ಎಡಕುಮೇರಿಯಲ್ಲಿ ಭೂಕುಸಿತ/ ಆಗಸ್ಟ್ 8 ರವರೆಗೆ ಬೆಂಗಳೂರು-ಕಾರವಾರ ರೈಲು ಸಂಚಾರ ಸ್ಥಗಿತ
ಸಮಗ್ರ ನ್ಯೂಸ್: ಭಾರೀ ಮಳೆ ಸುರಿಯುತ್ತಿರುವ ಪಶ್ಚಿಮ ಘಟ್ಟ ಭಾಗದ ಎಡಕುಮೇರಿ ಕಡಗರವಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರೈಲು ಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ಕಾರವಾರ ಹಾಗೂ ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ತಡೆಯಾಗಿದೆ. ದುರಸ್ತಿ ಕಾರ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಆಗಸ್ಟ್ 8ರವರೆಗೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಎಡಕುಮೇರಿಯಲ್ಲಿ ಭೂಕುಸಿತ/ ಆಗಸ್ಟ್ 8 ರವರೆಗೆ ಬೆಂಗಳೂರು-ಕಾರವಾರ ರೈಲು ಸಂಚಾರ ಸ್ಥಗಿತ Read More »