Ad Widget .

ಪರಪ್ಪನ ಅಗ್ರಹಾರ ಜೈಲಲ್ಲ; ಸ್ವರ್ಗ, ಹಣ ಕೊಟ್ರೆ ಇಲ್ಲಿ ಎಲ್ಲವೂ ಸಿಗುತ್ತೆ!! ಮಾಜಿ ಖೈದಿಯಿಂದ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ಪರಪ್ಪನ ಅಗ್ರಹಾರ ಜೈಲಲ್ಲ ಸ್ವರ್ಗ, ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ . ಮಾದ್ಯಮವೊಂದಕ್ಕೆ ಜೈಲಿನಿಂದ ಬಿಡುಗಡೆಯಾದ ಕೈದಿಯೋರ್ವ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು ಮಾಡಿದ್ದಾನೆ.

Ad Widget . Ad Widget .

ಹಾಸಿಗೆಯ ಬೆಡ್ ಶೀಟ್ ನೊಳಗೆ ಮೊಬೈಲ್ ಅಡಗಿಸಿಡಲಾಗುತ್ತದೆ. ನೆಟ್ ವರ್ಕ್ ಸಿಗದಂತೆ ಜಾಮರ್ ಅಳವಡಿಸಿದ್ರೂ ಗೋಡೆಗೆ ಮೊಬೈಲ್ ತಾಗಿಸಿದ್ರೆ ನೆಟ್ ವರ್ಕ್ ಸಿಗುತ್ತದೆ ಎಂದು ಹೇಳಿದ್ದಾರೆ.

Ad Widget . Ad Widget .

ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ಪರಪ್ಪನ ಅಗ್ರಹಾರ ಜೈಲಲ್ಲ ಸ್ವರ್ಗ. ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ಬಡ್ಡಿ ದಂಧೆ ನಡೆಯುತ್ತದೆ. ನಿಮಗೆ ಎಣ್ಣೆ ಬೇಕಾ ..? ಗಾಂಜಾ ಬೇಕಾ..? ಎಲ್ಲವೂ ಕೂಡ ಇಲ್ಲಿ ಸಿಗುತ್ತದೆ. ಹೊರಗಡೆಯಿಂದ ಚಿಕನ್ ಮಟನ್ ತರಿಸಿಕೊಳ್ಳಬಹುದು.. ನಾನು ಈ ಸೌಲಭ್ಯ ಪಡೆಯಲು 1.30 ಲಕ್ಷ ಕೊಟ್ಟಿದ್ದೇನೆ.. ಯಾವ ರೂಮಿನಲ್ಲೂ ಸಿಸಿ ಕ್ಯಾಮೆರಾ ಇಲ್ಲ..ಹೊರಗಡೆ ಆವರಣದಲ್ಲಿ ಮಾತ್ರ ಇದೆ..ಎಂದು ಜೈಲಿನಿಂದ ಬಿಡುಗಡೆಯಾದ ಖೈದಿ ಹೇಳಿದ್ದಾರೆ.

ಜೈಲಿನಲ್ಲಿ ಬಡ್ಡಿ ದಂಧೆ ನಡೆಯತ್ತಿದೆ. 35 ಸಾವಿರ ಕೊಟ್ಟರೆ ಹುಡುಗಿಯರನ್ನೂ ಸಹ ಕಳುಹಿಸುತ್ತಾರೆ ಎಂದು ಬಿಡುಗಡೆಯಾದ ಖೈದಿ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ವಿಚಾರ ಬಯಲಾಗುತ್ತಿದ್ದಂತೆ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಾಗಿದೆ. ಒಂದಲ್ಲ ಎರಡಲ್ಲ ಹಲವು ಕರ್ಮಕಾಂಡಗಳು ಜೈಲಿನಲ್ಲಿ ನಡೆಯುತ್ತಿದೆ. ಜೈಲಿನಲ್ಲಿ ಇಂತಹ ಫೆಸಿಲಿಟಿ ಇದ್ದರೆ ಯಾವ ಆರೋಪಿ ತಾನೆ ಜೈಲಿಗೆ ಹೋಗೋಕೆ ಹೆದರುತ್ತಾನೆ..?

Leave a Comment

Your email address will not be published. Required fields are marked *