Ad Widget .

ಸದ್ಯದಲ್ಲೇ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ರಿಲೀಸ್| ಆನಂದ ನ್ಯಾಮಗೌಡರಿಂದ ಹೊಸ ಬಾಂಬ್

ಸಮಗ್ರ ನ್ಯೂಸ್: ಸದ್ಯದಲ್ಲೇ ಬಿಜೆಪಿ ಮಾಜಿ ಸಿಎಂ ಅವರ ಅಶ್ಲೀಲ ವಿಡಿಯೋ ಹೊರಬರಲಿದೆ ಎಂದು ಜಮಖಂಡಿಯ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಆನಂದ ನ್ಯಾಮಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಈ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಆನಂದ ನ್ಯಾಮಗೌಡ ಅವರು ಹೇಳಿದ ಆ ಬಿಜೆಪಿ ಮಾಜಿ ಸಿಎಂ ಯಾರು ಎನ್ನುವ ಪ್ರಶ್ನೆಗಳು ಉದ್ಬವಿಸಿವೆ.

Ad Widget . Ad Widget .

ರಮೇಶ್ ಜಾರಕಿಹೊಳಿ ಹಾಗೂ ಪ್ರಜ್ವಲ್ ರೇವಣ್ಣ ಬಳಿಕ ಮತ್ತೆ ಸಿಡಿ ವಿಚಾರ ಸದ್ದು ಮಾಡಿದೆ. ಇಂದು ಜಮಖಂಡಿಯಲ್ಲಿ ಪ್ರತಿಭಟನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ ನ್ಯಾಮಗೌಡ ಅವರು, ‘ಇವತ್ತು ಒಂದು ಹೊಸ ಸುದ್ದಿ ಬಂದಿದೆ. ಅದನ್ನು ನಾನು ಇವತ್ತು ಕೇಳಿದಿನಿ. ಅದೇನಾಪ್ಪಾ ಅಂದ್ರೆ, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಒಂದು ಅಶ್ಲೀಲ ಸಿಡಿ ಹೊರಗೆ ಬರೋದಿದೆ. ಆಶ್ಲೀಲ ಸಿಡಿ ಬಿಜೆಪಿಯವರದ್ದೇ’ ಎಂದಿದ್ದಾರೆ.

Ad Widget . Ad Widget .

ಬಿಜೆಪಿ ಮಾಜಿ ಮುಖ್ಯಮಂತ್ರಿಯ ಅಶ್ಲೀಲ ಸಿಡಿ ಶೀಘ್ರದಲ್ಲಿ ಬಿಡುಗಡೆಯಾಗುತ್ತೆ ಅಂತ ಇವತ್ತು ಕೇಳಿದಿನಿ. ಆದರೆ ಆ ಮಾಜಿ ಸಿಎಂ ಯಾರು ಎಂಬುವುದರ ಬಗ್ಗೆ ಹೆಸರು ಬಹಿರಂಗಪಡಿಸಲಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನೆಲೆ ರಾಜ್ಯಪಾಲರ ನಡೆ ಖಂಡಿಸಿ ನಡೆದ ಪ್ರತಿಭಟನಾ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *