ಕಾರ್ಯಕರ್ತರಿಂದ 26 ಗೋವುಗಳ ರಕ್ಷಣೆ Read More »

ಉಡುಪಿ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿ ಬಸ್ ಡ್ರೈವರ್| ಅಸೌಖ್ಯಕ್ಕೊಳಗಾದ ಯುವತಿಯ ಚಿಕಿತ್ಸೆಗೆ ಆಸ್ಪತ್ರೆಯೊಳಗೆ ಬಸ್ ಚಲಾಯಿಸಿದ ಚಾಲಕ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಯುವತಿಯೋರ್ವಳು ಬಸ್ಸಿನಲ್ಲಿಯೇ ಅಸ್ವಸ್ಥಗೊಂಡಿದ್ದಾಗ ಬಸ್ಸನ್ನೇ ಅಂಬುಲೆನ್ಸ್‌ ಮಾದರಿಯಲ್ಲಿ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದ ಘಟನೆ ಮಾಸುವ ಮೊದಲೇ ಉಡುಪಿಯಲ್ಲಿಯೂ ಇಂತಹುದೇ ಘಟನೆ (ಇಂದು 5 ಆಗಸ್ಟ್)‌ ಸೋಮವಾರ ಬೆಳಿಗ್ಗೆ ಘಟಿಸಿದೆ. ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿಯೋರ್ವಳು ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತುರ್ತಾಗಿ ಸ್ಪಂಧಿಸಿದ ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂರವರು ಅಸ್ವಸ್ಥ ಗೊಂಡ ಯುವತಿಯ ಚಿಕಿತ್ಸೆಗಾಗಿ ತಕ್ಷಣವೇ ಬಸ್ಸನ್ನು

ಉಡುಪಿ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿ ಬಸ್ ಡ್ರೈವರ್| ಅಸೌಖ್ಯಕ್ಕೊಳಗಾದ ಯುವತಿಯ ಚಿಕಿತ್ಸೆಗೆ ಆಸ್ಪತ್ರೆಯೊಳಗೆ ಬಸ್ ಚಲಾಯಿಸಿದ ಚಾಲಕ Read More »

ಇಂದಿನಿಂದ(ಆ.5) ಪಶ್ಚಿಮ ಘಟ್ಟ ಒತ್ತುವರಿ ತೆರವು| ಕಾರ್ಯಪಡೆ ರಚಿಸಿ‌ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ವಯನಾಡ್ ಸೇರಿದಂತೆ ವಿವಿಧೆಡೆ ಸಂಭವಿಸಿದ ಭೂಕುಸಿತ ದುರಂತಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ ತೆರವು ಮತ್ತು ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇಂದಿನಿಂದ (ಆ.5) ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯ ಆರಂಭಿಸಲಿದೆ. ಇದಕ್ಕಾಗಿ ಕಾರ್ಯಪಡೆ ರಚಿಸಿದೆ. ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ತೆರವಿಗೆ 2023ರಲ್ಲೇ ಅರಣ್ಯ ಇಲಾಖೆ ಟಿಪ್ಪಣಿ ಹೊರಡಿಸಿತ್ತು.

ಇಂದಿನಿಂದ(ಆ.5) ಪಶ್ಚಿಮ ಘಟ್ಟ ಒತ್ತುವರಿ ತೆರವು| ಕಾರ್ಯಪಡೆ ರಚಿಸಿ‌ ರಾಜ್ಯ ಸರ್ಕಾರ ಆದೇಶ Read More »

ಶಿರಾಡಿ ಘಾಟ್: ವಾಹನ ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸತತವಾಗಿ ಸುರಿಯುತ್ತಿದ್ದ ಮಳೆಗೆ ನಿರಂತರ ಭೂ ಕುಸಿತ ಕಂಡಿದ್ದ ಶಿರಾಡಿ ಘಾಟ್‌ ಪ್ರದೇಶದ ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲಿನಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ಕಾರಣಕ್ಕೆ ಕತ್ತರಿಸಲ್ಪಟ್ಟ ಗುಡ್ಡಗಳ ಭಾಗದಲ್ಲಿ ಭಾರೀ ಮಳೆಗೆ ಕೆಲವು ದಿನಗಳಿಂದ ಭಾರೀ ಭೂ ಕುಸಿತವಾಗಿತ್ತು. ಸರಕಾರಿ ಬಸ್‌ಗಳು ಮಾತ್ರ ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು, ಮಂಗಳೂರು – ಬೆಂಗಳೂರು ನಡುವೆ ನೇರ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ.

ಶಿರಾಡಿ ಘಾಟ್: ವಾಹನ ಸಂಚಾರ ಪುನರಾರಂಭ Read More »

ಮಂಗಳೂರು- ಬೆಂಗಳೂರು ರೈಲುಮಾರ್ಗ ಪ್ರಾಯೋಗಿಕ ಸಂಚಾರ ಯಶಸ್ವಿ

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ- ಕಡಗರವಳ್ಳಿ ನಡುವಿನ ದೋಣಿಹಗಲ್‌ನ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ದುರಸ್ತಿ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಸ್ಥಳದಲ್ಲಿ ರೈಲು ಎಂಜಿನ್‌ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕ್ಷಣದಿಂದ ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದ್ದು, ಶನಿವಾರ ಭೂಕುಸಿತದ ಸ್ಥಳದಲ್ಲಿ ತಡೆಗೋಡೆ ಗೋಡೆ ಕಾಮಗಾರಿ ಪೂರ್ಣಗೊಂಡಿತ್ತು. ಹಳಿ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಕೆಳಭಾಗದಿಂದಲೇ ಬಂಡೆಗಳನ್ನು ಜೋಡಿಸಿ, ಕಬ್ಬಿಣದ ನೆಟ್‌

ಮಂಗಳೂರು- ಬೆಂಗಳೂರು ರೈಲುಮಾರ್ಗ ಪ್ರಾಯೋಗಿಕ ಸಂಚಾರ ಯಶಸ್ವಿ Read More »