Ad Widget .

ಪುತ್ತೂರು: ಚೂರಿ ಇರಿತ ಪ್ರಕರಣದ ವಿದ್ಯಾರ್ಥಿಗಳಿಬ್ಬರ ಮನೆಗೆ ಶಾಸಕ ಅಶೋಕ್ ರೈ ಭೇಟಿ

ಸಮಗ್ರ ನ್ಯೂಸ್: ಪುತ್ತೂರಿ‌ನ ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯು ಸಹ ಪಾಠಿ ವಿದ್ಯಾರ್ಥಿ ವಿರುದ್ಧ ಚೂರಿ ಇರಿತದ ಆರೋಪದ ಬಗ್ಗೆ ತನಿಖೆ ನಡೆಯು ತ್ತಿದ್ದು, ಶಾಸಕ ಅಶೋಕ್‌ ಕುಮಾರ್‌ ರೈ ವಿದ್ಯಾರ್ಥಿಗಳಿಬ್ಬರ ಮನೆಗೂ ಭೇಟಿ ನೀಡಿದರು.

Ad Widget . Ad Widget .

ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಯತೀಶ್‌ ಎನ್‌. ಬಳಿ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಕಾಲೇಜಿನಲ್ಲಿ ಏನು ಘಟನೆ ನಡೆದಿದೆಯೋ ಅದರ ಬಗ್ಗೆ ಕೂಲಂಕಷವಾಗಿ, ನ್ಯಾಯಯುತವಾಗಿ ತನಿಖೆ ನಡೆಸಬೇಕು. ಇದರಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ. ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರ ತನ್ನಿ. ಘಟನೆಯ ಬಗ್ಗೆ ಜನರಲ್ಲಿ ಯಾವುದೇ ಸಂಶಯ ಸೃಷ್ಟಿಯಾಗಬಾರದು ಎಂದು ಸೂಚನೆ ನೀಡಿದರು.

Ad Widget . Ad Widget .

ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್‌ ಬಡಗನ್ನೂರು, ಕಬಕ ವಲಯ ಕಾಂಗ್ರೆಸ್‌ ಅಧ್ಯಕ್ಷ ನಾಸಿರ್‌ ಕೋಲ್ಪೆ, ಕಾಂಗ್ರೆಸ್‌ ಮುಖಂಡ ರೋಶನ್‌ ರೈ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *