August 2024

ದರ್ಶನ್ ಭೇಟಿಯಾದ ರಚಿತಾ ರಾಮ್… ಭಾವುಕರಾದ ರಚ್ಚುಗೆ ದಚ್ಚು ಸಾಂತ್ವನ..!

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಅವರನ್ನು ನೋಡಲು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ನನ್ನ ಗುರು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ರಚಿತಾರಾಮ್‌ ಇಂದು ಮಧ್ಯಾಹ್ನ ಮೂರು ಗಂಟೆ ನಂತರ ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆಗೆ ಜೈಲಿಗೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರಾಜನನ್ನ ರಾಜನ ರೀತಿ ನೋಡೋಕೆ ನನಗಿಷ್ಟ, ಈ ರೀತಿಯಲ್ಲಿ ನೋಡೋಕೆ ಕಷ್ಟ […]

ದರ್ಶನ್ ಭೇಟಿಯಾದ ರಚಿತಾ ರಾಮ್… ಭಾವುಕರಾದ ರಚ್ಚುಗೆ ದಚ್ಚು ಸಾಂತ್ವನ..! Read More »

ಫೇಸ್‌ಬುಕ್‌ನಲ್ಲಿ ಬಣ್ಣ ಬಣ್ಣದ ಮಾತುಗಳಿಂದ ಅರ್ಚಕನನ್ನು ಬಲೆಗೆ ಬೀಳಿಸಿದ ಸುಂದರಿ| ಲಕ್ಷ ಲಕ್ಷ ಪಂಗನಾಮ ಹಾಕಿ ಲಪಟಾಯಿಸಿ ಪರಾರಿ

ಸಮಗ್ರ ನ್ಯೂಸ್: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿ, ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ(60) ಜೊತೆ ಚಾಟಿಂಗ್ ಮಾಡಿದ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾಳೆ. ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಹಣ ಕಳೆದುಕೊಂಡು, ಸೈಬ‌ರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಿಜಯಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದರು. ಇವರಿಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಒಬ್ಬಳು ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಆಕೆ ಜತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದ ವಿಜಯ್ ಕುಮಾರ್ ಬಗ್ಗೆ

ಫೇಸ್‌ಬುಕ್‌ನಲ್ಲಿ ಬಣ್ಣ ಬಣ್ಣದ ಮಾತುಗಳಿಂದ ಅರ್ಚಕನನ್ನು ಬಲೆಗೆ ಬೀಳಿಸಿದ ಸುಂದರಿ| ಲಕ್ಷ ಲಕ್ಷ ಪಂಗನಾಮ ಹಾಕಿ ಲಪಟಾಯಿಸಿ ಪರಾರಿ Read More »

ಕೊಟ್ಟಿಗೆಹಾರ: ಗೂಗಲ್ ಮಿಸ್‌ಗೈಡ್| ರಾಣಿಝರಿಗೆ ಅಧಿಕಾರಿಗಳ ದೌಡು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಎಡ್ಜ್ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್ ನಲ್ಲಿ ಗೋಚರಿಸಿದ್ದು, ಸ್ಥಳಕ್ಕೆ ಆ.21 ರಂದು ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ ರಾಣಿ ಝರಿ ಪ್ರವಾಸಿತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ಗೂಗಲ್ ಮ್ಯಾಪ್‌ನಲ್ಲಿ ಬಿರುಕು ಕಂಡು ಬರುತ್ತಿರುವ ಹಿನ್ನೆಲೆ ಪುತ್ತೂರು ಉಪವಿಭಾಗಧಿಕಾರಿಗಳು ರಾಣಿಝರಿ ಸಮೀಪಬಾರಿ ಮಳೆಯಾಗುತ್ತಿರುವುದರಿಂದ `ಭೂಮಿಕುಸಿತವಾಗುವ ಸಂಭವವಿದೆ ಎಂದು ಚಿಕ್ಕಮಗಳೂರು ಉಪವಿಭಾಗಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೊಟ್ಟಿಗೆಹಾರ: ಗೂಗಲ್ ಮಿಸ್‌ಗೈಡ್| ರಾಣಿಝರಿಗೆ ಅಧಿಕಾರಿಗಳ ದೌಡು Read More »

ಸಂಪಾಜೆ: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು| ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಸಾವು

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಗ್ರಾಮದ ದೊಡ್ಡಡ್ಕ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಕಾರು ಚಾಲಕ ಇದೀಗ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಿರಾಜಪೇಟೆಯ 64 ವರ್ಷ ಪ್ರಾಯದ ಗಣೇಶ್ ಎಂಬವರು ಮೃತಪಟ್ಟ ದುರ್ದೈವಿ. ಇವರು ತಮ್ಮ ಮಗನನ್ನು ಮಂಗಳೂರಿನ ಏರ್‌ಪೋರ್ಟ್‌ಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ಪರಿಣಾಮ ಗಣೇಶ್ ರವರಿಗೆ ಎದೆಗೆ ಗಂಭೀರ ಗಾಯಗಳಾಯಿತು. ಕೂಡಲೇ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ

ಸಂಪಾಜೆ: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು| ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಸಾವು Read More »

ದಸರಾಕ್ಕೆ ಪೂರ್ವ ತಯಾರಿ/ ಗಜಪಯಣಕ್ಕೆ ನಾಗರಹೊಳೆಯಲ್ಲಿ ಚಾಲನೆ

ಸಮಗ್ರ ನ್ಯೂಸ್‌: ವಿಶ್ವವಿಖ್ಯಾತ ಮೈಸೂರು ದಸರಾದ ವಿಶೇಷ ಆಕರ್ಷಣೆಯಾದ ಜಂಬೂಸವಾರಿಯ ಆನೆಗಳನ್ನು ಸ್ವಾಗತಿಸುವ ಗಜಪಯಣಕ್ಕೆ ಬುಧವಾರ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಚಾಲನೆ ನೀಡಲಾಗಿದ್ದು, ಒಂಬತ್ತು ಆನೆಗಳು ಅರಮನೆ ನಗರಿಯತ್ತ ಹೆಜ್ಜೆ ಹಾಕಿದವು. ಮೈಸೂರು ದಸರಾಕ್ಕೆ ಆಗಮಿಸುವ ಅಭಿಮನ್ಯು ನೇತೃತ್ವದ ಗಜ ಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಭರ್ಜರಿ ಸ್ವಾಗತವನ್ನು ನೀಡಲಾಯಿತು. ಪ್ರತಿ ವರ್ಷ ಗಜಪಯಣದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕುಮ್ಮಿ ಆನೆಗಳು ದಸರಾ ಉತ್ಸವದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ತರಬೇತಿಗಾಗಿ ಮೈಸೂರಿಗೆ ಹೋಗುತ್ತವೆ. ಈ

ದಸರಾಕ್ಕೆ ಪೂರ್ವ ತಯಾರಿ/ ಗಜಪಯಣಕ್ಕೆ ನಾಗರಹೊಳೆಯಲ್ಲಿ ಚಾಲನೆ Read More »

ಶೇಖ್‌ ಹಸೀನಾರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಬಾಂಗ್ಲಾ ಸರಕಾರ

ಸಮಗ್ರ ನ್ಯೂಸ್‌: ಬಾಂಗ್ಲಾದೇಶದ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಮಾಜಿ ಸಂಸದರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಆಯ್ದ ದೇಶಗಳಿಗೆ ವೀಸಾ-ಮುಕ್ತ ಪ್ರಯಾಣದಂತಹ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದ ಈ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹಸೀನಾ ಅವರ ಆಡಳಿತದಲ್ಲಿ ಸಂಸದರಿಗೆ ನೀಡಲಾಗಿತ್ತು. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಶೇಖ್ ಹಸೀನಾ ಆಗಸ್ಟ್ 5ರಿಂದ ಭಾರತದಲ್ಲಿ ನೆಲೆಸಿದ್ದು, ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅವರ ಸುರಕ್ಷತೆಗೆ ಬೆದರಿಕೆಗಳ ಮಧ್ಯೆ

ಶೇಖ್‌ ಹಸೀನಾರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಬಾಂಗ್ಲಾ ಸರಕಾರ Read More »

ರೇವಣ್ಣ ದಂಪತಿ ಸೇರಿ ಒಂಬತ್ತು ಅರೋಪಿಗಳಿಗೆ ಸಮನ್ಸ್‌/ ಖುದ್ದು ಹಾಜರಾಗುವಂತೆ ಸೂಚನೆ

ಸಮಗ್ರ ನ್ಯೂಸ್‌: ಮೈಸೂರು ಜಿಲ್ಲೆಯ ಕೆಆರ್ ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿ 9 ಆರೋಪಿಗಳಿಗೆ, ಆಗಸ್ಟ್ 28 ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ನಿಂದ ಸಮನ್ಸ್‌ ಜಾರಿ ಮಾಡಲಾಗಿದೆ. ಸತೀಶ್ ಬಾಬು, ಮನುಗೌಡ, ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು, ಎಸ್.ಟಿ.ಕೀರ್ತಿ ಮತ್ತು ಅಜಿತ್‌ ಕುಮಾರ್‌ಗೆ ಐಪಿಸಿ ಸೆಕ್ಷನ್ 364 A ಕೈಬಿಟ್ಟು ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ. ಆರೋಪಿ ಭವಾನಿ ರೇವಣ್ಣಗೆ ಹೈಕೋರ್ಟ್ ನೀಡಿದ್ದ

ರೇವಣ್ಣ ದಂಪತಿ ಸೇರಿ ಒಂಬತ್ತು ಅರೋಪಿಗಳಿಗೆ ಸಮನ್ಸ್‌/ ಖುದ್ದು ಹಾಜರಾಗುವಂತೆ ಸೂಚನೆ Read More »

ಬಿಬಿಎಂಪಿ ಮಾರ್ಗಸೂಚಿ/ 2000 ಪಿಜಿಗಳು ನೋಂದಣಿ

ಸಮಗ್ರ ನ್ಯೂಸ್‌: ಕೋರಮಂಗಲದ ವಸತಿ ಗೃಹದಲ್ಲಿ ಯುವತಿ ಬರ್ಬರ ಹತ್ಯೆ ಘಟನೆ ಬೆನ್ನಲ್ಲೇ, ನೋಂದಣಿಯಾಗದ ಪೇಯಿಂಗ್ ಗೆಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದ್ದೇ ತಡ ಇದೀಗ 2000 ಪಿಜಿಗಳು ನೋಂದಣಿಯಾಗಿವೆ. ಇತ್ತೀಚೆಗಷ್ಟೇ ಪಾಲಿಕೆ ನಗರ ವ್ಯಾಪ್ತಿಯ’ಪೇಯಿಂಗ್ ಗೆಸ್ಟ್’ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಮಾರ್ಗಸೂಚಿ ಬೆನ್ನಲ್ಲೇ ಇದೀಗ ಪಾಲಿಕೆ ಅಧಿಕಾರಿಗಳು ಪಿಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದು, ಮಾರ್ಗಸೂಚಿ ಅನುಸರಿಲದ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮಾರ್ಗೂಸೂಚಿಯಲ್ಲಿ ಹಲವು ಅಂಶಗಳನ್ನು ತಿಳಿಸಲಾಗಿದೆ.

ಬಿಬಿಎಂಪಿ ಮಾರ್ಗಸೂಚಿ/ 2000 ಪಿಜಿಗಳು ನೋಂದಣಿ Read More »

ಚಿಕ್ಕಮಗಳೂರು: ಸಹೋದರನನ್ನೇ ಮನಸ್ಸೋ ಇಚ್ಛೆ ಕೊಚ್ಚಿ ಕೊಂದ ಸಹೋದರಿಯರು

ಸಮಗ್ರ ನ್ಯೂಸ್ : ಸಹೋದರಿಯರು ಸಹೋದರನನ್ನು ಮನಸ್ಸೋ ಇಚ್ಛೆ ಕೊಚ್ಚಿ ಕೊಂದ ಘಟನೆ ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ನಡೆದಿದೆ. ರಾಘವೇಂದ್ರ 40 ಮೃತ ದುರ್ದೈವಿ,ಕೆಲ ದಿನಗಳಿಂದ ಆಸ್ತಿಗಾಗಿ ಕುಟುಂಬಸ್ಥರ ಜೊತೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣದಿಂದ ಇಂದು ಬೆಳ್ಳಂಬೆಳಗ್ಗೆ ಬಾವನ ಜೊತೆಗೂಡಿ ಮೂವರು ಸಹೋದರಿಯರುಸಹೋದರನ ಕಣ್ಣಿಗೆ ಖಾರದ ಪುಡಿ ಎರಚಿ ಮನಸ್ಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತರೀಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ

ಚಿಕ್ಕಮಗಳೂರು: ಸಹೋದರನನ್ನೇ ಮನಸ್ಸೋ ಇಚ್ಛೆ ಕೊಚ್ಚಿ ಕೊಂದ ಸಹೋದರಿಯರು Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ಚಾರ್ಜ್ ಶೀಟ್ನಲ್ಲಿ ನಟ ದರ್ಶನ್ ನನ್ನು ಎ 1 ಆರೋಪಿ ಮಾಡಲು ತಯಾರಿ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಿಂದ ಎ1 ಆರೋಪಿ ಸ್ಥಾನಕ್ಕೆ ಏರಿದ ದರ್ಶನ್ ಗೆ ಚಾರ್ಜ್ ಶೀಟ್ ಬಡ್ತಿ ನೀಡಲು ತಯಾರಿ ನಡೆದಿದೆ. ಕೊಲೆ ಕೇಸಿನ ತನಿಖೆ ವೇಳೆ ದರ್ಶನ್ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ (Pavithra Gowda) ಹೆಸರಿಸಲಾಗಿತ್ತು. ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯ ಸಿದ್ಧತೆಯಲ್ಲಿ ಎ2 ಇಂದ ಎ1 ಗೆ ಬಡ್ತಿ ನೀಡಲು ಸಿದ್ಧತೆಗಳು ಆರಂಭವಾಗಿದೆ. ಇದು ದರ್ಶನ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡೋದು ಫಿಕ್ಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ| ಚಾರ್ಜ್ ಶೀಟ್ನಲ್ಲಿ ನಟ ದರ್ಶನ್ ನನ್ನು ಎ 1 ಆರೋಪಿ ಮಾಡಲು ತಯಾರಿ Read More »