Ad Widget .

ಪುತ್ತೂರು: ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಹಿನ್ನೆಲೆ| ಪೊಲೀಸರಿಂದ ದಿಢೀರ್ ದಾಳಿ

ಸಮಗ್ರ ನ್ಯೂಸ್: ಮನೆಯೊಂದಕ್ಕೆ ದಿಢೀರ್‌ ದಾಳಿ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ ಪುತ್ತೂರು ನಗರದ ಹೊರವಲಯ ಬನ್ನೂರಿನಲ್ಲಿ ಆ 29 ರಂದು ಸಂಜೆ ನಡೆದಿದೆ.

Ad Widget . Ad Widget .

ಆ ಮನೆಯಲ್ಲಿ ಅನುಮಾನಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ . ಪೊಲೀಸರು ಭೇಟಿ ನೀಡಿದ ವೇಳೆ ಆ ಮನೆಯಲ್ಲಿ ಮನೆ ಒಡತಿಯ ಯೊಂದಿಗೆ ಮತ್ತೊಬ್ಬರು ಮಹಿಳೆಯೂ ಇದ್ದರು. ಇವರ ಹೊರತು ಮನೆಯಲ್ಲಿ ಬೇರೆ ಯಾರು ಇರಲಿಲ್ಲ ಎನ್ನಲಾಗಿದೆ .

Ad Widget . Ad Widget .

ವಿಚಾರಣೆ ವೇಳೆ ಇನ್ನೊರ್ವ ಮಹಿಳೆಯೂ ತಾನೂ ಮನೆ ಒಡತಿಯ ಸ್ನೇಹಿತೆ ಎಂದು ಪೊಲೀಸರಿಗೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಇಬ್ಬರು ಮಹಿಳೆಯರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದು ಕಳೆದ ಕೆಲ ದಿನಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಹಿನ್ನಲೆಯಲ್ಲಿ ಹಾಗೂ ಮನೆ ಸಮೀಪ ಅನುಮಾನಸ್ಪದ ವ್ಯಕ್ತಿಗಳು ಭೇಟಿ ನೀಡಿದ ಹಿನ್ನಲೆಯಲ್ಲಿ ಸಂಶಯದ ಮೇರೆಗೆ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ದಾಳಿಯ ವೇಳೆ ಸಾರ್ವಜನಿಕರ ಆರೋಪವನ್ನು ಪುಷ್ಟಿಕರಿಸುವ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ಹೇಳಲಾಗುತ್ತಿದೆ .

Leave a Comment

Your email address will not be published. Required fields are marked *