ಸುಬ್ರಹ್ಮಣ್ಯ: ಪರಿಸರ ರಕ್ಷಣೆಗಾಗಿ ಯುವಕರ ಮಾದರಿ ಕಾರ್ಯ| ಕಮಿಲದ ಬಾಂಧವ್ಯ ಗೆಳೆಯರ ಬಳಗದಿಂದ ರಸ್ತೆ ಬದಿ ಸ್ವಚ್ಛತೆ| ಕಸ ಹಾಕುವವರ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ
ಸಮಗ್ರ ನ್ಯೂಸ್: ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಭಾನುವಾರ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಕಾಡು-ಪರಿಸರ ಸಂರಕ್ಷಣೆ, ಸ್ವಚ್ಛತೆಯ ಉದ್ದೇಶದಿಂದ ಕೆಲಸಕ್ಕೆ ಇಳಿದ ಯುವಕರಿಗೆ ಕಾಡಿನ ದಾರಿಯಲ್ಲಿ ದೊರೆತದ್ದು 2 ಲೋಡ್ ಪಿಕ್‌ಅಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ. ಇನ್ನೂ ಇದೆ. ಇದು ಒಂದು ದಿನ ಕೆಲಸ. ಕಮಿಲದ ಬಾಂಧವ್ಯ ಗೆಳೆಯರ ಬಳಗವು ಅರಣ್ಯದ ಕಾಳಜಿಯ ಉದ್ದೇಶದೊಂದಿಗೆ ಆರಂಭದಲ್ಲಿ ಕಾಡಿನ ದಾರಿಯಲ್ಲಿ ಸ್ವಚ್ಛತೆ […]