August 2024

ಹವಾಮಾನ ವರದಿ: ವಾಯುಭಾರ ಕುಸಿತ ಹಿನ್ನೆಲೆ| ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ| ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಸೇರಿ ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮೂರು ದಿನ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ರಾಯಚೂರು, ಯಾದಗಿರಿ, ಬೆಳಗಾವಿ, ಕೊಡಗು, ಕಲಬರಗಿ ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆಯಾಗುವ ಸಾಧ್ಯತೆ ಇದ್ದು, […]

ಹವಾಮಾನ ವರದಿ: ವಾಯುಭಾರ ಕುಸಿತ ಹಿನ್ನೆಲೆ| ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ| ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ Read More »

ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯಲ್ಲಿ VRL ಬಸ್ ಡ್ರೈವರ್ ನ ಹುಚ್ಚಾಟ| ವೈರಲ್ ವಿಡಿಯೋ ಬಳಿಕ ಪೊಲೀಸರಿಂದ ಅರೆಸ್ಟ್

ಸಮಗ್ರ ನ್ಯೂಸ್: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿ VRL ಬಸ್ ಚಾಲಕ ಹುಚ್ಚಾಟ ಮೆರೆದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಬಸ್ ಚಾಲಕನ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಸದ್ಯ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಸ್ ಜಪ್ತಿ ಮಾಡಲಾಗಿದೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.24 ರಂದು ಶ್ರೀರಂಗಪಟ್ಟಣದ ಬ್ರಹ್ಮಪುರದ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಚಾಲಕ ನಿಯಮ ಉಲ್ಲಂಘಿಸಿ ಅತಿ ಸ್ಪೀಡ್ ಆಗಿ ರ್‍ಯಾಶ್ ಡ್ರೈವಿಂಗ್

ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯಲ್ಲಿ VRL ಬಸ್ ಡ್ರೈವರ್ ನ ಹುಚ್ಚಾಟ| ವೈರಲ್ ವಿಡಿಯೋ ಬಳಿಕ ಪೊಲೀಸರಿಂದ ಅರೆಸ್ಟ್ Read More »

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಚೌಟ ನೇತೃತ್ವದಲ್ಲಿ ಪರ್ಸನಲ್ ಮೀಟಿಂಗ್!! ಕುತೂಹಲ ಮೂಡಿಸಿದ ಕೇಸರಿ ಪಾಳಯದ ನಡೆ

ಸಮಗ್ರ ನ್ಯೂಸ್: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಗುರುವಾರ ರಹಸ್ಯ ಸಭೆ ನಡೆದಿದ್ದು ಕುತೂಹಲ ಮೂಡಿಸಿದೆ. ಬಿಜೆಪಿ ಪಾಳಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯ ಜತೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರು ಇನ್ನಿಲ್ಲದ ಕಸರತ್ತು ನಡೆಸಿದ್ದು ಹೀಗಾಗಿ ಚೌಟ ಅವರ ನೇತೃತ್ವದಲ್ಲಿ ಗೌಪ್ಯ ಸಭೆ ನಡೆದಿದೆ ಎನ್ನಲಾಗಿದೆ. ಸುಳ್ಯ ಕ್ಷೇತ್ರದ ಭೇಟಿ ನಡುವೆ ಸಂಸದ ಚೌಟ ಅವರು ದಿಢೀರ್ ಆಗಿ ಪುತ್ತೂರು ಪಕ್ಷದ ಕಚೇರಿಗೆ ಆಗಮಿಸಿದ್ದರು. ಸಂಸದರ ಆಗಮನದ ಬಗ್ಗೆ

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಚೌಟ ನೇತೃತ್ವದಲ್ಲಿ ಪರ್ಸನಲ್ ಮೀಟಿಂಗ್!! ಕುತೂಹಲ ಮೂಡಿಸಿದ ಕೇಸರಿ ಪಾಳಯದ ನಡೆ Read More »

ಪುತ್ತೂರು: ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಹಿನ್ನೆಲೆ| ಪೊಲೀಸರಿಂದ ದಿಢೀರ್ ದಾಳಿ

ಸಮಗ್ರ ನ್ಯೂಸ್: ಮನೆಯೊಂದಕ್ಕೆ ದಿಢೀರ್‌ ದಾಳಿ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ ಪುತ್ತೂರು ನಗರದ ಹೊರವಲಯ ಬನ್ನೂರಿನಲ್ಲಿ ಆ 29 ರಂದು ಸಂಜೆ ನಡೆದಿದೆ. ಆ ಮನೆಯಲ್ಲಿ ಅನುಮಾನಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ . ಪೊಲೀಸರು ಭೇಟಿ ನೀಡಿದ ವೇಳೆ ಆ ಮನೆಯಲ್ಲಿ ಮನೆ ಒಡತಿಯ ಯೊಂದಿಗೆ ಮತ್ತೊಬ್ಬರು ಮಹಿಳೆಯೂ ಇದ್ದರು. ಇವರ ಹೊರತು ಮನೆಯಲ್ಲಿ ಬೇರೆ

ಪುತ್ತೂರು: ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಹಿನ್ನೆಲೆ| ಪೊಲೀಸರಿಂದ ದಿಢೀರ್ ದಾಳಿ Read More »

ಕೊಟ್ಟಿಗೆಹಾರ: ಕುಸಿಯುವ ಹಂತದಲ್ಲಿ ಅತ್ತಿಗೆರೆ ಅಂಗನವಾಡಿ ಕೇಂದ್ರ | ಪುಟಾಣಿಗಳ ಕಲಿಕಾ ಕೇಂದ್ರ ಈಗ ಹಾವುಗಳ ಆವಾಸಸ್ಥಾನ!!

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಅಂಗನವಾಡಿ ಕೇಂದ್ರ ತೀರಾ ಶಿಥಿಲಾವಸ್ತೆಯಲ್ಲಿದ್ದು ಕುಸಿಯುವ ತಲುಪಿದೆ. ದುಃಸ್ಥಿತಿ ಬಗ್ಗೆ ಅನೇಕ ಬಾರಿ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರು ಯಾವುದೇ ಪ್ರಯೋಜನ ಆಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಅಂಗನವಾಡಿಯ ಈ ಶಿಥಿಲ ಸ್ಥಿತಿಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಸುತ್ತಮುತ್ತ ಪೊದೆಗಳು ಇರುವುದರಿಂದ ಹಾವುಗಳ ಕಾಟವು ಅಧಿಕವಾಗಿದ್ದು ಕಳೆದ ಒಂದು ವಾರದಲ್ಲಿ ಮೂರು ಬಾರಿ ಹಾವು ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಶಿಥಿಲ ಗೊಂಡ ಕಟ್ಟಡವನ್ನು ದುರಸ್ತಿಪಡಿಸುವ ಬದಲಾಗಿ, ಹೊಸದಾಗಿ

ಕೊಟ್ಟಿಗೆಹಾರ: ಕುಸಿಯುವ ಹಂತದಲ್ಲಿ ಅತ್ತಿಗೆರೆ ಅಂಗನವಾಡಿ ಕೇಂದ್ರ | ಪುಟಾಣಿಗಳ ಕಲಿಕಾ ಕೇಂದ್ರ ಈಗ ಹಾವುಗಳ ಆವಾಸಸ್ಥಾನ!! Read More »

ಮುಡಾ ಹಗರಣ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಅನುಮತಿ ಪ್ರಕರಣ| ಆ.31ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಮುಡಾ ಹಗರಣ ಸಂಬಂಧ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಆಲಿಸಿದಂತ ನ್ಯಾಯಪೀಠವು ಆಗಸ್ಟ್.31ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರನ್ನೊಳಗೊಂಡಂತ ನ್ಯಾಯಪೀಠದಲ್ಲಿ ನಡೆಸಲಾಯಿತು. ಹೈಕೋರ್ಟ್ ನ್ಯಾಯಪೀಠದ ಮುಂದೆ ರಾಜ್ಯಪಾಲರು ತರಾತುರಿಯಲ್ಲಿ ಪ್ರಾಸಿಕ್ಯೂಷನ್ ಗೆ

ಮುಡಾ ಹಗರಣ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಅನುಮತಿ ಪ್ರಕರಣ| ಆ.31ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ Read More »

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 500 ಅಪ್ರೆಂಟಿಸ್ಗಳ ನೇಮಕಾತಿ ಆರಂಭ| ಸೆ. 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಸಮಗ್ರ ನ್ಯೂಸ್: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1961ರ ಅಪ್ರೆಂಟಿಸ್ ಕಾಯಿದೆಯಡಿ ಅಪ್ರೆಂಟಿಸ್ ಕಾರ್ಯಕ್ರಮದ ಮೂಲಕ ನೇಮಕಾತಿ ಡ್ರೈವ್ ಘೋಷಿಸಿದೆ. ನೇಮಕಾತಿಗೆ ಡ್ರೈವ್ ಭಾರತದ ವಿವಿಧ ರಾಜ್ಯಗಳಲ್ಲಿ ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗದ ತರಬೇತಿಯನ್ನು ನೀಡುತ್ತದೆ. ಈ ನೇಮಕಾತಿ ಡ್ರೈವ್ ಮೂಲಕ UBI 500 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1961 ರ ಅಪ್ರೆಂಟಿಸ್ ಕಾಯಿದೆಯಡಿ ಅಪ್ರೆಂಟಿಸ್ ಕಾರ್ಯಕ್ರಮದ ಮೂಲಕ ನೇಮಕಾತಿ ಡ್ರೈವ್ ಅನ್ನು ಘೋಷಿಸಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 500 ಅಪ್ರೆಂಟಿಸ್ಗಳ ನೇಮಕಾತಿ ಆರಂಭ| ಸೆ. 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Read More »

ದೇಶದಲ್ಲಿ ಸೈನ್ಯದಿಂದ ಒಳನುಸುಳಕೋರರ ವಿರುದ್ಧ ಆಪರೇಷನ್ | ಮೂವರು ಭಯೋತ್ಪಾದಕರ ಹತ್ಯೆ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 2 ಪ್ರತ್ಯೇಕ ಎನ್‌ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆಗಳು 3 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಆ.28ರ ಮಧ್ಯರಾತ್ರಿ ಜಿಲ್ಲೆಯಲ್ಲಿ 2 ಪ್ರತ್ಯೇಕ ಎನ್‌ಕೌಂಟರ್ ನಡೆಸಿದ ಭದ್ರತಾ ಪಡೆಗಳು, ಕುಶಾಲ್ ಪೊಸ್ಟ್ ನ ಕರ್ನಾಹನಲ್ಲಿ (ತಂಗಧಾರ್) ಇಬ್ಬರು ಮತ್ತು ಗುಲಾಬ್ ಪೊಸ್ಟ್‌ನ ಕುಮಕಾರಿನ (ಮಿಚಿಲ್ ಸೆಕ್ಟರ್) ಪಕ್ಕದಲ್ಲಿ ಒಬ್ಬ ಭಯೋತ್ಪಾಕನನ್ನು ಹತ್ಯೆ ಮಾಡಿದ್ದಾರೆ. ಭಾರೀ ಮಳೆಯಿಂದಾಗಿ ಭದ್ರತಾ ಪಡೆಗೆ ಭಯೋತ್ಪಾದಕರ ಮೃತದೇಹಗಳನ್ನು ವಶಪಡಿಸಲು ಆಗಲಿಲ್ಲ ಎಂದು ವರದಿಯಾಗಿದೆ. ಭಾರತೀಯ

ದೇಶದಲ್ಲಿ ಸೈನ್ಯದಿಂದ ಒಳನುಸುಳಕೋರರ ವಿರುದ್ಧ ಆಪರೇಷನ್ | ಮೂವರು ಭಯೋತ್ಪಾದಕರ ಹತ್ಯೆ Read More »

ಉಡುಪಿ: ರೈಲಿನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದಾತ ಒಂದೇ ಗಂಟೆಯಲ್ಲಿ ಅರೆಸ್ಟ್| ಕೇವಲ ಒಂದು ಸುಳಿವಲ್ಲೇ ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು

ಸಮಗ್ರ ನ್ಯೂಸ್: ರೈಲಿನಲ್ಲಿ ಯುವತಿಯ ಮಾನಭಂಗ ಯತ್ನಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಬಂಧಿತ ಆರೋಪಿ ಆಗಿದ್ದಾನೆ. ಕಳೆದ ಭಾನುವಾರ ರೈಲಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಮೂಲತಃ ಉಡುಪಿ ತಾಲೂಕಿನ ಮಣಿಪಾಲದವರು. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದರು. ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಅಸಭ್ಯ ವರ್ತನೆ ತೋರುತ್ತಿದ್ದ. ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ

ಉಡುಪಿ: ರೈಲಿನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನಿಸಿದಾತ ಒಂದೇ ಗಂಟೆಯಲ್ಲಿ ಅರೆಸ್ಟ್| ಕೇವಲ ಒಂದು ಸುಳಿವಲ್ಲೇ ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು Read More »

ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್…ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಎಂಟ್ರಿ..?

ಸಮಗ್ರ ನ್ಯೂಸ್: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಇದೀಗ ಕೋರ್ಟ್‌ ಆದೇಶದ ಮೇರೆಗೆ ಬಳ್ಳಾರಿ ಜೈಲಿಗೆ ದರ್ಶನ್ ನನ್ನು ಸ್ಥಳಾಂತರ ಮಾಡಲಾಗಿದೆ. ಬಿಗಿ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್‌ನನ್ನು ಕರೆತರಲಾಯಿತು. ಬೆಳಗ್ಗೆ 10 ಗಂಟೆ ಸುಮಾರಿಗೆ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಕರೆತರಲಾಯಿತು. ಇನ್ನೂ ಪೊಲೀಸರು ಮಾಧ್ಯಮಗಳ ಕಣ್ತಪ್ಪಿಸಿ ದರ್ಶನ್‌ನನ್ನು ಹೈದರ್‌ಬಾದ್ ರಸ್ತೆಯಲ್ಲಿ ಕರೆದುಕೊಂಡು ಹೋದರು. ಬಳ್ಳಾರಿಗೆ ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮಾರ್ಗವಾಗಿ ಕರೆದುಕೊಂಡು ಹೋಗಿದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್…ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಎಂಟ್ರಿ..? Read More »