Ad Widget .

ಹೆತ್ತವರಲ್ಲಿ ಅತ್ಯಾಚಾರ ಎಂದರೇನು? ಎಂದು ಕೇಳಿದ್ದ ಬಾಲಕಿ ಮೇಲೆ ಅತ್ಯಾಚಾರ

ಸಮಗ್ರ ನ್ಯೂಸ್: 14ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನ ನಾಗಾಂವ್ ನಲ್ಲಿ ನಡೆದಿದೆ. ಈ ಘಟನೆಯ ಎರಡು ದಿನದ ಮೊದಲು ತನ್ನ ಚಿಕ್ಕಮ್ಮನ ಬಳಿ ಅತ್ಯಾಚಾರವೆಂದರೇನು ಎಂದು ಆಕೆ ಕೇಳಿದ್ದಳಂತೆ.

Ad Widget . Ad Widget .

ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ತಿಳಿದ ಬಾಲಕಿ ಅತ್ಯಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಳು ಎಂದು ಬಾಲಕಿ ಸಂಬಂಧಿ ತಿಳಿಸಿದ್ದಾರೆ. ಈ ಘಟನೆ ಬಳಿಕ ಮನಸ್ಸು ಛಿದ್ರ ಛಿದ್ರವಾಗಿದೆ ಎಂದಿದ್ದಾರೆ. ಇಷ್ಟೊಂದು ಘೋರ ಘಟನೆ ನಡೆಯುತ್ತದೆ ಎಂದು ಎಂದೂ ಯೋಚಿಸಿರಲಿಲ್ಲ, ಆಕೆಯನ್ನು ರಕ್ಷಣೆ ಮಾಡುವುದರಲ್ಲಿ ನಾನು ಸೋತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.

Ad Widget . Ad Widget .

ಆಕೆ ಪೊಲೀಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಳು, ಆ. 22ರಂದು ಟ್ಯೂಷನ್ನಿಂದ ಹಿಂದಿರುಗುತ್ತಿದ್ದಾಗ ಬಾಲಕಿಯನ್ನು ಎಳೆದೊಯ್ದು ಮನೆಯಿಂದ 1 ಕಿ.ಮೀ ದೂರದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಬಾಲಕಿ ತನ್ನ ಚಿಕ್ಕಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದಳು. ಸಾಮಾನ್ಯವಾಗಿ ಚಿಕ್ಕಮ್ಮನ ಜೊತೆಗೆ ಅಥವಾ ರಿಕ್ಷಾದಲ್ಲಿ ಮನೆಗೆ ಬರುತ್ತಿದ್ದಳು. ಆದರೆ ಅಂದು ಸೈಕಲ್ ನಲ್ಲಿ ಟ್ಯೂಷನ್ಗೆ ಹೋಗಿದ್ದಳು. ಸಂಜೆ 6 ಗಂಟೆ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಕಾಡಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕಂಡು ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಆಕೆಗೆ ನ್ಯಾಯ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಬಾಲಕಿ ತಂದೆ ಗುವಾಹಟಿಯಲ್ಲಿದ್ದಾರೆ, ಅವರು ರ‍್ಥಿಕವಾಗಿ ಅಷ್ಟು ಸಬಲರಲ್ಲದ ಕಾರಣ ಚಿಕ್ಕಮ್ಮನ ಮನೆಗೆ ಓದಲು ಕಳುಹಿಸಿದ್ದರು. ಚಿಕ್ಕಮ್ಮ ತಿಂಗಳಿಗೆ ೧೦ ಸಾವಿರ ರೂ. ಸಂಪಾದಿಸುತ್ತಿದ್ದು, ಶಿಕ್ಷಣ ಹಾಗೂ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದರು.

ಆಸ್ಪತ್ರೆಯಲ್ಲಿ ಮಾತನಾಡಲು ಸಾಧ್ಯವಾಗದ ಮಗಳ ಸ್ಥಿತಿ ನೋಡಿ ತುಂಬಾ ಕಷ್ಟವಾಯಿತು ಎಂದು ತಂದೆ ಹೇಳಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ತಫಾಜುಲ್ ಇಸ್ಲಾಂ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳಕ್ಕೆ ಹಾರಿ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದರು. ಹೆಚ್ಚಿನ ತನಿಖೆ ಮುಂದುವರೆದಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *