August 2024

ಒಲಿಂಪಿಕ್ಸ್‌ ಸಮಾರೋಪ ಸಮಾರಂಭ/ ಭಾರತದ ಧ್ವಜಧಾರಿಗಳಾಗಿ ಪಿ.ಆರ್ ಶ್ರೀಜೇಶ್ ಮತ್ತು ಮನು ಭಾಕರ್

ಸಮಗ್ರ ನ್ಯೂಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ಭಾನುವಾರ ರಾತ್ರಿ ನಡೆಯಲಿದ್ದು, ಭಾರತದ ಧ್ವಜಧಾರಿಗಳಾಗಿ ಪದಕ ಗೆದ್ದ ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್ ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್ ಮನು ಭಾಕರ್ ಆಯ್ಕೆಯಾಗಿದ್ದಾರೆ. ಮಹಿಳಾ ಧ್ವಜಧಾರಿಯಾಗಿ ಮನು ಭಾಕರ್ ಅವರನ್ನು ಕಳೆದ ವಾರವೇ ಆಯ್ಕೆ ಮಾಡಲಾಗಿತ್ತು. ಆದರೆ, ಭಾರತದ ಪುರುಷ ಧ್ವಜಧಾರಿ ಕ್ರೀಡಾಳು ಆಯ್ಕೆಯಾಗಿರಲಿಲ್ಲ. ಇದೀಗ ಹಾಕಿಗೆ ವಿದಾಯ ಹೇಳಿರುವ ದಿಗ್ಗಜ ಗೋಲ್ ಕೀಪರ್ ಶ್ರೀಜೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಉಭಯ ಕ್ರೀಡಾಪಟುಗಳು ಧ್ವಜಧಾರಿಯಾಗಿ […]

ಒಲಿಂಪಿಕ್ಸ್‌ ಸಮಾರೋಪ ಸಮಾರಂಭ/ ಭಾರತದ ಧ್ವಜಧಾರಿಗಳಾಗಿ ಪಿ.ಆರ್ ಶ್ರೀಜೇಶ್ ಮತ್ತು ಮನು ಭಾಕರ್ Read More »

ಹರಿಯಾಣದ ಶಾಲೆಗಳಲ್ಲಿ ಇನ್ಮುಂದೆ ಗುಡ್‌ ಮಾರ್ನಿಂಗ್‌ ಬದಲು ʼಜೈ ಹಿಂದ್‌ʼ/ ಸರ್ಕಾರದ ಆದೇಶ

ಸಮಗ್ರ ನ್ಯೂಸ್‌: ಹರಿಯಾಣದ ಎಲ್ಲಾ ಶಾಲೆಗಳಲ್ಲಿ ʼಶುಭೋದಯ’ (ಗುಡ್ ಮಾರ್ನಿಂಗ್) ಬದಲಿಗೆ ʼಜೈ ಹಿಂದ್’ ಎಂದು ಹೇಳಲು ನಿರ್ಧರಿಸಲಾಗಿದೆ. ಹರಿಯಾಣ ಸರ್ಕಾರವು ಆರಂಭಿಸಿರುವ ಈ ಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಭಾವನೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಬ್ಲಾಕ್ ಶಿಕ್ಷಣಾಧಿಕಾರಿಗಳು, ಬ್ಲಾಕ್ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಸುತ್ತೋಲೆಯನ್ನು ಕಳುಹಿಸಿದೆ.. ಸುತ್ತೋಲೆಯ ಪ್ರಕಾರ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಿಂದಲೇ

ಹರಿಯಾಣದ ಶಾಲೆಗಳಲ್ಲಿ ಇನ್ಮುಂದೆ ಗುಡ್‌ ಮಾರ್ನಿಂಗ್‌ ಬದಲು ʼಜೈ ಹಿಂದ್‌ʼ/ ಸರ್ಕಾರದ ಆದೇಶ Read More »

ಮುಂಬೈನ ಕಾಲೇಜಿನಲ್ಲಿ ಹಿಜಾಬ್‌ ಬ್ಯಾನ್‌/ ತಡೆ ನೀಡಿದ ಸುಪ್ರೀಂ

ಸಮಗ್ರ ನ್ಯೂಸ್‌: ಮುಂಬೈನ ಕಾಲೇಜಿನ ಆವರಣದಲ್ಲಿ ಹಿಜಾಬ್, ಬುರ್ಖಾ, ಕ್ಯಾಪ್ ರೀತಿಯ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಿ ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದ್ದು, ತರಗತಿಯೊಳಗೆ ಹುಡುಗಿಯರು ಯಾವುದೇ ರೀತಿಯ ಬುರ್ಖಾವನ್ನು ಧರಿಸಲು ಅನುಮತಿ ನೀಡಲಾಗುವುದಿಲ್ಲ ಮತ್ತು ಕ್ಯಾಂಪಸ್‌ನಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಮಹಿಳಾ ಸಬಲೀಕರಣ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ʼಹೆಣ್ಣುಮಕ್ಕಳು ಧರಿಸುವುದನ್ನು ನಿರ್ಬಂಧಿಸುವ ಮೂಲಕ ನೀವು

ಮುಂಬೈನ ಕಾಲೇಜಿನಲ್ಲಿ ಹಿಜಾಬ್‌ ಬ್ಯಾನ್‌/ ತಡೆ ನೀಡಿದ ಸುಪ್ರೀಂ Read More »

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತು: ಸತೀಶ್ ಜಾರಕಿಹೊಳಿಗೆ ಸಮನ್ಸ್

ಸಮಗ್ರ ನ್ಯೂಸ್: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ನೀಡಿದೆ. ಹಿಂದೂ ಧರ್ಮ‌ಕ್ಕೆ ನಿಂದನೆ ಮಾಡುವ‌ ಮೂಲಕ ಅಶಾಂತಿ ಮೂಡಿಸಲು ಯತ್ನಿಸಲಾಗುತ್ತಿದೆ. ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಲಾಗಿದೆ ಎಂದು 2022ರಲ್ಲಿ ವಕೀಲ ಕೆ.ದಿಲೀಪ್ ಕುಮಾರ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ದೂರು ಪರಿಗಣಿಸಿದ ನ್ಯಾ. ಕೆ.ಎನ್.ಶಿವಕುಮಾರ್ ಅವರಿದ್ದ ಪೀಠ ಆಗಸ್ಟ್ 27ಕ್ಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತು: ಸತೀಶ್ ಜಾರಕಿಹೊಳಿಗೆ ಸಮನ್ಸ್ Read More »

ಶೋಭಿತಾ ಜೊತೆ ನಾಗ ಚೈತನ್ಯ ಎಂಗೇಜ್ಮೆಂಟ್: ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಂಡ್ರಾ ನಟ..?

ಸಮಗ್ರ ನ್ಯೂಸ್: ಟಾಲಿವುಡ್ ನಟ ನಾಗ ಚೈತನ್ಯ ಅವರು ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಷ್ಟು ದಿನ ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದ ಶೋಭಿತಾ ಹಾಗೂ ನಾಗ ಚೈತನ್ಯ ಅವರು ಆಗಸ್ಟ್ 8ರಂದು ಎಂಗೇಜ್ ಆದರು. ಆ ಮೂಲಕ ನಾಗ ಚೈತನ್ಯ ಅವರು ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಈ ಮೊದಲು ಸಮಂತಾ ರುತ್ ಪ್ರಭು ಜೊತೆ ನಾಗ ಚೈತನ್ಯ ಮದುವೆ ಆಗಿದ್ದರು. ಆದರೆ ಸಂಸಾರದಲ್ಲಿ ಬಿರುಕು ಮೂಡಿದ್ದರಿಂದ ಅವರು ವಿಚ್ಛೇದನ ಪಡೆದರು. ಇವರಿಬ್ಬರೂ ಕೆಲ ವರ್ಷಗಳ ಹಿಂದೆ ‘ಏ

ಶೋಭಿತಾ ಜೊತೆ ನಾಗ ಚೈತನ್ಯ ಎಂಗೇಜ್ಮೆಂಟ್: ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಂಡ್ರಾ ನಟ..? Read More »

ಮದುವೆಗೆ ಮನೆಯಲ್ಲಿ ವಿರೋಧ: ನೇಣುಬಿಗಿದುಕೊಂಡ ಪ್ರೇಮಿಗಳು

ಸಮಗ್ರ ನ್ಯೂಸ್: ಮದುವೆಗೆ ಮನೆಯಲ್ಲಿ ಒಪ್ಪಲಿಲ್ಲವೆಂದು ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದಿದೆ. ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಮೃತ ಪ್ರೇಮಿಗಳು. ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಹುಡುಗನ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಜೋಡಿ ಸಾವಿನ ಹಾದಿ ಹಿಡಿದಿದೆ. ಸಚಿನ್‌ ದಳವಾಯಿ, ಪ್ರಿಯಾ ಮಡಿವಾಳರ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪರಸ್ಪರ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧಾರ

ಮದುವೆಗೆ ಮನೆಯಲ್ಲಿ ವಿರೋಧ: ನೇಣುಬಿಗಿದುಕೊಂಡ ಪ್ರೇಮಿಗಳು Read More »

ನಾಗರ ಪಂಚಮಿ ದಿನವೇ ಹಾವು ಕಚ್ಚಿ ಬಾಣಂತಿ ಸಾವು

ಸಮಗ್ರ ನ್ಯೂಸ್: ಇಂದು ನಾಗರ ಪಂಚಮಿ ಹಬ್ಬ ಆದರೆ ಈ ಹಬ್ಬದಂದೇ ಹಾವು ಕಚ್ಚಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಮೇವು ತರಲು ತೆರಳಿದ್ದ ವೇಳೆ ಹಾವು ಕಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ರಂಜಿತಾ (22) ಮೃತಪಟ್ಟ ಯುವತಿ. ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವು, ಬಾಣಂತಿಗೆ ಕಚ್ಚಿದೆ. ಆದರೆ, ಈ ಬಗ್ಗೆ ಯುವತಿ ಗಮನಕ್ಕೆ ಬಂದಿಲ್ಲ. ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ

ನಾಗರ ಪಂಚಮಿ ದಿನವೇ ಹಾವು ಕಚ್ಚಿ ಬಾಣಂತಿ ಸಾವು Read More »

ದೂದ್ ಸಾಗರ ಸೋನಾಲಿಂ ಮಧ್ಯೆ ಹಳಿ ತಪ್ಪಿದ ಗೂಡ್ಸ್ ರೈಲು: ಬೆಳಗಾವಿ ಹುಬ್ಬಳ್ಳಿ ರೈಲು ಸಂಚಾರದಲ್ಲಿ ವ್ಯತ್ಯಯ

ಸಮಗ್ರ ನ್ಯೂಸ್: ದೂದ್ ಸಾಗರ ಹಾಗೂ ಸೋನಾಲಿಂ ಮಾರ್ಗ ಮಧ್ಯೆ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಬೆಳಗಾವಿ ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಗೋವಾದ ವಾಸ್ಕೋದಿಂದ ಹೊಸಪೇಟೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ 11 ಬೋಗಿಗಳು ನೆಲಕ್ಕುರುಳಿ ಕಲ್ಲಿದ್ದಲು ವ್ಯರ್ಥವಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಬೆಳಗಾವಿ, ಹುಬ್ಬಳ್ಳಿ ಮಾರ್ಗದ ರೈಲು ಸಂಚಾರ ಸಮಯ ಬದಲಾಗಿದೆ. ಗೋವಾ ಮೂಲಕ ಸಂಚರಿಸುವ ಎರಡು ಟ್ರೈನ್ ಗಳ ಸಂಚಾರ ಬಂದ್ ಆಗಿದೆ.

ದೂದ್ ಸಾಗರ ಸೋನಾಲಿಂ ಮಧ್ಯೆ ಹಳಿ ತಪ್ಪಿದ ಗೂಡ್ಸ್ ರೈಲು: ಬೆಳಗಾವಿ ಹುಬ್ಬಳ್ಳಿ ರೈಲು ಸಂಚಾರದಲ್ಲಿ ವ್ಯತ್ಯಯ Read More »

ಉಡುಪಿ: ಪಂಚಮಿ ದಿನ ಜೀವಂತ ನಾಗನಿಗೆ ತನು ಎರೆದು ಪೂಜೆ

ಸಮಗ್ರ ನ್ಯೂಸ್: ಇಂದು ರಾಜ್ಯದೆಲ್ಲಡೆ ನಾಗರಪಂಚಮಿ ಸಂಭ್ರಮ, ನಾಗರಪಂಚಮಿಯಂದು ಕರಾವಳಿಯಲ್ಲಿ ನಾಗನ ಕಲ್ಲಿಗೆ ಹಾಲೆರೆದು ಪೂಜಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ನಾಗನ ಹುತ್ತಕ್ಕೆ ಹಾಲೆರೆದು ನಾಗರಪಂಚಮಿಯನ್ನು ಆಚರಿಸುತ್ತಾರೆ ಆದರೆ. ಇಲ್ಲಿ ಕಾಪುವಿನ ಮಲ್ಲಾರು ನಿವಾಸಿ ಗೋವರ್ಧನ್ ಭಟ್ ಜೀವಂತ ಹಾವಿಗೆ ತನು ಎರೆಯುವುದರ ಮೂಲಕ ನಾಗರಪಂಚಮಿಯನ್ನು ಬಹಳ ವೈಶಿಷ್ಟ್ಯದಿಂದ ಆಚರಿಸಿ ತಮ್ಮ ಇಷ್ಟಾರ್ಥ ನೆರೆವೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಜೂರು ಮಲ್ಲಾರಿನ ಗೋವರ್ಧನ್ ಭಟ್ ಅವರು ಹಾವುಗಳ ರಕ್ಷಣೆ ಮಾಡುತ್ತಾರೆ. ಕಾಪು ಪರಿಸರದಲ್ಲಿ ಚಿರಪರಿಚಿತರು. ಈ ಪರಿಸರದಲ್ಲಿ ಎಲ್ಲೆ ಹಾವುಗಳೂ

ಉಡುಪಿ: ಪಂಚಮಿ ದಿನ ಜೀವಂತ ನಾಗನಿಗೆ ತನು ಎರೆದು ಪೂಜೆ Read More »

ಪುರುಷತ್ವ ಪ್ರದರ್ಶಿಸಿದರೆ 2.5 ಕೋಟಿ ನೀಡಲಾಗುವುದು| ಅನರ್ಹಗೊಂಡ ಪ್ರಾನ್ಸ್ ಅಥ್ಲೀಟ್ ಗೆ ಪೋರ್ನ್ ಕಂಪನಿ ಬಿಗ್ ಆಫರ್| ಅಷ್ಟಕ್ಕೂ ಅಂಥಾ‌ ಆಫರ್ ನೀಡಿದ್ಯಾಕೆ ಗೊತ್ತಾ?

ಸಮಗ್ರ ನ್ಯೂಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅನರ್ಹಗೊಂಡಿರುವ ಫ್ರಾನ್ಸ್ ಅಥ್ಲೀಟ್ ಅಂಥೋನಿ ಅಮ್ಮಿರತಿ ಪೋರ್ನ್ ವೆಬ್‌ಸೈಟ್ 2.09 ಕೋಟಿ ರೂಪಾಯಿ ಬಿಗ್ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ. ಅಂಥೋನಿ ಅಮ್ಮಿರತಿ ಪೋಲ್‌ವಾಲ್ಟ್ ಅಥ್ಲೀಟ್‌ ಆಗಿದ್ದು, ಕ್ವಾಲಿಫೈರ್‌ ಆಟದಲ್ಲಿ ಅನರ್ಹಗೊಂಡಿದ್ದಾರೆ. ಅಮ್ಮಿರತಿ ಆಟ ಆಡುವಾಗ ಪೋಲ್‌ ಬಾರ್‌ಗೆ ಅವರ ಗುಪ್ತಾಂಗ ತಾಗಿದ್ದರಿಂದ ಆಟದಿಂದ ಅನರ್ಹಗೊಂಡಿದ್ದರು. ಅಂಥೋನಿ ಅಮ್ಮಿರತಿ ಅನರ್ಹಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಪೋರ್ನ್ ವೆಬ್‌ಸೈಟ್‌ನಿಂದ ಕೋಟಿ ಕೋಟಿಯ

ಪುರುಷತ್ವ ಪ್ರದರ್ಶಿಸಿದರೆ 2.5 ಕೋಟಿ ನೀಡಲಾಗುವುದು| ಅನರ್ಹಗೊಂಡ ಪ್ರಾನ್ಸ್ ಅಥ್ಲೀಟ್ ಗೆ ಪೋರ್ನ್ ಕಂಪನಿ ಬಿಗ್ ಆಫರ್| ಅಷ್ಟಕ್ಕೂ ಅಂಥಾ‌ ಆಫರ್ ನೀಡಿದ್ಯಾಕೆ ಗೊತ್ತಾ? Read More »