August 2024

ಪುತ್ತೂರು: ಬಸ್ ನಿಲ್ಲಿಸಿಲ್ಲವೆಂದು ಕರಾರಸಾನಿ ಸಿಬ್ಬಂದಿಯಿಂದ ಚಾಲಕನಿಗೆ ಹಲ್ಲೆ; ದೂರು ದಾಖಲು

ಸಮಗ್ರ ನ್ಯೂಸ್: ಬಸ್‌ ನಿಲ್ಲಿಸಿಲ್ಲವೆಂದು ಚಾಲಕನಿಗೆ ಕೆಎಸ್‌ಆರ್‌ಟಿಸಿ ಸಿಬಂದಿ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ಶುಕ್ರವಾರ ನಡೆದಿದೆ. ಸವಣೂರು ಪೆಟ್ರೋಲ್‌ ಪಂಪ್‌ ಬಳಿಯ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಸಿಬಂದಿ ನಾರಾಯಣ ಅವರು ಚಾಲಕ ಭರತ್‌ಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಸ್‌ ಸಹಪ್ರಯಾಣಿಕರು ಘಟನೆಯ ವೀಡಿಯೋ ಚಿತ್ರೀಕರಿಸಿದ್ದು, ವೈರಲ್‌ ಆಗಿದೆ. ಚಾಲಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದು, ಅವರು ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲ್ಲೆ ಖಂಡಿಸಿ ಬಸ್‌ ಸಂಚಾರ […]

ಪುತ್ತೂರು: ಬಸ್ ನಿಲ್ಲಿಸಿಲ್ಲವೆಂದು ಕರಾರಸಾನಿ ಸಿಬ್ಬಂದಿಯಿಂದ ಚಾಲಕನಿಗೆ ಹಲ್ಲೆ; ದೂರು ದಾಖಲು Read More »

ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ಜಗಳ| ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದು, ಪತ್ನಿ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಸಮೀಪದ ಕಾರ್ಕಳ ಕಡಿದ ಹೆದ್ದಾರಿ ಎಂಬಲ್ಲಿ ನಡೆದಿದೆ. ಕೊಲೆಯಾದ ಜಯಶ್ರೀ (28) ಪತಿ ಕಿರಣ್‌ ಉಪಾಧ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಲಿಗ್ರಾಮ ಸಮೀಪದಲ್ಲಿರುವ ಕಾರ್ಕಡದ ಕಡಿದ ಹೆದ್ದಾರಿಯ ಅಂಗನವಾಡಿ ಕೇಂದ್ರದ ಬಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಈ ದಂಪತಿ ವಾಸವಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ದಂಪತಿಗೆ ಮದುವೆಯಾಗಿತ್ತು. ಮುಂಜಾನೆ

ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ಜಗಳ| ಕೊಲೆಯಲ್ಲಿ ಅಂತ್ಯ Read More »

ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ/ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ಸಮಗ್ರ ನ್ಯೂಸ್‌: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರಿ/ಅನುದಾನಿತ/ ಅನುದಾನರಹಿತ ಶಾಲೆಗಳ ಮೈದಾನ ಮತ್ತು ಆವರಣಗಳನ್ನು ಶೈಕ್ಷಣಿಕ ಚಟುವಟಿಕೆ ಅಲ್ಲದೇ ಮತ್ಯಾವುದಕ್ಕೂ ಬಳಸಬಾರದು ಎಂದು ಸೂಚನೆ ನೀಡಲಾಗಿದೆ. ಸದ್ಯ ಇಲಾಖೆಯ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಷ್ಟಾಗಿಯೂ ನಿಯಮಗಳ ಉಲ್ಲಂಘನೆಯಾದರೆ ಶಾಲಾ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ. ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ನಡೆಯುತ್ತಿದ್ದ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ.

ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ/ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯಿಂದ ಸುತ್ತೋಲೆ Read More »

ಅನಿಲ್ ಅಂಬಾನಿ ಸೇರಿದಂತೆ 24‌ ಪ್ರಮುಖ ಕಂಪನಿಗಳಿಗೆ ೫ ವರ್ಷ ನಿಷೇಧ ಹೇರಿದ ಸೆಬಿ

ಸಮಗ್ರ ನ್ಯೂಸ್: ಉದ್ಯಮಿ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ನ ಮಾಜಿ ಅಧಿಕಾರಿಗಳು ಸೇರಿದಂತೆ ಇತರ 24 ಸಂಸ್ಥೆಗಳನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಸೆಬಿ ಅಂಬಾನಿಗೆ 25 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ನಿರ್ದೇಶಕ ಅಥವಾ ಕೀ ಮ್ಯಾನೇಜ್ಮೆಂಟ್ ಪರ್ಸನಲ್ (ಕೆಎಂಪಿ) ಅಥವಾ ಮಾರುಕಟ್ಟೆ ನಿಯಂತ್ರಕದಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಸೇರಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ 5 ವರ್ಷಗಳ ಅವಧಿಗೆ ಸಂಬಂಧ ಹೊಂದದಂತೆ ನಿರ್ಬಂಧಿಸಿದೆ. ಅಲ್ಲದೆ, ನಿಯಂತ್ರಕವು

ಅನಿಲ್ ಅಂಬಾನಿ ಸೇರಿದಂತೆ 24‌ ಪ್ರಮುಖ ಕಂಪನಿಗಳಿಗೆ ೫ ವರ್ಷ ನಿಷೇಧ ಹೇರಿದ ಸೆಬಿ Read More »

ಮಂಗಳೂರು: ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಭೂ ಮಂಜೂರಾತಿಗೆ ಹೈ ಕೋರ್ಟ್ ತಡೆಯಾಜ್ಞೆ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನೊಳಗೆ, ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ, 2022 ರಲ್ಲಿ ಮಂಜೂರಾಗಿದ್ದ 2 ಎಕರೆ ಜಮೀನಿಗೆ ಮಾನ್ಯ ಹೈಕೋರ್ಟ್ ಆ. 22 ರಂದು ತಡೆಯಾಜ್ಞೆ ನೀಡಿದೆ. ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ಮಾಡಿರುವ ಜಮೀನು, 1982 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸರ್ವೇ ನಂಬರ್ 149/2 ರಲ್ಲಿ 8.40 ಎಕರೆ ಜಮೀನನು ಮಂಜೂರಾಗಿದ್ದು, ಅದೇ ಜಾಗದಲ್ಲಿ ಈಗ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ 2 ಎಕರೆ ಜಮೀನು ಮಂಜೂರು

ಮಂಗಳೂರು: ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಭೂ ಮಂಜೂರಾತಿಗೆ ಹೈ ಕೋರ್ಟ್ ತಡೆಯಾಜ್ಞೆ Read More »

35 ದೇಶಗಳಿಗೆ ಉಚಿತ ವೀಸಾ ಪ್ರವೇಶ ನೀಡಲು ನಿರ್ಧರಿಸಿದ ಶ್ರೀಲಂಕಾ/ ಅಕ್ಟೋಬರ್‌ನಿಂದ ಜಾರಿ

ಸಮಗ್ರ ನ್ಯೂಸ್‌: ಭಾರತ ಸೇರಿದಂತೆ 35 ದೇಶಗಳಿಗೆ ಅಕ್ಟೋಬರ್ 1 ರಿಂದ ಉಚಿತ ವೀಸಾ ಪ್ರವೇಶವನ್ನು ನೀಡಲು ಶ್ರೀಲಂಕಾ ನಿರ್ಧರಿಸಿದೆ ಎಂದು ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯದ ಸಲಹೆಗಾರ ಹರಿನ್ ಫೆರ್ನಾಂಡೋ ಹೇಳಿಕೆಯನ್ನು ಉಲ್ಲೇಖಿಸಿ ಶ್ರೀಲಂಕಾ ಮೂಲದ ಡೈಲಿ ಮಿರರ್ ವರದಿ ಮಾಡಿದೆ. ಭಾರತವನ್ನು ಹೊರತುಪಡಿಸಿ 34 ಇತರ ರಾಷ್ಟ್ರಗಳನ್ನು ಇದು ಒಳಗೊಂಡಿದೆ. ಪ್ರಮುಖ ಹೆಸರುಗಳಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಇಸ್ರೇಲ್, ನ್ಯೂಜಿಲ್ಯಾಂಡ್, ನೇಪಾಳ, ಇಂಡೋನೇಷಿಯಾ, ಮಲೇಷ್ಯಾ, ಥೈಲ್ಯಾಂಡ್, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿವೆ. ಶ್ರೀಲಂಕಾದ

35 ದೇಶಗಳಿಗೆ ಉಚಿತ ವೀಸಾ ಪ್ರವೇಶ ನೀಡಲು ನಿರ್ಧರಿಸಿದ ಶ್ರೀಲಂಕಾ/ ಅಕ್ಟೋಬರ್‌ನಿಂದ ಜಾರಿ Read More »

ವಾಲ್ಮೀಕಿ ನಿಗಮದ ಅಕ್ರಮ| ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕ್ಲೀನ್ ಚಿಟ್!!

ಸಮಗ್ರ ನ್ಯೂಸ್: ಮಹರ್ಷಿ ವಾಲ್ಮೀಕಿ ನಿಗಮದ ಲೆಕ್ಕಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳಿಂದ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿ ಎಸ್‌ಐಟಿ ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ್ ಅವರ ಡೆತ್ ನೋಟ್ ಹಾಗೂ ನಾಗೇಂದ್ರ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿರುವ ಎಸ್‌ಐಟಿ ತಂಡ ಇಂದು 300 ಪುಟಗಳ

ವಾಲ್ಮೀಕಿ ನಿಗಮದ ಅಕ್ರಮ| ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕ್ಲೀನ್ ಚಿಟ್!! Read More »

ಯಾರು ಏನೇ ಬೈದರೂ ನೀರಿನ ಬೆಲೆ ಏರಿಕೆ ಮಾಡೇ ಮಾಡುತ್ತೇನೆ: ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡಬೇಕಿದೆ. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಕೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. 8-9 ವರ್ಷದಿಂದ ನೀರಿನ ದರ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ

ಯಾರು ಏನೇ ಬೈದರೂ ನೀರಿನ ಬೆಲೆ ಏರಿಕೆ ಮಾಡೇ ಮಾಡುತ್ತೇನೆ: ಡಿ.ಕೆ ಶಿವಕುಮಾರ್ Read More »

ಹೊಸ ಪಕ್ಷದ ಧ್ವಜ ಬಿಡುಗಡೆ ಮಾಡಿದ ದಳಪತಿ ವಿಜಯ್‌

ಸಮಗ್ರ ನ್ಯೂಸ್: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರು ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂನ ಧ್ವಜ ಮತ್ತು ಚಿಹ್ನೆಯನ್ನು ಇಂದು ಅನಾವರಣಗೊಳಿಸಿದ್ದಾರೆ. ಮೆರೂನ್ (ಕೆಂಗಂದು) ಮತ್ತು ಹಳದಿ ಬಣ್ಣವಿರುವ ಧ್ವಜದ ಮಧ್ಯದಲ್ಲಿ ಎರಡು ಆನೆಗಳು ಮತ್ತು ನಕ್ಷತ್ರಗಳಿಂದ ಸುತ್ತುವರಿದ ನವಿಲಿನ ಗುರುತು ಇದೆ. ಈ ಧ್ವಜವನ್ನು ಪನೈಯೂರ್ ಪಕ್ಷದ ಕಚೇರಿಯಲ್ಲಿ ವಿಜಯ್ ಧ್ವಜಾರೋಹಣ ಮಾಡಿ ಬಳಿಕ ರಾಜಕೀಯ ಪಕ್ಷದ ಅಧಿಕೃತ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಫೆಬ್ರವರಿಯಲ್ಲಿ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ

ಹೊಸ ಪಕ್ಷದ ಧ್ವಜ ಬಿಡುಗಡೆ ಮಾಡಿದ ದಳಪತಿ ವಿಜಯ್‌ Read More »

ಸಿಎಂ ನೇತೃತ್ವದಲ್ಲಿ ಇಂದು ಸಂಪುಟ ಸಭೆ.. ಬೆಂಗಳೂರಿನಲ್ಲಿ ಸುರಂಗ ಮಾರ್ಗಕ್ಕೆ ಅಸ್ತು..!

ಸಮಗ್ರ ನ್ಯೂಸ್: ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು. ಇದರಲ್ಲಿ ಬೆಂಗಳೂರಿನ ಸುರಂಗ ಮಾರ್ಗ, ಟಿಡಿಆರ್ ಸೇರಿದಂತೆ ಪ್ರಮುಖ ಕಾಮಗಾರಿಗಳ ಸೇರಿದಂತೆ 40ಕ್ಕೂ ಹೆಚ್ಚು ಅಭಿವೃದ್ಧಿ ವಿಷಯಗಳ ಮೇಲೆ ಚರ್ಚೆ ಮಾಡಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಬೆಂಗಳೂರಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. 250 ಅಡಿ ಎತ್ತರದ 500 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಅನುಮೋದಿಸಲಾಗಿದ್ದು, ಇನ್ನೂ ಕೂಡ

ಸಿಎಂ ನೇತೃತ್ವದಲ್ಲಿ ಇಂದು ಸಂಪುಟ ಸಭೆ.. ಬೆಂಗಳೂರಿನಲ್ಲಿ ಸುರಂಗ ಮಾರ್ಗಕ್ಕೆ ಅಸ್ತು..! Read More »