ಸಮಗ್ರ ನ್ಯೂಸ್: ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್‌ಗೆ ಪೊಲೀಸರು ಅಡ್ಡಗಾಲು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಮಾಡೆಲ್‌ವೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ಪಡುಕೆರೆ ಬೀಚ್‌ನಲ್ಲಾದ ಕಹಿ ಅನುಭವವನ್ನು ಮಾಡೆಲ್ ಹಂಚಿಕೊಂಡಿದ್ದಾರೆ. ಬೀಚ್‌ನಲ್ಲಿ ನನ್ನ ಪತಿ ಬಿಕಿನಿ ಫೋಟೊಶೂಟ್ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬಿಕಿನಿ ಹಾಕಿಕೊಂಡು ಫೋಟೊಶೂಟ್ ಮಾಡಿಸಲು ಯಾರು ಪರ್ಮಿಷನ್ ಕೊಟ್ಟಿದ್ದು ಯಾರು? ಬಟ್ಟೆ ಬದಲಿಸಿ ಎಂದು ಸೂಚಿಸಿದ್ದರಂತೆ. ಇಲ್ಲದೇ ಹೋದರೆ ಸ್ಥಳೀಯರು ನಿಮ್ಮ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಹೇಳಿದ್ದರಂತೆ.
ಆಗ ಮಾಡೆಲ್‌ನ ಪತಿ ಪ್ರತಿಕ್ರಿಯಿಸಿ ಬೀಚ್‌ನಲ್ಲಿ ಬಿಕಿನಿ ಧರಿಸುವುದು ಯಾವುದೇ ಅಪರಾಧವಲ್ಲ. ಸಾರ್ವಜನಿಕ ಸ್ಥಳದಲ್ಲಿ ಫೋಟ್‌ಶೂಟ್ ಮಾಡಲು ಯಾವುದೇ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರು ಎಂದು ಮಾಡೆಲ್ ಪ್ರಶ್ನೆ ಮಾಡಿದ್ದಾರೆ. ಬೀಚ್ ಸಾರ್ವಜನಿಕ ಪ್ರದೇಶ ಅಲ್ಲಿ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಪೊಲೀಸರಿಗೆ ಮಾಡೆಲ್ ಪ್ರಶ್ನೆ ಮಾಡಿದ್ದಾಳೆ.
ಇದೇ ವಿಚಾರ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ತುಳುನಾಡಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಕಿನಿ ಫೋಟೋಶೂಟ್‌ಗೆ ಉಡುಪಿಯಲ್ಲಿ ಅವಕಾಶವಿಲ್ಲ. ಅಸಭ್ಯ ವರ್ತನೆಗೆ ತುಳುನಾಡಲ್ಲಿ ಅವಕಾಶವಿಲ್ಲ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.