August 2024

ಮಂಗಳೂರು: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ| ಶಾಂತಿಯುತ ಹೋರಾಟದಲ್ಲಿ ಹಲವು ಮಂದಿ ಭಾಗಿ

ಸಮಗ್ರ ನ್ಯೂಸ್: ಕೋಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ನಗರದ ಭಾರತೀಯ ವೈದ್ಯಕೀಯ ಸಂಘ, ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ನಗರ ಐಎಂಎ ಭವನದಿಂದ ಜಿಲ್ಲಾಧಿಕಾರಿ ಕಚೇರಿಗೆ ಶಾಂತಿಯತ ಮೆರವಣಿಗೆ ನಡೆಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಸಹಿತ, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಭಾಗವಹಿಸಿದ್ದರು. 24 ಗಂಟೆಗಳ ಕಾಲ ನಡೆಯುವ ಮುಷ್ಕರದ ವೇಳೆ ಹೊರರೋಗಿ ವಿಭಾಗ, […]

ಮಂಗಳೂರು: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ| ಶಾಂತಿಯುತ ಹೋರಾಟದಲ್ಲಿ ಹಲವು ಮಂದಿ ಭಾಗಿ Read More »

ಕೋಲಾರ: ಟೊಮೆಟೋ ಬೆಲೆ ಕುಸಿತ | ಬೆಳೆಗಾರರು, ವ್ಯಾಪಾರಸ್ಥರಿಗೆ ಆರ್ಥಿಕ ಸಂಕಷ್ಟಕ್ಕೆ

ಸಮಗ್ರ ನ್ಯೂಸ್: ಭಾರತದ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಉದ್ಭವವಾಗಿರುವ ಅರಾಜಕತೆ, ಆಂತರಿಕ ಕಲಹ, ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆಗೆ ತಟ್ಟಿದೆ. ಪರಿಣಾಮ ಕೋಲಾರದ ಟೊಮೆಟೋ ಬೆಳೆಗಾರರು ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಟೊಮೆಟೋ ಬೆಲೆ ಕೂಡಾ ತೀವ್ರ ಕುಸಿತ ಕಂಡಿದೆ. ಕಳೆದ ಒಂದೂವರೆ ತಿಂಗಳಿಂದ ಬಾಂಗ್ಲಾದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರ ಪರಿಣಾಮ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ

ಕೋಲಾರ: ಟೊಮೆಟೋ ಬೆಲೆ ಕುಸಿತ | ಬೆಳೆಗಾರರು, ವ್ಯಾಪಾರಸ್ಥರಿಗೆ ಆರ್ಥಿಕ ಸಂಕಷ್ಟಕ್ಕೆ Read More »

ಉಡುಪಿ: ಕಾರಿನಲ್ಲಿ ಎಸಿ ಹಾಕಿ ಮಲಗಿದ್ದಾತ ಉಸಿರುಗಟ್ಟಿ ಸಾವು

ಸಮಗ್ರ ನ್ಯೂಸ್: ಅಣ್ಣನ ಸ್ನೇಹಿತನೊಂದಿಗೆ ತನ್ನ ತಂದೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ರಾತ್ರಿ ಕಾರಿನಲ್ಲಿ ಮಲಗಿ ಬೆಳಗಾಗುವಷ್ಟರಲ್ಲೇ ಸಾವನ್ನಪ್ಪಿದ ಘಟನೆ ಆ.16 ರಂದು ನಡೆದಿದೆ . ಮೃತ ಗುರುರಾಜ್ (32) ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದಾರೆ. ಗುರುರಾಜ್‌ ತನ್ನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ, ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಹಿನ್ನೆಲೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತನ್ನದೇ ಕಾರಿನಲ್ಲಿ ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದರು. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ

ಉಡುಪಿ: ಕಾರಿನಲ್ಲಿ ಎಸಿ ಹಾಕಿ ಮಲಗಿದ್ದಾತ ಉಸಿರುಗಟ್ಟಿ ಸಾವು Read More »

ಚಿತ್ರದುರ್ಗ:ಸಿಡಿಲು ಬಡಿದು 106 ಕುರಿಗಳ ಸಾವು| ಸಂಕಷ್ಟಕ್ಕೆ ಸಿಲುಕಿದ ಕುರಿಗಾಹಿಗಳು

ಸಮಗ್ರ ನ್ಯೂಸ್: ಸಿಡಿಲು ಬಡಿದು 106 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆ 16ರಂದು ತಡ ರಾತ್ರಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಸುರಿದ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಗೆ ಕುರಿಹಟ್ಟಿಯಲ್ಲಿದ್ದ ಆಂಜನೇಯ ಎಂಬ ಕುರಿಗಾಹಿಯ 90 ಹಾಗೂ ಓಬಣ್ಣ ಎಂಬವರ 16 ಕುರಿಗಳು ಸೇರಿದಂತೆ ಒಟ್ಟು 106 ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಈ ಬಗ್ಗೆ ತಿಳಿದ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕುರಿಗಳ ಮರಣೋತ್ತರ

ಚಿತ್ರದುರ್ಗ:ಸಿಡಿಲು ಬಡಿದು 106 ಕುರಿಗಳ ಸಾವು| ಸಂಕಷ್ಟಕ್ಕೆ ಸಿಲುಕಿದ ಕುರಿಗಾಹಿಗಳು Read More »

ಟಿಬಿ ಡ್ಯಾಂ ಗೇಟ್ ಅಳವಡಿಕೆ ಮೊದಲ ಎಲಿಮೆಂಟ್ ಯಶಸ್ವಿ

ಸಮಗ್ರ ನ್ಯೂಸ್: ಕೊಚ್ಚಿ ಹೋಗಿದ್ದ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ ಆರಂಭಗೊಂಡಿತ್ತು. ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ವಿಫಲವಾಗಿತ್ತು. ನಿನ್ನೆ ರಾತ್ರಿ ಸತತ ಎರಡು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಬದಲಿಗೆ ಸ್ಟಾಪ್​ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ. ಮೊದಲ ಹಂತದ ಎಲಿಮೆಂಟ್ ಅಳವಡಿಕೆಯಲ್ಲಿ ತಂತ್ರಜ್ಞರು ತುಂಗಭದ್ರಾ ಡ್ಯಾಂನ 19ನೇ ಗೇಟ್ ನಲ್ಲಿ ತೊಡಗಿದ್ದರು. ಅದು ಯಶಸ್ವಿಯಾಗಿದದ್ದು, ರೈತರು ನಿರಾಳರಾಗುವಂತೆ ಮಾಡಿದೆ.

ಟಿಬಿ ಡ್ಯಾಂ ಗೇಟ್ ಅಳವಡಿಕೆ ಮೊದಲ ಎಲಿಮೆಂಟ್ ಯಶಸ್ವಿ Read More »

ಮಂಗಳೂರು: ಹೊಸ ಅಡಿಕೆ ದರದಲ್ಲಿ ಏರಿಕೆ

ಸಮಗ್ರ ನ್ಯೂಸ್: ಹೊಸ ಅಡಿಕೆ (ಚಾಲಿ) ದರದಲ್ಲಿ ಏರಿಕೆಯಾಗಿದ್ದು, ಇಲ್ಲಿನ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹400 ಧಾರಣೆ ದೊರೆತಿದೆ. ಜೂನ್-ಜುಲೈ ತಿಂಗಳಿನಲ್ಲಿ ಕೆ.ಜಿಗೆ ₹375ರಿಂದ ₹385ರ ಆಸುಪಾಸಿನಲ್ಲಿದ್ದ ದರವು ಆಗಸ್ಟ್ ಮೊದಲ ವಾರದಲ್ಲಿ ತುಸು ಏರಿಕೆಯಾಗಿತ್ತು. ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊದಲ್ಲಿ ಶುಕ್ರವಾರ ಗರಿಷ್ಠ ದರ ₹390 ಇದ್ದರೆ, ಸುಳ್ಯ ತಾಲ್ಲೂಕು ಬೆಳ್ಳಾರೆಯ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹400 ದರ ದಾಖಲಾಯಿತು. ಮಾರ್ಚ್‌ ಎರಡನೇ ವಾರದಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ ₹352 ಇದ್ದರೆ, ಏಪ್ರಿಲ್

ಮಂಗಳೂರು: ಹೊಸ ಅಡಿಕೆ ದರದಲ್ಲಿ ಏರಿಕೆ Read More »

ಸಿಎಂ ಕೊರಳಿಗೆ ‘ಮುಡಾ’ ಉರುಳು| ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರು

ಸಮಗ್ರ ನ್ಯೂಸ್: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಶುರುವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ದಾಖಲೆಗಳ ಜೊತೆ ಬರುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಟಿ.ಜೆ.ಅಬ್ರಾಹಂ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅಲ್ಲದೆ ಟಿ.ಜೆ.ಅಬ್ರಾಹಂ ಅವರಿಗೆ ಬೆಳಿಗ್ಗೆ 10 ಗಂಟೆಗೆ ರಾಜಭವನಕ್ಕೆ ಬಂದು ಭೇಟಿಯಾಗಲು ರಾಜ್ಯಪಾಲರು ಸೂಚಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ

ಸಿಎಂ ಕೊರಳಿಗೆ ‘ಮುಡಾ’ ಉರುಳು| ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರು Read More »

ಹತ್ತು ಎಸೆತಗಳಲ್ಲಿ 60 ರನ್ ಚಚ್ಚಿದ ಇಶಾನ್ ಕಿಶನ್| ಟೀಂ‌ ಇಂಡಿಯಾದಿಂದ ಹೊರಬಿದ್ದಿದ್ದಕ್ಕೆ ಸೇಡು‌ ತೀರಿಸಿಕೊಂಡರಾ ಕ್ರಿಕೆಟ್ ಸ್ಟಾರ್?

ಸಮಗ್ರ ನ್ಯೂಸ್: ಟೀಂ ಇಂಡಿಯಾದಿಂದ ಹೊರಬಿದ್ದ ಇಶಾನ್ ಕಿಶನ್ ಇದೀಗ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಈ ಎಡಗೈ ಬ್ಯಾಟ್ಸ್‌ಮನ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬುಚ್ಚಿ ಬಾಬು. ಇಶಾನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ರಾಮ್‌ವೀರ್ ಗುರ್ಜರ್, ಅಧೀರ್ ಪ್ರತಾಪ್ ಸಿಂಗ್ ಮತ್ತು ಆಕಾಶ್ ರಾಜಾವತ್ ವಿರುದ್ಧ ಹೆಚ್ಚು ರನ್ ಗಳಿಸಿದ ಇಶಾನ್‌,

ಹತ್ತು ಎಸೆತಗಳಲ್ಲಿ 60 ರನ್ ಚಚ್ಚಿದ ಇಶಾನ್ ಕಿಶನ್| ಟೀಂ‌ ಇಂಡಿಯಾದಿಂದ ಹೊರಬಿದ್ದಿದ್ದಕ್ಕೆ ಸೇಡು‌ ತೀರಿಸಿಕೊಂಡರಾ ಕ್ರಿಕೆಟ್ ಸ್ಟಾರ್? Read More »

ಮಡಿಕೇರಿ: ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ|ಓರ್ವ ತಯಾರಕ, ಮೂವರು ಖರೀದಿದಾರರ ಬಂಧನ

ಸಮಗ್ರ ನ್ಯೂಸ್: ಮಡಿಕೇರಿಯ ಭಾಗಮಂಡಲದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಆ.15 ರಂದು ನಡೆದಿದೆ. ಈ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಓರ್ವ ಆರೋಪಿಯನ್ನು ಮತ್ತು ಈತನಿಂದ ಅಕ್ರಮ ನಾಡ ಬಂದೂಕುಗಳನ್ನು ಖರೀದಿಸಿದ ಮೂವರನ್ನು ಬಂಧಿಸಿದ್ದಾರೆ. ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮಹೇಶ್ ಕುಮಾರ್, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಅನೂಪ್ ಮಾದಪ್ಪ, ಸಿಪಿಐ, ಮಡಿಕೇರಿ ಗ್ರಾಮಾಂತರ ವೃತ್ತ, ಹಾಗೂ

ಮಡಿಕೇರಿ: ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ|ಓರ್ವ ತಯಾರಕ, ಮೂವರು ಖರೀದಿದಾರರ ಬಂಧನ Read More »

ಆ .17 ಕೊಡಗಿನಲ್ಲಿಯೂ ವೈದ್ಯಕೀಯ ಸೇವೆಗಳು ಬಂದ್ – ಐಎಂಎ ಘೋಷಣೆ

ಸಮಗ್ರ ನ್ಯೂಸ್: ಕೋಲ್ಕೋತ್ತಾದ ಆರ್ ಜಿ ಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಹಾಗೂ ಆಸ್ಪತ್ರೆ ಮೇಲೆ ದುಷ್ಕಮಿ೯ಗಳ ದಾಳಿಯನ್ನ ಖಂಡಿಸಿ ಆಗಸ್ಟ್ 17 ರಿಂದ 18 ರ ಬೆಳಗ್ಗಿನವರೆಗೆ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ. ಕೊಡಗಿನಲ್ಲಿಯೂ ವೈದ್ಯಕೀಯ ಸೇವೆಗಳು ಬಂದ್ ಆಗಲಿದೆ ಎಂದು ಸಂಘದ ಜಿಲ್ಲಾ ಘಟಕ ಮಾಹಿತಿ ನೀಡಿದೆ. ಕೊಡಗು ಜಿಲ್ಲೆಯ ಸಕಾ೯ರಿ ಮತ್ತು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳಲ್ಲಿ

ಆ .17 ಕೊಡಗಿನಲ್ಲಿಯೂ ವೈದ್ಯಕೀಯ ಸೇವೆಗಳು ಬಂದ್ – ಐಎಂಎ ಘೋಷಣೆ Read More »