ಆಲಂಕಾರು: ಆ.30ರಂದು ಹಿಂದೂ ಜಾಗರಣ ವೇದಿಕೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ 9 ನೇ ವರ್ಷದ ಅಟ್ವಿ ಮಡಿಕೆ ಒಡೆಯುವ ಉತ್ಸವ

ಸಮಗ್ರ ನ್ಯೂಸ್: ಆಲಂಕಾರು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 9 ನೇ ವರ್ಷದ ಅಟ್ವಿ ಮಡಿಕೆ ಒಡೆಯುವ ಉತ್ಸವವು ಆ.30ರಂದು ಮಧ್ಯಾಹ್ನ ಗಂಟೆ 2.30 ರಿಂದ ಆಲಂಕಾರು ಪೇಟೆಯಲ್ಲಿ ನಡೆಯಲಿದೆ.

Ad Widget ... ..

ಆಲಂಕಾರು ವರ್ತಕ ಸಂಘದ ಅಧ್ಯಕ್ಷರು ಮತ್ತು ಉದ್ಯಮಿ ಲಕ್ಷ್ಮೀನಾರಾಯಣ ಪ್ರಭು ಉದ್ಘಾಟನೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

Ad Widget

ಕಾರ್ಯಕ್ರಮಗಳು ಸಾರ್ವಜನಿಕ ಅಟ್ಟಿ ಮಡಿಕೆ ಒಡೆಯುವುದು, ಶ್ರೀ ಭಾರತಿ ಶಾಲೆಯ ಪುಟಾಣಿ ಮಕ್ಕಳ ಶ್ರೀ ಕೃಷ್ಣ ವೇಷದ ಅಕರ್ಷಕ ಮೆರವಣಿಗೆ, 5ವರ್ಷದ ಒಳಗಿನ ಪುಟಾಣಿಗಳಿಗೆ ಸಂಜೆ ಗಂಟೆ 5:00ರಿಂದ ಶ್ರೀ ಕೃಷ್ಣನ ವೇಷ ಸ್ಪರ್ಧೆ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಲಂಕಾರು ಘಟಕ ಇದರ ವತಿಯಿಂದ ಟೀಂ ಶಬರಿ ಟೈಗರ್ಸ್ ನಾಸಿಕ್ ಕ್ರೀವ್ ಪುತ್ತೂರು ಇದರಿಂದ ಪ್ರದರ್ಶನ ನಡೆಯಲಿದೆ.

(ಭಾಗವಹಿಸುವ ತಂಡಗಳು ದಿನಾಂಕ 28-08-2024ನೇ ಬುಧವಾರದ ಒಳಗೆ ಹೆಸರು ನೋದಾಯಿಸಿಕೊಳ್ಳತಕ್ಕದ್ದು. ನಂತರ ಬಂದ ತಂಡಗಳನ್ನು ಪರಿಗಣಿಸಲಾಗುವುದಿಲ್ಲ.
ಸಂಪರ್ಕ ಸಂಖ್ಯೆ
ಮಲ್ಲೇಶ : 9945399526,
ರಿತೇಶ: 9591721890,
ಜನಾರ್ಧನ ಕಯ್ಯಪೆ : 9008964548)

Leave a Comment

Your email address will not be published. Required fields are marked *