Ad Widget .

ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್…ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಎಂಟ್ರಿ..?

ಸಮಗ್ರ ನ್ಯೂಸ್: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಇದೀಗ ಕೋರ್ಟ್‌ ಆದೇಶದ ಮೇರೆಗೆ ಬಳ್ಳಾರಿ ಜೈಲಿಗೆ ದರ್ಶನ್ ನನ್ನು ಸ್ಥಳಾಂತರ ಮಾಡಲಾಗಿದೆ. ಬಿಗಿ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್‌ನನ್ನು ಕರೆತರಲಾಯಿತು. ಬೆಳಗ್ಗೆ 10 ಗಂಟೆ ಸುಮಾರಿಗೆ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಕರೆತರಲಾಯಿತು.

Ad Widget . Ad Widget .

ಇನ್ನೂ ಪೊಲೀಸರು ಮಾಧ್ಯಮಗಳ ಕಣ್ತಪ್ಪಿಸಿ ದರ್ಶನ್‌ನನ್ನು ಹೈದರ್‌ಬಾದ್ ರಸ್ತೆಯಲ್ಲಿ ಕರೆದುಕೊಂಡು ಹೋದರು. ಬಳ್ಳಾರಿಗೆ ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮಾರ್ಗವಾಗಿ ಕರೆದುಕೊಂಡು ಹೋಗಿದ್ದಾರೆ. ಎರಡು ಬೊಲೇರೋ ಹಾಗೂ ಒಂದು ಟಿಟಿ ವಾಹನ ಪ್ರತ್ಯೇಕವಾಗಿ ಗುರುವಾರ ಬೆಳಗ್ಗೆ 5:28ಕ್ಕೆ ದೇವನಹಳ್ಳಿ ಟೋಲ್ ಪಾಸ್ ಆದ ದೃಶ್ಯ ಲಭ್ಯವಾಗಿದೆ. ಪೊಲೀಸರು ದರ್ಶನ್ ಇದ್ದ ವಾಹನಕ್ಕೆ ಸಂಪೂರ್ಣ ಬಟ್ಟೆ ಕಟ್ಟಿ ಯಾರಿಗೂ ಕಾಣಿಸಬಾರೆಂದು ಕರೆತಂದಿದ್ದರು. ಬಳ್ಳಾರಿ ಜೈಲಿಗೆ ಬಂದ ನಟ ದರ್ಶನ್‌ರಿಗೆ ಮೊದಲು ಮೆಡಿಕಲ್ ಚೆಕಪ್‌ಗೆ ಕರೆದೊಯ್ದಲಾಗಿತ್ತು. ಬಳಿಕ ದರ್ಶನ್‌ಗೆ ನಿಗದಿ ಮಾಡಿದ್ದ ಸೆಲ್‌ಗೆ ಬಿಡಲಾಗಿದೆ.

Ad Widget . Ad Widget .

ಬಳ್ಳಾರಿಯಲ್ಲಿ ಜೈಲಿನ ನಿಯಮಗಳನ್ನ ಪಾಲನೆ ಮಾಡಲು ದರ್ಶನ್ಗೆ ಸೂಚನೆ ನೀಡಲಾಗಿದೆ. ಹೀಗಾಗಿಯೇ ದರ್ಶನ್ ಹಾಕಿದ್ದ ಬೆಳ್ಳಿ ಕಡಗ, ಸನ್ಗ್ಲಾಸ್, ಕತ್ತಿನಲ್ಲಿ ಹಾಕಿದ್ದ ಮಣಿ ಸರ ಹಾಗೂ ದಾರವನ್ನು ಪೊಲೀಸರು ಬಿಚ್ಚಿಸಿದ್ದಾರೆ. ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 9ರವರೆಗೆ ಮುಂದಕ್ಕೆ ಹೋಗಿದೆ. ಹೀಗಾಗಿ, ಅಲ್ಲಿವರೆಗೂ ದರ್ಶನ್ ಬಳ್ಳಾರಿ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ.

Leave a Comment

Your email address will not be published. Required fields are marked *