ಕೊಟ್ಟಿಗೆಹಾರ: ಕುಸಿಯುವ ಹಂತದಲ್ಲಿ ಅತ್ತಿಗೆರೆ ಅಂಗನವಾಡಿ ಕೇಂದ್ರ | ಪುಟಾಣಿಗಳ ಕಲಿಕಾ ಕೇಂದ್ರ ಈಗ ಹಾವುಗಳ ಆವಾಸಸ್ಥಾನ!!

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಅಂಗನವಾಡಿ ಕೇಂದ್ರ ತೀರಾ ಶಿಥಿಲಾವಸ್ತೆಯಲ್ಲಿದ್ದು ಕುಸಿಯುವ ತಲುಪಿದೆ. ದುಃಸ್ಥಿತಿ ಬಗ್ಗೆ ಅನೇಕ ಬಾರಿ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರು ಯಾವುದೇ ಪ್ರಯೋಜನ ಆಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

Ad Widget ... ..

ಅಂಗನವಾಡಿಯ ಈ ಶಿಥಿಲ ಸ್ಥಿತಿಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಸುತ್ತಮುತ್ತ ಪೊದೆಗಳು ಇರುವುದರಿಂದ ಹಾವುಗಳ ಕಾಟವು ಅಧಿಕವಾಗಿದ್ದು ಕಳೆದ ಒಂದು ವಾರದಲ್ಲಿ ಮೂರು ಬಾರಿ ಹಾವು ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Ad Widget

ಶಿಥಿಲ ಗೊಂಡ ಕಟ್ಟಡವನ್ನು ದುರಸ್ತಿಪಡಿಸುವ ಬದಲಾಗಿ, ಹೊಸದಾಗಿ ಕಟ್ಟಡವನ್ನು ನಿರ್ಮಿಸಬೇಕು ಅಲ್ಲಿಯವರೆಗೆ, ತಾತ್ಕಾಲಿಕವಾಗಿ ಅಂಗನವಾಡಿ ಕೇಂದ್ರವನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸಬೇಕು ಎನ್ನುವ ಅಭಿಪ್ರಾಯ ಹಲವರದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಈ ನಿಟ್ಟಿನಲ್ಲಿ ಗಮನ ಹರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *