Ad Widget .

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಚೌಟ ನೇತೃತ್ವದಲ್ಲಿ ಪರ್ಸನಲ್ ಮೀಟಿಂಗ್!! ಕುತೂಹಲ ಮೂಡಿಸಿದ ಕೇಸರಿ ಪಾಳಯದ ನಡೆ

ಸಮಗ್ರ ನ್ಯೂಸ್: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಗುರುವಾರ ರಹಸ್ಯ ಸಭೆ ನಡೆದಿದ್ದು ಕುತೂಹಲ ಮೂಡಿಸಿದೆ.

Ad Widget . Ad Widget .

ಬಿಜೆಪಿ ಪಾಳಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯ ಜತೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರು ಇನ್ನಿಲ್ಲದ ಕಸರತ್ತು ನಡೆಸಿದ್ದು ಹೀಗಾಗಿ ಚೌಟ ಅವರ ನೇತೃತ್ವದಲ್ಲಿ ಗೌಪ್ಯ ಸಭೆ ನಡೆದಿದೆ ಎನ್ನಲಾಗಿದೆ.

Ad Widget . Ad Widget .

ಸುಳ್ಯ ಕ್ಷೇತ್ರದ ಭೇಟಿ ನಡುವೆ ಸಂಸದ ಚೌಟ ಅವರು ದಿಢೀರ್ ಆಗಿ ಪುತ್ತೂರು ಪಕ್ಷದ ಕಚೇರಿಗೆ ಆಗಮಿಸಿದ್ದರು. ಸಂಸದರ ಆಗಮನದ ಬಗ್ಗೆ ಬಿಜೆಪಿಯ ಮಾಧ್ಯಮ ಗ್ರೂಪ್ ನಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲಾಯಿತು. ಹೀಗಾಗಿ ಪತ್ರಕರ್ತರು ಆಗಮಿಸಿದ್ದರು. ಸಭೆ ಆರಂಭಗೊಂಡ ಬೆನ್ನಲ್ಲೇ ಸಂಸದ ಬ್ರಿಜೇಶ್ ಚೌಟ ಅವರು ಪತ್ರಕರ್ತರನ್ನು ಗಮನಿಸಿ ಹೊರ ಹೋಗುವಂತೆ ಸೂಚಿಸಿದರು.

ಪತ್ರಕರ್ತರು ಹೊರ ಹೋದ ಬಳಿಕ ಸಂಸದ ಚೌಟ ಭಾಷಣ ಆರಂಭಿಸಿದರು. ಸಭೆಯಲ್ಲಿ ಪುತ್ತಿಲ ಪರಿವಾರ, ಬಿಜೆಪಿ ಮುಖಂಡರು ಉಪಸ್ಥಿತರಿದ್ದು ರಹಸ್ಯ ಸಭೆ ಕುತೂಹಲ ಮೂಡಿಸಿದೆ.

Leave a Comment

Your email address will not be published. Required fields are marked *