Ad Widget .

ಪಾಕ್‌ನಲ್ಲಿ ಉಗ್ರರ ದಾಳಿ | ಬಸ್ಸಿನಿಂದ ಇಳಿಸಿ ಗುರುತು ಪರಿಶೀಲಿಸಿ 23 ಮಂದಿ ಶೂಟೌಟ್

ಸಮಗ್ರ ನ್ಯೂಸ್: ಪಾಕಿಸ್ತಾನದ ಬಲೂಚಿಸ್ತಾನ್ ಮುಸಾಖೆಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಗೆ 23 ಜನರು ಸಾವನ್ನಪ್ಪಿರುವ ಬಗ್ಗೆ ವರಿಯಾಗಿದೆ.

Ad Widget . Ad Widget .

ಭಯೋತ್ಪಾದಕರು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಲು ಒತ್ತಾಯಿಸಿ, ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದ್ದಾರೆ. ಮುಸಖೇಲ್‌ನ ರಾರಶಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಅಂತರ-ಪ್ರಾಂತೀಯ ಹೆದ್ದಾರಿಯನ್ನು ತಡೆದು ಪ್ರಯಾಣಿಕರನ್ನು ಬಸ್‌ಗಳಿಂದ ಕೆಳಗಿಳಿಸಿದರು ಎಂದು ಸಹಾಯಕ ಕಮಿಷನರ್ ಮುಸಖೈಲ್ ನಜೀಬ್ ಕಾಕರ್ ಉಲ್ಲೇಖಿಸಿ ಡಾನ್ ವರದಿ ಮಾಡಿದೆ.

Ad Widget . Ad Widget .

ಮೃತರು ಪಂಜಾಬ್ ಮೂಲದವರು ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಉಗ್ರರು 10 ವಾಹನಗಳಿಗೆ ಬೆಂಕಿ ಹಚ್ಚಿದ್ದು, ಇಲ್ಲಿಯವರೆಗೆ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಯನ್ನು ಖಂಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಮೃತರ ಕುಟುಂಬಗಳಿಗೆ ಸಹಾನುಭೂತಿ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಫೆಡರಲ್ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್, ಮುಸಖೈಲ್ ಬಳಿ ಮುಗ್ಧ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ನಡೆಸಿರುವ ದಾಳಿ ಭಯೋತ್ಪಾದಕರ ಕ್ರೂರತೆಯನ್ನು ತೋರಿಸಿದೆ. ಭಯೋತ್ಪಾದಕರು ಮತ್ತು ಅವರ ಸಹಾಯಕರನ್ನು ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಸುಮಾರು ನಾಲ್ಕು ತಿಂಗಳ ಹಿಂದೆ ಇದೇ ರೀತಿಯ ಕ್ರೂರ ಘಟನೆ ನಡೆದಿತ್ತು. ಏಪ್ರಿಲ್‌ನಲ್ಲಿ ಒಂಬತ್ತು ಪ್ರಯಾಣಿಕರನ್ನು ನೋಶ್ಕಿ ಬಳಿ ಬಸ್‌ನಿಂದ ಬಲವಂತವಾಗಿ ಹೊರ ಕರೆದು ಬಂದೂಕುಧಾರಿಗಳು ಐಡಿ ತಪಾಸಣೆಯನ್ನು ಮಾಡಿ, ಗುರುತನ್ನು ಪರಿಶೀಲಿಸಿದ ಬಳಿಕ ಹತ್ಯೆ ಮಾಡಿದ್ದರು ಎಂದು ಡಾನ್ ವರದಿ ಮಾಡಿದೆ.

Leave a Comment

Your email address will not be published. Required fields are marked *