Ad Widget .

ಬಂಡಾಜೆ ಫಾಲ್ಸ್, ರಾಣಿಝರಿಗೆ ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ| ಅರಣ್ಯಾಧಿಕಾರಿಯ ಅಮಾನತುಗೊಳಿಸಿ ಆದೇಶ

ಸಮಗ್ರ ನ್ಯೂಸ್: ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯ ಅಧಿಕಾರಿ ಚಂದನಗೌಡ ದ್ಯಾಮನಗೌಡರ ಅವರನ್ನು ಅರಣ್ಯ ಇಲಾಖೆ ಸೋಮವಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೂಡಿಗೆರೆ ತಾಲೂಕಿನ ರಾಣಿಝರಿ ಪ್ರವಾಸಿ ತಾಣದ ಸಮೀಪದಿಂದ ಬಲ್ಲಾಳ ರಾಯನದುರ್ಗ ಮತ್ತು ಬಂಡಾಜೆ ಜಲಪಾತ ವೀಕ್ಷಣೆಗೆ ಚಾರಣಕ್ಕೆ ತೆರಳಲು ಆನ್ಲೈನ್ ಮೂಲಕ 250ರೂ.ಪಾವತಿಸಿ ಕಾಯ್ದಿರಿಸಲು ಅವಕಾಶವಿದೆ.

Ad Widget . Ad Widget . Ad Widget .

ಈ ಚಾರಣದ ಉಸ್ತುವಾರಿಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಆನ್ಲೈನ್ ಟಿಕೆಟ್ ಮಾದರಿಯಲ್ಲೇ ಟಿಕೆಟ್ ಮುದ್ರಿಸಿ ಚಾರಣಿಗರಿಗೆ ನೀಡಿ ಅವರಿಂದ ಹಣವನ್ನು ಪ್ರಿಯತಮೆ ಮೋನಿಕಾ ಎಂಬುವರ ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ ವರ್ಗಾವಣೆ ಮಾಡಿಸಿದ ಆರೋಪ ಚಂದನಗೌಡರ ಮೇಲಿದೆ.

2024ರ ಜೂನ್ ನಲ್ಲಿ ಆನ್ಲೈನ್ ಬುಕಿಂಗ್ ಮಾಡಿರುವ ಪಟ್ಟಿಗೂ ಚಾರಣದ ನೋಂದಣಿ ಪುಸ್ತಕದಲ್ಲಿರುವ ಪಟ್ಟಿಗೂ ತಾಳೆಯಾಗಿಲ್ಲ. ಒಂದು ಬುಕಿಂಗ್ ಐಡಿಯನ್ನು ನಕಲು ಮಾಡಿ ಹತ್ತಕ್ಕೂ ಹೆಚ್ಚು ನಕಲಿ ಟಿಕೆಟ್ ಮುದುರಿಸಿರುವುದು ಈ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಇದನ್ನು ಆಧರಿಸಿ ಚಂದನಗೌಡ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಆದೇಶ ಹೊರಡಿಸಿದ್ದಾರೆ.

Leave a Comment

Your email address will not be published. Required fields are marked *