Ad Widget .

ಹುಬ್ಬಳ್ಳಿ: ಜೀವಧ್ವನಿ ಸಂಸ್ಥೆ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳನ್ನು ಕಾಳಜಿ ಮಾಡುವಂತಹ ಕಾರ್ಯಕ್ರಮ

ಸಮಗ್ರ ನ್ಯೂಸ್: ಜೀವಧ್ವನಿ ಸಂಸ್ಥೆ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳನ್ನು ಕಾಳಜಿ ಮಾಡುವಂತಹ ಕಾರ್ಯಕ್ರಮ ನಡೆಯುತ್ತದೆ. ವಿಶೇಷವಾಗಿ ಹಸುಗಳು ಮತ್ತು ನಾಯಿಗಳಿಗೆ ಸುರಕ್ಷಿತೆಯನ್ನು ಒದಗಿಸಲು. 

Ad Widget . Ad Widget .

ಇವರ ಪ್ರಮುಖ ಅಭಿಯಾನಗಳಲ್ಲಿ ಹೆದ್ದಾರಿಗಳಲ್ಲಿ ಆಗುವ ಅಪಘಾತಗಳನ್ನು ತಡೆಯುವುದು, ರಾತ್ರಿ ವೇಳೆ ವಾಹನಗಳ ಜೊತೆ ಘರ್ಷಣೆಗೊಳಗಾಗುವ ಅಪಾಯ ಬೀದಿ ಪ್ರಾಣಿಗಳಿಗೆ ಹೆಚ್ಚು ಇರುತ್ತದೆ ಈ ಸಮಸ್ಯೆಯನ್ನು ಪರಿಹರಿಸಲು ಜೀವಧ್ವನಿ ಸಂಸ್ಥೆ ಹಸುಗಳು ಮತ್ತು ನಾಯಿಗಳ ಕುತ್ತಿಗೆಗೆ ಪ್ರತಿಫಲಕ ಬಟ್ಟೆಗಳನ್ನು (Reflective Belts) ಕಟ್ಟುತ್ತಾರೆ. ಇದರಿಂದ, ವಾಹನ ಚಾಲಕರು ದೂರದಿಂದಲೇ ಈ ಪ್ರಾಣಿಗಳನ್ನು ಗಮನಿಸಲು ಸಾಧ್ಯವಾಗುತ್ತದೆ ಮತ್ತು ಅಪಘಾತಗಳ ಸಂಭವ ಕಡಿಮೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. 

Ad Widget . Ad Widget .

ಈ ಸುರಕ್ಷತಾ ಕ್ರಮದ ಜೊತೆಗೆ, ಜೀವಧ್ವನಿ ಕಾರ್ಯಕರ್ತರು, ಮಧುಮತಿ ಹೆಮಕರ್,ವಿಶ್ವನಾಥ್, ಶಿವಶೀಟರ್ ಪರೋಕ್ಷ ಹೂಲಿ, ರಾಘವೇಂದ್ರ, ಅವಿನಾಶ್ ಇವರುಗಳು ಬೀದಿ ಪ್ರಾಣಿಗಳ ಆರೋಗ್ಯ, ಆಹಾರ, ಮತ್ತು ಆಶ್ರಯವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದಾರೆ. ಇವೆಲ್ಲ ಸೇವೆಗಳು ಬೀದಿ ಪ್ರಾಣಿಗಳ ಜೀವನದ ಸ್ಥಿತಿಯನ್ನು ಸುಧಾರಿಸಲು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *