Ad Widget .

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮನೆಗೆ ಸುಳ್ಯದ ಗೋವು| ಮಲೆನಾಡು ಗಿಡ್ಡ ತಳಿಯನ್ನು ದಾನ ಮಾಡಿದ ಅಕ್ಷಯ್ ಆಳ್ವ

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಗೋವಿನ ಮೇಲಿನ ವಿಶೇಷ ಕಾಳಜಿಯಿಂದ ಮಲೆನಾಡು ಗಿಡ್ಡ ತಳಿಯ ಗೋವನ್ನು ಸುಳ್ಯದಿಂದ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಅವರು ಮಲೆನಾಡು ಗಿಡ್ಡ ತಳಿಯ ನಾಲ್ಕು (ಎರಡು ತಾಯಿ, ಎರಡು ಕರು) ಗೋವುಗಳನ್ನು ಬೆಂಗಳೂರಿನ ಮನೆಗೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು.

Ad Widget . Ad Widget .

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಸಮೀಪದ ಕೃಷಿಕ ಅಕ್ಷಯ್‌ ಆಳ್ವ ಅವರು ಕೂಡ ಮಲೆನಾಡು ಗಿಡ್ಡ ತಳಿ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಸಕ್ತರಿಗೆ ಮಲೆನಾಡು ಗಿಡ್ಡ ತಳಿಯನ್ನು ನೀಡುತ್ತಿದ್ದಾರೆ.

Ad Widget . Ad Widget .

ಶಾಲಿನಿ ರಜನೀಶ್‌ ಅವರು ಮಲೆನಾಡು ಗಿಡ್ಡ ತಳಿಯ ಗೋವು ಸಾಕಲು ಆಸಕ್ತಿ ವಹಿಸಿ, ಕಡಬದ ಕೊಯಿಲ ಪಶುಸಂಗೋಪನಾ ಇಲಾಖೆ ನಿರ್ದೇಶಕ ಪ್ರಸನ್ನ ಹೆಬ್ಬಾರ್‌ ಮೂಲಕ ಮಾಹಿತಿ ಪಡೆದು ಅಕ್ಷಯ್‌ ಆಳ್ವರನ್ನು ಸಂಪರ್ಕಿಸಿದ್ದಾರೆ. ಅಕ್ಷಯ್‌ ತಮ್ಮ ಬೇಡಿಕೆಗಳನ್ನು ತಿಳಿಸಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ ಶಾಲಿನಿ ರಜನೀಶ್‌ ಅವರಿಗೆ ಮಲೆನಾಡು ಗಿಡ್ಡ ತಳಿಯ ನಾಲ್ಕು ಗೋವುಗಳನ್ನು ಹಸ್ತಾಂತರಿಸಲಾಗಿದೆ.

ತಾವು ಪಡೆದ ಗೋವುಗಳನ್ನು ಸ್ವತಃ ಶಾಲಿನಿ ರಜನೀಶ್‌ ಅವರೇ ಮನೆಯವರೊಂದಿಗೆ ಸಾಕಿ-ಸಲಹಲಿದ್ದಾರೆ. ಅದಕ್ಕಾಗಿ ಹಟ್ಟಿಯನ್ನೂ ನಿರ್ಮಿಸಿದ್ದಾರೆ.

ಅಕ್ಷಯ್‌ ಅವರಲ್ಲಿದ್ದ ಐದು ವರ್ಷ ಪ್ರಾಯದ ಹಂಸಿ ಹೆಸರಿನ ಮಲೆನಾಡು ಗಿಡ್ಡ ತಳಿಯ ತಾಯಿ ಹಾಗೂ ಒಂದೂವರೆ ತಿಂಗಳಿನ ಕರು ಹಾಗೂ ಈ ಹಿಂದೆ ಅಕ್ಷಯ್‌ ಅವರು ಬಾಳುಗೋಡಿಗೆ ನೀಡಲಾಗಿದ್ದ ಸ್ವರ್ಣ ಕಪಿಲ ಹೆಸರಿನ ಎರಡೂವರೆ ವರ್ಷದ ತಾಯಿ ಹಾಗೂ ಎರಡೂವರೆ ತಿಂಗಳಿನ ಕರುವನ್ನು ಗುರುವಾರ ಮುರುಳ್ಯದಿಂದ ವಾಹನದ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ. ಈ ಸಂದರ್ಭ ಹಂಸಿ ದನ ಕಣ್ಣೀರಿಟ್ಟ ಘಟನೆಯೂ ನಡೆದಿದೆ. ಲಾಖೆಯ ನಿಯಮಾವಳಿಯಂತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಗೋವನ್ನು ಬೆಂಗಳೂರಿಗೆ ಸಾಗಿಸಲಾಗಿದೆ.

Leave a Comment

Your email address will not be published. Required fields are marked *