August 2024

ರಾಷ್ಟ್ರ ಧ್ವಜದ ಮೇಲೆ ಇಸ್ಪೀಟ್ ಆಡಿದ ಮಹಾನುಭಾವರು| ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಧ್ವಜವನ್ನು ಇಳಿಸಿ ಅದನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಅದು ಶಿಕ್ಷಾರ್ಹ ಅಪರಾಧ. ಆದರೆ, ಇಲ್ಲೊಂದಷ್ಟು ಮಹಾನುಭವರು ಈ ಬಗ್ಗೆ ತಿಳಿವಳಿಕೆ ಇದ್ದರೂ ಕೂಡಾ ರಾಷ್ಟ್ರಧ್ವಜವನ್ನು ಗೌರವಿಸದೆ, ಆ ಧ್ವಜವನ್ನು ನೆಲದ ಮೇಲೆ ಹಾಸಿ ಇಸ್ಪೀಟ್ ಆಡಿದ್ದಾರೆ. ಇವರ ಈ ಕೃತ್ಯಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ಮಾತ್ರ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದಂತಹ ಘಟನೆ ನಡೆದಿದೆ. ಮಥುರಾ ಜಿಲ್ಲೆಯ ಲಕ್ಷ್ಮಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ […]

ರಾಷ್ಟ್ರ ಧ್ವಜದ ಮೇಲೆ ಇಸ್ಪೀಟ್ ಆಡಿದ ಮಹಾನುಭಾವರು| ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ Read More »

SBI, PNB ಬ್ಯಾಂಕ್ ಖಾತೆಗಳನ್ನು ಮುಚ್ಚಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಅಚ್ಚರಿಪಡಿಸಿದೆ; ಲಹರ್ ಸಿಂಗ್ ಸಿರೋಯಾ

ಸಮಗ್ರ ನ್ಯೂಸ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆಗಳನ್ನು ಮುಚ್ಚಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರದ ನಿರ್ಧಾರ ನಿರಂಕುಶ ಮನಸ್ಥಿತಿ ಮತ್ತು ಅನುಮಾನಾಸ್ಪದವಾಗಿದೆ. ಈ ಕುರಿತು ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಗಮನ ಹರಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು. ‘ಸ್ಟೇಟ್

SBI, PNB ಬ್ಯಾಂಕ್ ಖಾತೆಗಳನ್ನು ಮುಚ್ಚಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಅಚ್ಚರಿಪಡಿಸಿದೆ; ಲಹರ್ ಸಿಂಗ್ ಸಿರೋಯಾ Read More »

ಸಕಲೇಶಪುರ: ಹಳಿ ಮೇಲೆ ಮತ್ತೆ ಭೂಕುಸಿತ| ರೈಲು ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಆ.16; ಸಕಲೇಶಪುರ ತಾಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಮತ್ತೆ ಭೂಕುಸಿತ ಸಂಭವಿಸಿದ್ದರಿಂದ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ದಿಢೀರ್ ಸ್ಥಗಿತಗೊಳಿಸಲಾಗಿದೆ. ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ ಮುಗಿದು ರೈಲ್ವೆ ಸಂಚಾರ ಆರಂಭವಾದ ಬಳಿಕ ಮತ್ತೆ ಮಣ್ಣು ಕುಸಿದಿದೆ. ಈ ಪರಿಣಾಮವಾಗಿ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಕಳೆದ ಅರ್ಧ ಗಂಟೆಯಿಂದ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ನಿಂತಿದೆ. ರೈಲು

ಸಕಲೇಶಪುರ: ಹಳಿ ಮೇಲೆ ಮತ್ತೆ ಭೂಕುಸಿತ| ರೈಲು ಸಂಚಾರ ಸ್ಥಗಿತ Read More »

ಕಾರವಾರ: ತಿಂಗಳು ಕಳೆದರೂ ನಾಪತ್ತೆಯಾದವರಿಗಾಗಿ ಮುಂದುವರಿದ ಶೋಧ ಕಾರ್ಯ| ರೆಡಾರ್ ಮೂಲಕ ನದಿ ಭಾಗದಲ್ಲಿ ಹುಡುಕಾಟ

ಸಮಗ್ರ ನ್ಯೂಸ್: ಶಿರೂರಿನಲ್ಲಿ ಭೂಕುಸಿತವಾಗಿ ಒಂದು ತಿಂಗಳು ಕಳೆದರು ಶುಕ್ರವಾರ (ಆ.16) ಸಹ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟ್ಟ ಪ್ರದೇಶದಲ್ಲಿ ಮಳೆಯಿಂದ ನದಿ ನೀರು ಮಣ್ಣು ಮಿಶ್ರಿತವಾಗಿದ್ದು, ಇದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಇಂದು ಗಂಗಾವಳಿ ನದಿಯಲ್ಲಿ ಬಿದ್ದಿರುವ ಎರಡು ಆಲದ ಮರವನ್ನು ಹೊರೆತೆಗೆಯಲು ನೌಕಾದಳ ಸಿದ್ಧತೆ ಮಾಡಿಕೊಂಡಿದೆ. ಕಾರ್ಯಾಚರಣೆಯಲ್ಲಿ NDRF ಹಾಗೂ SDRF ತಂಡ ಸಹ ಭಾಗಿಯಾಗಿದೆ. ನದಿ ನೀರಿನ ಪ್ರಮಾಣ ಕಡಿಮೆ ಇದ್ದು, ಗಂಗಾವಳಿ ನದಿಯಲ್ಲಿ

ಕಾರವಾರ: ತಿಂಗಳು ಕಳೆದರೂ ನಾಪತ್ತೆಯಾದವರಿಗಾಗಿ ಮುಂದುವರಿದ ಶೋಧ ಕಾರ್ಯ| ರೆಡಾರ್ ಮೂಲಕ ನದಿ ಭಾಗದಲ್ಲಿ ಹುಡುಕಾಟ Read More »

‘ಕಾಂತಾರ’ದ ಅತ್ಯುತ್ತಮ ನಟನೆಗೆ ‘ರಾಷ್ಟ್ರಪ್ರಶಸ್ತಿ’ ಬಾಚಿಕೊಂಡ ರಿಷಬ್ ಶೆಟ್ಟಿ

ಸಮಗ್ರ ನ್ಯೂಸ್:ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2024 ವಿಜೇತ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತ ಪ್ರತಿಷ್ಠಿತ ಸಿನಿಮಾ ರಂಗದ ರಾಷ್ಟ್ರ ಪ್ರಶಸ್ತಿಯನ್ನು ಕನ್ನಡದ ‘ಕಾಂತಾರ’ ಚಲನಚಿತ್ರ ಬಾಚಿಕೊಂಡಿದೆ. ಡಿವೈನ್ ಸ್ಟಾರ್ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಒಲಿದಿದ್ದಿದ್ದು, ಸ್ಯಾಂಡಲ್ವುಡ್ನಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹಿಂದೆ ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿತ್ತು. ತದನಂತರದಲ್ಲಿ ಮತ್ತೆ ಕನ್ನಡಕ್ಕೆ ಪ್ರಶಸ್ತಿಗಳೇ ಬಂದಿರಲಿಲ್ಲ. ಇನ್ನು ಪೈಪೋಟಿಯಲ್ಲಿ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ‘ನನ್ನಕಲ್

‘ಕಾಂತಾರ’ದ ಅತ್ಯುತ್ತಮ ನಟನೆಗೆ ‘ರಾಷ್ಟ್ರಪ್ರಶಸ್ತಿ’ ಬಾಚಿಕೊಂಡ ರಿಷಬ್ ಶೆಟ್ಟಿ Read More »

ಸಕಲೇಶಪುರ: ಬಾಳ್ಳುಪೇಟೆ ಬಳಿ ಮತ್ತೆ ಹಳಿ ಮೇಲೆ ಭೂಕುಸಿತ| ರೈಲು ಸಂಚಾರ ತಾತ್ಕಾಲಿಕ ಬಂದ್

ಸಮಗ್ರ ನ್ಯೂಸ್: ಸಕಲೇಶಪುರ ತಾಲೂಕಿನ ಆಚಂಗಿ ಸಮೀಪ ಕಳೆದ ವಾರ ರೈಲು ಹಳಿಯ ಮೇಲೆ ಭೂ ಕುಸಿತ ಉಂಟಾಗಿ ರೈಲು ಸಂಚಾರ ರದ್ದುಗೊಂಡಿತ್ತು. ಕಳೆದ 2 ದಿನಗಳ ಹಿಂದೆ ರೈಲು ಸಂಚಾರ ಪುನರ್ ಆರಂಭಗೊಂಡಿತ್ತು. ಇದೀಗ ಶುಕ್ರವಾರ ಬೆಳಿಗ್ಗೆ ಮತ್ತೊಮ್ಮೆ ಹಳಿಗಳ ಮೇಲೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ರೈಲು ಸಂಚಾರ ರದ್ದಾಗಿದ್ದು ಬೆಂಗಳೂರು – ಕಾರವಾರ ನಡುವಿನ ರೈಲು ಬಾಳ್ಳುಪೇಟೆ ಬಳಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬಳಿಕ

ಸಕಲೇಶಪುರ: ಬಾಳ್ಳುಪೇಟೆ ಬಳಿ ಮತ್ತೆ ಹಳಿ ಮೇಲೆ ಭೂಕುಸಿತ| ರೈಲು ಸಂಚಾರ ತಾತ್ಕಾಲಿಕ ಬಂದ್ Read More »

ಮೊಸಳೆ ಸೆರೆ ಹಿಡಿದ ಅಧಿಕಾರಿಗಳು.

ಚಿಕ್ಕೋಡಿ:- ಪ್ರವಾಹ‌ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳಲ್ಲಿ ಮೋಸಳೆಯೊಂದು ಕಾಣಿಸಿಕೊಂಡಿದ್ದರಿಂದ ಜನರಿಗೆ ಆತಂಕ ಹೆಚ್ಚಾಗಿತ್ತು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ, ಉಗಾರ, ಕುಸನಾಳ,ಗ್ರಾಮ‌ದ ಜನರು ಮೊಸಳೆಯಿಂದ ಭಯಭೀತರಾಗಿದ್ದರು .ಇಂದು ಆ ಮೊಸಳೆಯನ್ನ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದು ನದಿ ತೀರದ ಜನರ ಆಂತಕ ದೂರಾಗಿದ್ದು ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಅಧಿಕಾರಿಗಳಾದ ರಾಕೇಶ್ ಅರ್ಜುನವಾಡೆ, ಪ್ರಶಾಂತ್ ಗಂಗಾಧರ ಸೇರಿದಂತೆ ಹಲವು ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಸತತ ಕಾರ್ಯಾಚರಣೆ ನಡೆಸಿ ಮೊಸಳೆಯನ್ನ ಸೆರೆ ಹಿಡಿದಿದ್ದಾರೆ.ಅರಣ್ಯ ಅಧಿಕಾರಿಗಳ

ಮೊಸಳೆ ಸೆರೆ ಹಿಡಿದ ಅಧಿಕಾರಿಗಳು. Read More »

ವಿದ್ಯುತ್ ಶಾಕ್ ಗೆ ಇಂಜಿನಿಯರ್ ಬಲಿ

ಸಮಗ್ರ ನ್ಯೂಸ್: ವಿದ್ಯುತ್ ಶಾಕ್‍ನಿಂದ ಯುವ ಇಂಜಿನಿಯರ್ ಸಾವಿಗೀಡಾದ ಘಟನೆ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಯಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ನಿವಾಸಿ ಕೌಶಿಕ್ (27) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಪ್ಯಾನಲ್ ಬೋರ್ಡ್ ತಯಾರು ಮಾಡಬೇಕಾದರೆ ವಿದ್ಯುತ್ ತಗಲಿದೆ. ಕೂಡಲೆ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಕಂಪನಿಯಲ್ಲಿ ಕೆಲಸ ಮಾಡಬೇಕಾದರೆ ಯಾವುದೇ

ವಿದ್ಯುತ್ ಶಾಕ್ ಗೆ ಇಂಜಿನಿಯರ್ ಬಲಿ Read More »

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ| ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರ

ಸಮಗ್ರ ನ್ಯೂಸ್: ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ ಪರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು (ಆ.16) ಮುಂಜಾನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರ ಹೆಸರು ವಿಳಾಸದ ಮಾಹಿತಿ ‌ಲಭ್ಯವಾಗಿಲ್ಲ. ಗಾಯಗೊಂಡ ಎಲ್ಲರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಯುವಕರು ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಚಾಲಕನ ಅತಿ ವೇಗದ ಚಾಲನೆ ಅಥವಾ ವಾಹನದಲ್ಲಿ ಕಂಡ ತಾಂತ್ರಿಕ ದೋಷಗಳಿಂದ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ| ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರ Read More »

ಸವಣೂರು:ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ

ಸಮಗ್ರ ನ್ಯೂಸ್: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆನರಾ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮತ್ತು ಸವಣೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕೆನರಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬೆಳ್ಳಾರೆ ಬ್ಲಾಕ್ ಅಧ್ಯಕ್ಷರು ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್. ಎಂ ಎ ಸಂದೇಶ ಭಾಷಣ ಮಾಡಿದರು.

ಸವಣೂರು:ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ Read More »