ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಶಂಕಿತ ಉಗ್ರನ ಬಂಧಿಸಿದ ಎನ್ಐಎ

ಸಮಗ್ರ ನ್ಯೂಸ್: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾಷ್ಟ್ರೀಯ ತನಿಖಾ ದಳ (ಎನ್‌ ಐಎ) ಅಧಿಕಾರಿಗಳು ಓರ್ವ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಶಂಕಿತ ಭಯೋತ್ಪಾದಕ ತಮಿಳುನಾಡು ಹಿಜ್ಬ್-ಉತ್-ತಹ್ರೀರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎಂದು ವರದಿ ತಿಳಿಸಿದೆ.

Ad Widget ... ..

ಹಿಜ್ಬ್-ಉತ್-ತಹ್ರೀರ್ ಪ್ರಕರಣದ ಆರೋಪಿ, ಶಂಕಿತ ಭಯೋತ್ಪಾದಕ ನಿನ್ನೆ ಬೆಳಿಗ್ಗೆ 11.45 ಕ್ಕೆ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಪರಾರಿಯಾಗಲು ಯೋಜಿಸಿದ್ದ.‌ ಈ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರನ್ನು ಬಂಧಿಸಿದೆ.
ಅಜೀಜ್ ಅಹ್ಮದ್ ಎಂದು ಗುರುತಿಸಲ್ಪಟ್ಟ ಶಂಕಿತ ಭಯೋತ್ಪಾದಕನನ್ನು ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಬಂಧಿಸಲಾಯಿತು ಎಂದು ವರದಿ ತಿಳಿಸಿದೆ.

Ad Widget

Leave a Comment

Your email address will not be published. Required fields are marked *